ಮೆಡಿಕವರ್ ಆಸ್ಪತ್ರೆಯ ಸಾಧನೆ, ಯುವತಿಗೆ ಪುನರ್ಜನ್ಮ ನೀಡಿದ ಹೃದಯ ತಜ್ಞ!

ಬೆಂಗಳೂರು ವೈಟ್ ಫೀಲ್ಡ್: 22 ವರ್ಷದ ಯುವತಿಗೆ ಅಪರೇಷನ್ ಮಾಡಿ, ಎರಡೇ ದಿನದಲ್ಲಿ ದೈನಂದಿನ ಸ್ಥಿತಿಗೆ ಬರುವಂತೆ ಮಾಡುವಲ್ಲಿ ಮೆಡಿಕವರ್‌ ಆಸ್ಪತ್ರೆಯ ಹೃದಯ ತಜ್ಞ‌ರ ತಂಡ ಯಶಸ್ವಿಯಾಗಿದೆ.

ಸುಮಾರು ದಿನಗಳಿಂದ ಎಡಗಾಲಿನಲ್ಲಿ ಊತ ಕಂಡುಬಂದಿದ್ದ ಕಾರಣ ನಡೆಯಲಾಗದೇ ಹಾಸಿಗೆಯಲ್ಲೆ ಬಳಲುತ್ತಾ ಇದ್ದ ರೋಗಿಗೆ ಅಪರೇಷನ್‌ ಮಾಡಿ ಎರಡೇ ದಿನದಲ್ಲಿ ಎದ್ದು ಓಡಾಡುವಂತೆ ಮಾಡಿದ್ದಾರೆ ವೈಟ್‌ ಫಿಲ್ಡ್‌ ನಲ್ಲಿರುವ ಮೆಡಿಕವರ್‌ ಆಸ್ಪತ್ರೆಯ ಹೃದಯ ತಜ್ಞ ಡಾ. ರಾಮ್‌ ನರೇಶ್‌ ಸೌದ್ರಿ.

22ವರ್ಷದ ಯುವತಿಗೆ ಕಾಲಿನಲ್ಲಿಊತ ಶುರುವಾಗಿದ್ದು, ನೋವಿನಲ್ಲಿ ಬೆಡ್‌ ಇಂದ ಮೇಲೆ ಎಳೆಲು ಕಷ್ಟವಾಗುತ್ತಾ ಇತ್ತು , ಸುಮಾರು 12 ದಿನಗಗಳೀಗೂ ಹೆಚ್ಚು ಕಾಲ ಹಾಸಿಗೆಯಿಂದ ಮೇಲೆಳಲು ಕಷ್ಟ ಪಡುತ್ತಾ ಇದ್ದರು . ಅಷ್ಟೇ ಅಲ್ಲದೇ ನೋವಿನಿಂದ ಉಸಿರಾಟದ ತೊಂದ್ರೆ ಕೂಡ ಶುರುವಾಗಿತ್ತು . ಅವರು ಕೂಡದೇ ಮೆಡಿಕವರ್‌ ಆಸ್ಪತ್ರೆಗೆ ಬಂದು ಡಾ. ರಾಮ್‌ ನರೇಶ್‌ ಸೌದ್ರಿಯವರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದರು .


ಅವರನ್ನು ಪರೀಕ್ಷೆ ಮಾಡಿದ ಬಳಿಕ ಪಡೆದ ಬಳಿಕ ಅವರ ಎಡ ಗಾಲಿನ ಕಾಲಿನಲ್ಲಿ ರಕ್ತ ಗೆಪ್ಪುಗಟ್ಟಿದ್ದು, ಹೃದಯದಿಂದ ಶ್ವಾಸಕೋಶದ ಪಲ್ಮನರಿವರೆಗೆ ಬ್ಲಾಕೇಜ್‌ ಆಗಿರೋದು ತಿಳಿದುಬಂದಿದೆ. ಅಲ್ಲದೇ ಎಡ ಗಾಲಿನ ರಕ್ತನಾಳ ಸಂಪೂರ್ಣ ಹೆಪ್ಪುಗಟ್ಟಿದ್ದು, ರಕ್ತ ಸಂಚಲನಕ್ಕೆ ಜಾಗ ಇಲ್ಲದೇ ಜಾಮ್‌ ಆಗಿತ್ತು . ಹಾಗಾಗೀ ಶ್ವಾಸಕೋಶದಲ್ಲಿ ರಕ್ತ ಸಂಚಲನ ಫುಲ್‌ ಬಂದ್‌ ಆಗಿತ್ತು. ರಕ್ತ ಕರಗಿಸೋಕೆ ಇಂಜೆಕ್ಚನ್‌ ನೀಡಿದ್ರೂ ರೋಗಿಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಬಳಿಕ ಅವರಿಗೆಸಿಟಿ ವಿನೋಗ್ರಾಮ್‌ ನಡೆಸಲಾಯ್ತು, ಅದರಲ್ಲಿ ಅವರಿಗೆ ಥ್ರಂಬೋಸಿಸ್‌ ಖಾಯಿಲೆ ಇರೋದು ತಿಳಿದು ಬಂದಿದೆ. ಅದಕ್ಕಾಗಿ ಪಲ್ಮನರಿ ಎಂಬೋಲೆಕ್ಟಮಿ ಹಾಗೂ ವೀಸನ್‌ ಥ್ರಂಬೆಕ್ಟಮಿ ಅಪರೇಷನ್‌ ಮಾಡಿಸುವ ಅಗತ್ಯತೆಯನ್ನು ಹೃದಯ ತಜ್ಞ ಡಾ ರಾಮ್‌ ನರೇಶ್‌ ಸೌದ್ರಿ ರೋಗಿಗೆ ತಿಳಿಸಿದ್ದಾರೆ.

ರೋಗಿಯ ಸಮಸ್ಯೆಗೆ ಕಾರಣವೇನೆಂದು ಹುಡುಕುತ್ತಾ ಇದ್ದ ವೈದ್ಯರಿಗೆ ತಿಳಿದು ಬಂದಿದ್ದು , ಅವರು ಹಾರ್ಮೋನಲ್‌ ಚಿಕಿತ್ಸೆ ಪಡೆಯುತ್ತಾ ಇದ್ದರು ಅನ್ನೋದು . ಅದರ ಪರಿಣಾಮವಾಗಿ ರೋಗಿಯೂ ಇಷ್ಟೊಂದು ಸಮಸ್ಯೆ ಎದುರಿಸ್ತಾ ಇರೋದು . ಹಾಗಾಗೀ ಅವರಿಗೆ ಅಪರೇಷನ್‌ ನಡೆಸಲಾಯ್ತು . ಮೊದಲಿಗೆ ಶ್ವಾಸಕೋಶದಲ್ಲಿ ಉಂಟಾಗಿರುವ ರಕ್ತದ ಕ್ಲಾಟನ್ನು ತೆಗೆದು ಬಳಿಕ ಐವಿಸಿ ಫಿಲ್ಟರ್‌ ಹಾಕಿ ಎಡಗಾಲಿನಲ್ಲಿನ ರಕ್ತನಾಳದಲ್ಲಿ ಹೆಪ್ಪುಗಟ್ಟಿರುವ ರಕ್ತವನ್ನು ತೆಗೆದು ಹಾಕಿಲಾಯ್ತು. ಬಳಿಕ ಅವರನ್ನು ಐಸಿಯು ಇಂದ ವಾರ್ಡ್‌ಗೆ ಒಂದೇ ದಿನದಲ್ಲಿ ಶಿಫ್ಟ್‌ ಮಾಡಲಾಗಿದೆ . ಮರುದಿನವೇ ಅವರು ಎಂದಿನಂತೆ ನಡೆಯುವುದಕ್ಕೆ ಅವಕಾಶವಾಗಿದೆ.
ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಇಲ್ಲದೇ ಎಂದಿನಂತೆ ಯುವತಿಯೂ ತಮ್ಮ ದೈನಂದಿನ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದ ಹೃದಯ ತಜ್ಞ ಡಾ. ರಾಮ್‌ ನರೇಶ್‌ ಸೌದ್ರಿ .

error: Content is protected !!