ಸ್ನೇಹಾಲಯ ಪುನರ್ವಸತಿ ಕೇಂದ್ರದಲ್ಲಿ “ಸ್ನೇಹ ಮಿಲನ-2024“


ಮಂಜೇಶ್ವರ
: ಸ್ನೇಹಾಲಯ ಸೈಕೊ ಸೋಶಿಯಲ್ ಪುನರ್ವಸತಿ ಕೇಂದ್ರ ಮಂಜೇಶ್ವರಂದಲ್ಲಿ “ಸ್ನೇಹ ಮಿಲನ-2024 ” ಎಂಬ ಕ್ರಿಸ್‌ಮಸ್ ಕಾರ್ಯಕ್ರಮವನ್ನು ದಿನಾಂಕ 21 ಡಿಸೆಂಬರ್ 2024 ರಂದು ಆಚರಿಸಲಾಯಿತು ಸ್ನೇಹಾಲಯದ ವಾರ್ಷಿಕ ಕ್ರಿಸ್‌ಮಸ್ ಆಚರಣೆಯು ನಿವಾಸಿಗಳಲ್ಲಿಹೊಸ ಉತ್ಸಾಹವನ್ನು ಜೀವಂತವಾಗಿರಿಸಿತು. ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಪೊಲೀಸ್ ಮುಖ್ಯಸ್ಥರಾದ ಶಿಲ್ಪಾ ದ್ಯಾವಯ್ಯ ಐಪಿಎಸ್, ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರು ಹಾಗೂ ಅಧೀಕ್ಷಕರಾದ ಡಾ.ಶಿವಪ್ರಕಾಶ್ ಡಿ.ಎಸ್ ಸೇರಿದಂತೆ ಗೌರವಾನ್ವಿತ ಅತಿಥಿಗಳು ಉಪಸ್ಥಿತರಿದ್ದರು.

ಹೊಸಂಗಡಿಯ ಇನ್‌ಫೆಂಟ್ ಜೀಸಸ್ ಚರ್ಚ್‌ನ ಧರ್ಮಗುರು ಫಾ. ಲೋಯಸ್ ಮರಿಯದಾಸ್, ಸ್ನೇಹಾಲಯದ ನಿವಾಸಿ ಗುರುಗಳಾದ ಫಾ. ಸಿರಿಲ್ ಡಿ ಸೋಜಾ, ಫಾರ್ಚೂನ್ ಲೈಫ್ ವೆಲ್ತ್ ಪ್ರೈವೇಟ್ ಲಿಮಿಟೆಡ್ ದೆಹಲಿ, ನಿರ್ದೇಶಕರಾದ ಮತ್ತು PTI ಕನ್ಸಲ್ಟೆನ್ಸಿ ಬಾಂಬೆಯ ಮಾಲೀಕರಾದ ಶ್ರೀ ಜೋಸೆಫ್ ಇಲಿಯಾಸ್ ಮಿನೇಜಸ್. ಮತ್ತು ಮಂಗಳೂರಿನ ಪ್ರೇರಕ ಭಾಷಣಕಾರರಾದ ಶ್ರೀ ರಫೀಕ್ ಮಾಸ್ಟರ್ ಸಂಭ್ರಮದ ಗೌರವ ಅತಿಥಿಗಳಾಗಿದ್ದರು . ಮಂಗಳೂರಿನ ಜಿಜಿ100 ಕೋರಸ್ ತಂಡ ಸುಂದರ ಕ್ರಿಸ್ಮಸ್ ಸಂಗೀತದೊಂದಿಗೆ ಸಭಿಕರನ್ನು ರಂಜಿಸಿತು.

ಕಾರ್ಯಕ್ರಮವನ್ನು ಶ್ರೀಯುತ ಜಿಯೋ ಡಿಸಿಲ್ವಾ ಅದ್ಭುತವಾಗಿ ರಸವತ್ತಾಗಿ ನಿರೂಪಿಸಿದರು. ಸ್ನೇಹಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಜೋಸೆಫ್ ಕ್ರಾಸ್ತಾ ಕಾರ್ಯಕ್ರಮಕ್ಕೆ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳ ಜೊತೆ ಸಂಭ್ರಮಕ್ಕೆ ಚಾಲನೆ ನೀಡಿದರು.

ಅತಿಥಿಗಳು ಕ್ರಿಸ್ಮಸ್ ಕೇಕ್ ಕತ್ತರಿಸಿ ಸಾಂತಕ್ಲೋಸ್ ಸಮ್ಮುಖದಲ್ಲಿ ಎಲ್ಲರಿಗೂ ಸಿಹಿ ಹಂಚಿದರು. ಕಾರ್ಯದರ್ಶಿ ಕಮ್ ಟ್ರಸ್ಟಿ ಶ್ರೀಮತಿ ಒಲಿವಿಯಾ ಕ್ರಾಸ್ತಾ ಅವರು ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.

ಇದು ಹೃದಯಸ್ಪರ್ಶಿ ಮತ್ತು ಸಂತೋಷದಾಯಕ ಆಚರಣೆಯಾಗಿದ್ದು, ಹಾಜರಿದ್ದ ಎಲ್ಲರ ಮುಖದಲ್ಲಿ ನಗುವನ್ನು ತಂದಿತು. ಪ್ರತಿಯೋರ್ವ ಅತಿಥಿಯರ ಅಮೋಘ ಸಂದೇಶ ಮಾನಾವಿಯತೆ, ದಾನ, ಪ್ರೀತಿ, ಸಮಾಜಿಕ ನ್ಯಾಯ ಹಾಗೂ ಹಂಚುವಿಕೆ ಬಗ್ಗೆ ಇದ್ದು ಸ್ನೇಹಾಲಯದ ಕೆಲಸವನ್ನು ಶ್ಲಾಫೀಸಿ ಹೊಗಳಿದರು. ಕ್ರಿಸ್ಮಸ್ ಹೊಸ ಅಲೆಯನ್ನು ಪರಿಸರದಲ್ಲಿ ಸೃಷ್ಠಿಸಿತು

error: Content is protected !!