ಚಳಿಗಾಲ ಬರ್ತಾ ಇದ್ದ ಹಾಗೆ ಹೆಣ್ಣಳ್ಳು ತಮ್ಮ ತ್ವಚೆ ಬಗ್ಗೆ ಹೆಚ್ಚು ಚಿಂತೆ ಮಾಡೋದಕ್ಕೆ ಶುರುಮಾಡುತ್ತಾರೆ. ತಮ್ಮ ಸ್ಕೀನ್ ಬಗ್ಗೆ ಸಾಕಷ್ಟು ಕಾಳಜಿ ಇದ್ರೂ , ಎಷ್ಟೋ ಜನರಿಗೆ ಚಳಿಗಾಲದಲ್ಲಿ ತ್ವಚೆಯನ್ನು ಹೇಗೆ ಕಾಪಾಡಿಕೊಳ್ಳಬೇಕು ಅನ್ನೋದು ಗೊತ್ತಿರೋದಿಲ್ಲ . ಯಾವೆಲ್ಲಾ ಸ್ಕೀನ್ ಕೇರ್ ಬಳಕೆ ಮಾಡಿದ್ರೆ ತ್ವಚೆಯ ಸೌಂದರ್ಯವನ್ನು ಕಾಪಾಡಬಹುದು ಅನ್ನೋದು ಒಂದು ದೊಡ್ಡ ತಲೆನೋವೇ ಆಗುತ್ತದೆ . ಅದಕ್ಕಾಗಿ ಮೆಡಿಕವರ್ ಆಸ್ಪತ್ರೆಯ ಚರ್ಮರೋಗ ತಜ್ಞೆ ಡಾ. ರಜಿತಾ ಅಲ್ಲೂರಿ ಕೆಲವೊಂದು ಸಿಂಪಲ್ ಟಿಪ್ಸ್ ನೀಡಿದ್ದಾರೆ .
ಚಳಿಗಾಲದಲ್ಲಿ ಒಣಚರ್ಮ ಸಾಕಷ್ಟು ಅನಾನುಕೂಲವನ್ನು ಉಂಟುಮಾಡುತ್ತದೆ ಹಾಗೂ ಕೆಲವೊಂದು ಸರಿ ತುರಿಕೆ ಕೂಡ ಶುರುವಾಗುತ್ತದೆ . ಇದಕ್ಕೆ ಪ್ರಮುಖ ಕಾರಣ ಅಂದ್ರೆ ಸ್ಟ್ರಾಟಮ್ ಕಾರ್ನಿಯಮ್ (ಚರ್ಮದ ಹೊರಗಿನ ಪದರ)ನೀರನ್ನು ಉಳಿಸಿಕೊಳ್ಳುವ ಲೇಯರ್ ಆಗಿದೆ . ಇದು ಚಳಿಗಾಲದಲ್ಲಿ ತಂಪಾದ ವಾತಾವರಣ ಮತ್ತು ಕಡಿಮೆ ಆರ್ದ್ರತೆಯು ಒಳಾಂಗಣ ಮತ್ತು ಹೊರಗೆ ಚರ್ಮವನ್ನು ಅದರ ನೈಸರ್ಗಿಕ ತೈಲಗಳನ್ನು ಖಾಲಿ ಮಾಡುತ್ತದೆ.
ಅದಕ್ಕಾಗಿ ಮುಖ್ಯವಾಗಿ ಸ್ನಾನ ಮಾಡಲು ಉಗುರುಬೆಚ್ಚಗಿನ ನೀರನ್ನು ಬಳಸಿ ಹಾಗೂ ಪದೇಪದೇ ಅತಿ ಹೆಚ್ಚು ಬಿಸಿ ನೀರಿನಲ್ಲಿ ಹೆಚ್ಚು ಹೊತ್ತು ಸ್ನಾನಮಾಡೋದನ್ನು ನಿಲ್ಲಿಸಿ. ಬಿಸಿನೀರು ನೈಸರ್ಗಿಕ ತೈಲಗಳನ್ನು ತೆಗೆದುಹಾಕುತ್ತದೆ ಮತ್ತು ಚರ್ಮದ ತೇವಾಂಶವನ್ನು ಕಳೆದುಹಾಕಿತ್ತದೆ. 5-10 ನಿಮಿಷಗಳವರೆಗೆ ಸ್ನಾನವನ್ನು ಮಿತಿಗೊಳಿಸಿ.
ಸ್ಕ್ರಬ್‌ಗಳು ಮತ್ತು ಪರಿಮಳಯುಕ್ತ ಉತ್ಪನ್ನಗಳನ್ನು ಬಳಕ ಮಾಡಬೇಡಿ. ಚಳಿಗಾಲದಲ್ಲಿ ಸಾಬೂನುಗಳು ಅಥವಾ ಫೇಸ್‌ವಾಶ್‌ಗಳಿಗಿಂತ ಸಾಫ್ಟ್ ಕ್ಲೆನ್ಸರ್‌ಗಳು ಅಥವಾ ಸಿಂಡೆಟ್ ಬಾರ್‌ಗಳನ್ನು ಬಳಸಿ, ಯಾಕೆಂದರೆ ಅವು ಚರ್ಮದ pH ಅನ್ನು ಬದಲಾಯಿಸುವುದಿಲ್ಲ ಮತ್ತು ಚರ್ಮದಲ್ಲಿನ ನೈಸರ್ಗಿಕ ತೈಲಗಳನ್ನು ತೆಗೆದುಹಾಕುವುದಿಲ್ಲ.
-ಚಳಿಗಾಲದಲ್ಲಿ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮಾಯಿಶ್ಚರೈಸಿಂಗ್ ಮುಖ್ಯವಾಗಿದೆ. ಇದು ದೇಹದ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ, ಸ್ಕೀನ್ ಡ್ರೈ ಆಗೋದನ್ನು ತಪ್ಪಿಸುತ್ತದೆ.ಹೊರಗಡೆ ಬರೋ ಧೂಳಿನಿಂದ ಕೂಡ ಚರ್ಮವನ್ನು ರಕ್ಷಣೆ ಮಾಡುತ್ತದೆ. ಸೆರಾಮಿಡ್‌ಗಳು, ಹೈಲುರಾನಿಕ್ ಆಮ್ಲ ಮತ್ತು ಶಿಯಾ ಬೆಣ್ಣೆಯನ್ನು ಒಳಗೊಂಡಿರುವ ದಪ್ಪವಾದ ಮಾಯಿಶ್ಚರೈಸರ್‌ಗಳು ನಿಮ್ಮ ಚರ್ಮದೊಳಗೆ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಹಗುರವಾದ ಲೋಷನ್‌ಗಳಿಗಿಂತ ದಪ್ಪವಾದ ಕ್ರೀಮ್‌ಗಳನ್ನು ಆರಿಸಿ ಬಳಕೆ ಮಾಡಿ .
ಬಿಸಿಲಿಗೆ ಹೊರಗಡೆ ಹೋಗುವ 3 ನಿಮಿಷಗಳೊಳಗೆ ಮಾಯಿಶ್ಚರೈಸರ್ ಬಳಸಿ ಹಾಗೂ ನಿಮ್ಮದು ತುಂಬಾ ಶುಷ್ಕ ಚರ್ಮವನ್ನು ಹೊಂದಿದ್ದರೆ ದಿನಕ್ಕೆ 3 ಬಾರಿ ಮಾಯಿಶ್ಚರೈಸರ್ ಅನ್ನು ಉಪಯೋಗಿಸಿ .
ಚಳಿಗಾಲದಲ್ಲಿ ಸೂರ್ಯನ ಉಷ್ಣತೆಯ ತೀವ್ರತೆ ಅಷ್ಟು ಇರದೇ ಇದ್ದರೂ, ಅದರ UVA ಮತ್ತು UVB ಕಿರಣಗಳು ಮಾತ್ರ ಪ್ರಬಲವಾಗಿವೆ. 80% UV ಕಿರಣಗಳು ಮೋಡಗಳನ್ನುಇನ್ನುಷ್ಟು ಜಾಸ್ತಿ ಮಾಡಬಹುದು.
ಚಳಿಗಾಲದ ಸೂರ್ಯನು ಚಳಿಗಾಳಿಯಿಂದಾಗಿ ನಿಮ್ಮ ಚರ್ಮವನ್ನು ಹಾನಿಗೊಳಿಸಬಹುದು. ಹೊರಗೆ ಹೋಗುವ ಸುಮಾರು 30 ನಿಮಿಷಗಳ ಮೊದಲು 30 ಅಥವಾ ಅದಕ್ಕಿಂತ ಹೆಚ್ಚಿನ SPF ಹೊಂದಿರುವ ಸ್ಪೆಕ್ಟ್ರಮ್ ಸನ್‌ಸ್ಕ್ರೀನ್ ಅನ್ನು ಪ್ರಯತ್ನಿಸಿ.
ನಿಮ್ಮ ತುಟಿಗಳನ್ನು ರಕ್ಷಿಸಲು spf 15 ಅನ್ನು ಹೊಂದಿರುವ ಆರ್ಧ್ರಕ ಲಿಪ್ ಬಾಮ್‌ಗಳನ್ನು ಬಳಸಿ ಮತ್ತು ದಿನವಿಡೀ ಹೇರಳವಾಗಿ ಬಳಸುತ್ತನೇ ಇರಿ.
ಇವೆಲ್ಲದರ ಜತೆಗೆ ನಿಮ್ಮ ಚರ್ಮವನ್ನು ಒಳಗಿನಿಂದ ಪೋಷಿಸಲು ಸಾಕಷ್ಟು ಹಣ್ಣುಗಳು, ತರಕಾರಿಗಳು ಮತ್ತು ಪ್ರೋಟೀನ್‌ಗಳನ್ನು ಒಳಗೊಂಡಿರುವ ಸಮತೋಲಿತ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸಿ. ವಿಟಮಿನ್ ಎ, ಸಿ, ಇ, ಆಂಟಿ-ಆಕ್ಸಿಡೆಂಟ್‌ಗಳು ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳಂತಹ ಆಹಾರವನ್ನು ಸೇವಿಸಿ ನಿಮ್ಮ ಚರ್ಮವನ್ನು ರಕ್ಷಿಸಲು ಮತ್ತು ಆರೋಗ್ಯಕರವಾಗಿ ಕಾಣುವಂತೆ ಮಾಡಲು ಸಹಾಯ ಮಾಡುತ್ತದೆ.
ಹಾಗೂ ಚಳಿಗಾಲದಲ್ಲಿ ಬಾಯಾರಿಕೆಯಾಗದೇ ಇದ್ದರೂ ಸಾಕಷ್ಟು ನೀರು ಕುಡಿಯಬೇಕಾಗಿದೆ .
ಇನ್ನೂ ಸಣ್ಣಮಕ್ಕಳ ಸ್ಕೀನ್ ಕೂಡ ಚಳಿಗಾಲದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತದೆ . ಮಕ್ಕಳ ಚರ್ಮವನ್ನು ಚಳಿಗಾಲದಿಂದ ಯಾವ ರೀತಿ ರಕ್ಚಣೆ ಮಾಡಬೇಕೆಂದು ವೈಟ್ ಫಿಲ್ಡ್ ನಲ್ಲಿರುವ ಮೆಡಿಕವರ್ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ ಸುಮಿತ್ರಾ ಎಸ್ ಕೆಲವೊಂದು ಸಲಹೆ ನೀಡಿದ್ದಾರೆ
ಸಣ್ಣ ಮಕ್ಕಳನ್ನು ಚಳಿಗಾದಲ್ಲಿ ಪ್ರತಿ ದಿನಾ ಸ್ನಾನ ಮಾಡಿಸುವ ಬದಲು ವಾರಕ್ಕೆ ಮೂರರಿಂದ ನಾಲ್ಕು ದಿನ ಸ್ನಾನ ಮಾಡಿಸಬಹುದು, ವಾರಕ್ಕೆ ಒಂದು ದಿನ ತಲೆ ಸ್ನಾನ ಮಾಡಬಹುದು, ಉಳಿದ ದಿನ ಸ್ಪಾಂಜ್ ಬಾತ್ ಮಾಡಿಸಬೇಕು . ಚಳಿ ಇದ್ದರೂ ಮಗು ಸ್ನಾನ ಮಾಡೊಕೆ ಯಾವುದೇ ಕಿರಿಕಿರಿ ಮಾಡದೇ ಇದ್ರೆ ಪ್ರತಿದಿನ ಸ್ನಾನ ಮಾಡಿಸಿದ್ರೂ ಯಾವುದೇ ಸಮಸ್ಯೆ ಇಲ್ಲ .
ದಿನಕ್ಕೆ ಎರಡು ಬಾರಿ ಮಕ್ಕಳಿಗೆ ಮಾಯಿಶ್ಚರೈಸರ್ ಅನ್ನು ಹಚ್ಚಬೇಕು ಹಾಗೂ ಮನೆಯಿಂದ ಹೊರಗಡೆ ಹೋಗುವ ಮೊದಲು ಮಕ್ಕಳ ಸನ್ ಸ್ಕ್ರೀನ್ ಲೋಷನ್ ಬಳಕೆ ಮಾಡಬೇಕು .
ಮಕ್ಕಳಿಗೆ ಚಳಿಗಾಲದಲ್ಲಿ ಚರ್ಮದಲ್ಲಿ ತುರಿಕೆ ಹಾಗೂ ಅಲರ್ಜಿ ಆಗುವ ಸಾಧ್ಯತೆ ಇದೆ . ತಪ್ಪದೇ ಮಕ್ಕಳ ತಜ್ಞರನ್ನು ಭೇಟಿ ಮಾಡಿ
ನಾಲ್ಕು ತಿಂಗಳ ಮಕ್ಕಳೊಳಗಿನ ಮಕ್ಕಳ ತುಟಿಗೆ ತಾಯಿ ಎದೆ ಹಾಲು ಹಚ್ಚಿದರೆ ಸಾಕು , ಅದಕ್ಕೂ ಮೆಲ್ಪಟ್ಟ ವಯಸ್ಸಿನ ಮಕ್ಕಳಿಗೆ ಮಕ್ಕಳ ಲಿಪ್ ಬಾಮ್ ಅನ್ನು ಬಳಕೆ ಮಾಡಬೇಕು .
ಉತ್ತಮ ಆರೋಗ್ಯಕರ ಆಹಾರವನ್ನು ನೀಡಬೇಕು , ಸೂಪ್ಪು , ತರಕಾರಿ ಹಣ್ಣು ಹಾಗೂ ಡ್ರೈ ಪ್ರೂಟ್ಸ್ ಗಳನ್ನು ಸೂಕ್ತ ಪ್ರಮಾಣದಲ್ಲಿ ನೀಡಬೇಕು . ಅದರ ಜೊತೆಗೆ ಸರಿಯಾಗಿ ನೀರು ಕೂಡ ಕುಡಿಸಬೇಕು
ಇನ್ನೂ ಮಗು ರಾತ್ರಿ ಮಲಗುವ ಮೊದಲು ಜೇನುತುಪ್ಪ ಹಾಗೂ ನಿಂಬೆ ಹಣ್ಣು ಹಾಕಿದ ನೀರನ್ನು ಕುಡಿಸಿ ಮಲಗಿಸಿದರೆ ಮಕ್ಕಳ ದೇಹ ಬೆಚ್ಚಗಿರುತ್ತದೆ