ಸುರತ್ಕಲ್: ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕರಂಬಾರು ಇಲ್ಲಿ 75 ನೇ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು, ಧ್ವಜಾರೋಹಣವನ್ನು ಎಸ್ ಡಿಎಂಸಿ ಅಧ್ಯಕ್ಷರಾದ ಗುಣಪಾಲ್ ದೇವಾಡಿಗ ನೆರವೇರಿಸಿ ಮಾತನಾಡುತ್ತ ಭಾರತದ ಸಂವಿಧಾನ ಜಾರಿಗೆ ಬಂದ ಈ ಮಹತ್ವದ ದಿನದಂದು ಅದರ ಪ್ರಧಾನ ಶಿಲ್ಪಿಗಳಾದ ಡಾ, ಅಂಬೇಡ್ಕರ್ ಅವರನ್ನ ನೆನೆಯೋಣ.
ಭಾರತದ ಸಂವಿಧಾನವು ಪ್ರತಿಪಾದಿಸುವ ಮೌಲ್ಯಗಳನ್ನು ಪಾಲಿಸೋಣ ಹಾಗೂ ಸಂರಕ್ಷಿಸೋಣ ಎಂದು ಹೇಳಿದರು.
ಮುಖ್ಯ ಅತಿಥಿ ಗಳಾಗಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸತೀಶ್ ದೇವಾಡಿಗ, ಉಪಾಧ್ಯಕ್ಷರಾದ ರಾಕೇಶ್ ಕುಂದರ್,
ಪ್ರಧಾನ ಕಾರ್ಯದರ್ಶಿ ಪ್ರವೀಣ್ ಆಚಾರ್ಯ, ಎಸ್ ಡಿಎಂಸಿ ಉಪಾಧ್ಯಕ್ಷರಾದ ಲಾವಣ್ಯ, ಯುವವಾಹಿನಿ (ರಿ ) ಕೆಂಜಾರು ಕರಂಬಾರು ಅಧ್ಯಕ್ಷರಾದ ವಿನೋದ್ ಅರ್ಬಿ, ಮಾಜಿ ಎಸ್ ಡಿಎಂಸಿ ಅಧ್ಯಕ್ಷರಾದ ರಾಘವೇಂದ್ರ. ಎಸ್, ನಮ್ಮ ಜವನೆರ್ ಅಧ್ಯಕ್ಷರಾದ ಗ್ರೇಶನ್ ಡಿಕೋಸ್ಟ, ನಮ್ಮ ಜವನೆರ್ ಗೌರವಧ್ಯಕ್ಷರಾದ ರಮೇಶ್ ಸುವರ್ಣ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಉಷಾ ಕಿರಣ ಸ್ವಾಗತಿಸಿದರು. ಮಾಲಾಶ್ರೀ ಕಾರ್ಯಕ್ರಮ ನಿರೂಪಿಸಿದರು. ಗೀತಾ ವಂದಿಸಿದರು.