ಮಂಗಳೂರು: ಕಿನ್ನಿಗೋಳಿ ಐಕಳ ಬಳಿ ರಾಜ್ಯ ಹೆದ್ದಾರಿಯಿಂದ ಕೂಗಳತೆ ದೂರದಲ್ಲಿ ರಾಜಾರೋಷವಾಗಿ ಅಕ್ರಮ ಕಪ್ಪು ಕಲ್ಲು ಕೋರೆ ಕಾರ್ಯಾಚರಿಸುತ್ತಿದೆ. ಐಕಳ ದಾಟಿ ಮುಂದೆ ಹೋಗುವಾಗ ಕೋರ್ದಬ್ಬು ದೈವಸ್ಥಾನ ಇದ್ದು ಅಲ್ಲಿಂದ ಮುಂದೆ ಎಡಗಡೆಗೆ ರಸ್ತೆಯಲ್ಲಿ ಹೋದರೆ ಬಳ್ಳಾರಿಗೆ ಕಾಲಿಟ್ಟ ಅನುಭವ ಆಗುತ್ತಿದೆ. ದಿನವೊಂದಕ್ಕೆ ರಾತ್ರಿ ಹಗಲು ನೂರಾರು ಲೋಡ್ ಗಳಷ್ಟು ಕಲ್ಲು ಸಾಗಾಟ ಆಗ್ತಾ ಇದ್ರೂ ಪೊಲೀಸರು ಗಣಿ ಇಲಾಖೆ ಅಧಿಕಾರಿಗಳು ಇತ್ತ ಕಣ್ತೆರೆದು ನೋಡುತ್ತಿಲ್ಲ.
ಗಣಿಗಾರಿಕೆ ನಡೆಸಲು ಪರ್ಮಿಟ್ ಲ್ಯಾಪ್ಸ್ ಆಗಿ ಹಲವು ವರ್ಷಗಳೇ ಕಳೆದಿದ್ದರೂ ಇನ್ನೂ ಅಕ್ರಮ ದಂಧೆಗೆ ಕಡಿವಾಣ ಬಿದ್ದಿಲ್ಲ. ಲಾರಿಗಳ ಓಡಾಟದಿಂದ ರಸ್ತೆ ಸಂಪೂರ್ಣ ಹಾಳಾಗಿದೆ. ಈ ಬಗ್ಗೆ ಗಮನ ನೀಡುವವರು ಯಾರು? ಎನ್ನುವುದು ಸಾರ್ವಜನಿಕರ ದೂರು. ಗಣಿ ಇಲಾಖೆ ಅಧಿಕಾರಿಗಳು ಪೊಲೀಸ್ ಇಲಾಖೆ ಅಕ್ರಮ ದಂಧೆಯಲ್ಲಿ “ಪಾಲು” ಪಡೆದಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.