ಉಡುಪಿ: ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್, ನಾರ್ವೆಯ ವಿಲ್ಸನ್ ಎಸ್ ಗೆ ತನ್ನ ಮೊದಲ ರಫ್ತು ಕಾರ್ಗೋ ವೆಸೆಲ್ ಅನ್ನು ಸೋಮವಾರ ಬಿಡುಗಡೆ ಮಾಡಿತು.
ಭಾರತದ ಹಡಗು ನಿರ್ಮಾಣ ಸಂಸ್ಥೆ ಆದ ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ (ಸಿ ಎಸ್ ಎಲ್) ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್
ಲಿಮಿಟೆಡ್ ನಾರ್ವೆಯ ವಿಲ್ಸನ್ ಎಎಸ್ ಎ ಸಂಸ್ಥೆಗಾಗಿ ನಿರ್ಮಿಸಲಾಗುತ್ತಿರುವ ಆರು 3800 TDW ಸಾಮರ್ಥ್ಯದ ಸಾಮಾನ್ಯ ಸರಕು ಹಡಗುಗಳ (ಜನರಲ್ ಕಾರ್ಗೋ) ಸರಣಿಯ ಮೊದಲ ಹಡಗನ್ನು ಲಾಂಚ್ ಮಾಡಿತು. ಈ ಮೂಲಕ ಸಿ ಎಸ್ ಎಲ್ ಸಂಸ್ಥೆಯು ಭಾರತ ಸರಕಾರದ “ಆತ್ಮ ನಿರ್ಭರ” ಉಪಕ್ರಮಕ್ಕೆ ಅದೇ ರೀತಿ “ಮೇಕ್ ಇನ್ ಇಂಡಿಯಾ” ಮತ್ತು “ಮೇಕ್ ಫಾರ್ ದಿ ವರ್ಲ್ಡ್” ಕಾರ್ಯಕ್ರಮಕ್ಕೆ ತನ್ನ ಬದ್ಧತೆಯನ್ನು ಎತ್ತಿ ತೋರಿಸಿತು. ರಾಯಲ್ ನಾರ್ವೆ ರಾಯಭಾರ ಕಚೇರಿಯ ಸಚಿವರ ಸಲಹೆಗಾರರು ಮತ್ತು ಯೋಜನೆಯ ಉಪಮುಖ್ಯಸ್ಥರಾದ ಮಾರ್ಟಿನ್ ಆಮ್ಮಾಲ್ ಭೋಥೀಮ್ ಅವರು ವಿಲ್ಸನ್ ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ಐನಾ ತೊರ್ನೇಸ್ ಅವರೊಂದಿಗೆ ಹಡಗನ್ನು ಬಿಡುಗಡೆ ಮಾಡುವ ಗೌರವವನ್ನು ಪಡೆದರು. ಕೊಚ್ಚಿನ್ ಶಿಪ್ ಯಾರ್ಡ್
ಲಿಮಿಟೆಡ್ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಮಧು ಎಸ್ ನಾಯರ್, ಕೊಚ್ಚಿನ್ ಶಿಪ್ ಯಾರ್ಡ್ ನ
ತಾಂತ್ರಿಕ ನಿರ್ದೇಶಕರಾದ ಬಿಜೋಯ್ ಭಾಸ್ಕರ್, ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರಿಕುಮಾರ್ ಎ. ಮತ್ತು ಶಿಪ್ ಯಾರ್ಡ್ ನ ಇತರ ಹಿರಿಯ ಸಿಬ್ಬಂದಿಗಳ ಉಪಸ್ಥಿತರಿದ್ದರು.
ನಾರ್ವೆಯ ಬರ್ಗೆನ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ವಿಲ್ಸನ್ ಎ ಎಸ್ ಎ ಸಂಸ್ಥೆಯು, ಯುರೋಪ್‌ನಲ್ಲಿ ಪ್ರಮುಖ ಕಿರು ಸಮುದ್ರ ನೌಕಾಪಡೆ ನಿರ್ವಾಹಕ ಸಂಸ್ಥೆಯಾಗಿ ಮತ್ತು ಯುರೋಪಿನಾದ್ಯಂತ ಸುಮಾರು 15 ಮಿಲಿಯನ್ ಟನ್ ಒಣ ಸರಕುಗಳನ್ನು ಸಾಗಿಸುತ್ತದೆ. ಕಂಪನಿಯು 1500ರಿಂದ 8500 DWT ವರೆಗಿನ ಸಾಮರ್ಥ್ಯ ಹೊಂದಿರುವ ಸುಮಾರು 130 ಹಡಗುಗಳ ನೌಕಾಪಡೆಯನ್ನು ನಿರ್ವಹಿಸುತ್ತದೆ.
ಇದಲ್ಲದೆ, ವಿಲ್ಸನ್ ಎ ಎಸ್ ಎ ಸಂಸ್ಥೆಯು ಜೂನ್ 2024 ರಲ್ಲಿ ನಾಲ್ಕು, 6300 TDW ಒಣಸರಕು ಹಡಗುಗಳು ಹಾಗು
ಸೆಪ್ಟೆಂಬರ್ 2024 ರಲ್ಲಿ ನಾಲ್ಕು, 6300 TDW ಒಣಸರಕು ಹಡಗುಗಳಂತೆ ಒಟ್ಟು ಎಂಟು 6300 TDW ಒಣಸರಕು
ಹಡಗುಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಇದನ್ನೊಳಗೊಂದು ಒಟ್ಟಾರೆಯಾಗಿ 14 ಹಡಗುಗಳ ಒಪ್ಪಂದಕ್ಕೆ ಉಡುಪಿ
ಕೊಚಿನ್ ಶಿಪ್ ಯಾರ್ಡ್(UCSL) ಸಂಸ್ಥೆಯೊಂದಿಗೆ ಸಹಿ ಹಾಕಲಾಗಿದೆ. ಈ ಎಲ್ಲಾ ಯೋಜನೆಗಳು ನಿರ್ಮಾಣದ ವಿವಿಧ
ಹಂತಗಳಲ್ಲಿವೆ.
ಉಡುಪಿ ಕೊಚಿನ್ ಶಿಪ್ ಯಾರ್ಡ್(UCSL), ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ (CSL) ಸಂಸ್ಥೆಯ ಸ್ವಾಧೀನಕ್ಕೆ ಬಂದ ಬಳಿಕ ಎರಡು 627 ಬೊಲ್ಲಾರ್ಡ್ ಪುಲ್ ಟಗ್ (62T Bollard pull Tug) ಗಳನ್ನು ಅದಾನಿ ಹರ್ಬರ್ ಸರ್ವಿಸಸ್ ಲಿಮಿಟೆಡ್ ಕಂಪನಿಯ ಓಷನ್ ಸ್ಪಾರ್ಕಲ್ ಲಿಮಿಟೆಡ್ ಗೆ ಯಶಸ್ವಿಯಾಗಿ ಹಸ್ತಾಂತರಿಸಲಾಗಿದೆ ಮತ್ತು ಒಂದು 701 ಬೊಲ್ನಾರ್ಡ್ ಫುಲ್ ಟಗ್ (70T Bollard pull Tug) ಅನ್ನು ಪೋಲ್ಮಾರ್ ಮರಿಟೈಮ್ ಲಿಮಿಟೆಡ್ ಗೆ ಹಸ್ತಾಂತರಿಸಲಾಗಿದೆ. ಇದಲ್ಲದೆ UCSL ಕೇಂದ್ರವು ಓಷನ್ ಸ್ಪಾರ್ಕಲ್ ಲಿಮಿಟೆಡ್ ಗೆ (ಮೂರು) ಮತ್ತು ಪೋಲ್ಲ್ಯಾರ್ ಮರಿಟೈಮ್ ಲಿಮಿಟೆಡ್ ಗೆ (ಒಂದು) ಪುನರಾವರ್ತಿತ ಆದೇಶಗಳಂತೆ ಒಟ್ಟು ನಾಲ್ಕು, 70T ಬೊಲ್ನಾರ್ಡ್ ಪುಲ್ ಟಗ್ (70T Bollard pull Tug) ಗಳ ಹೆಚ್ಚಿನ ಒಪ್ಪಂದಗಳನ್ನು ಸಹ ಪಡೆದುಕೊಂಡಿದೆ.
ಈ ಹಡಗು 89.43 ಉದ್ದ, 13.2 ಮೀಟರ್ ಅಗಲ, ಮತ್ತು 4.2 ಮೀಟರ್ ಡ್ರಾಫ್ಟ್ ಹೊಂದಿದೆ. ಹಡಗುಗಳನ್ನು ನೆದರ್ಲ್ಯಾಂಡ್ಸ್ ನ ಕೆನೋಷಿಪ್ ಇಂಟರ್ನ್ಯಾಷನಲ್ ಸಂಸ್ಥೆ ವಿನ್ಯಾಸಗೊಳಿಸುತ್ತಿದ್ದು, ಯುರೋಪ್ ಕರಾವಳಿಯ ಜಲಮಾರ್ಗದಲ್ಲಿ ಸಾಮಾನ್ಯ ಸರಕು ಸಾಗಣೆಗಾಗಿ ಪರಿಸರ ಸ್ನೇಹಿ ಡೀಸೆಲ್ ಎಲೆಕ್ನಿಕ್ ಹಡಗಿನಂತೆ ನಿರ್ಮಿಸಲಾಗಿದೆ.
ಉಡುಪಿ-ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ (UCSL) ಸಂಸ್ಥೆಯು ಕೊನೊಷಿಪ್ ಇಂಟರ್ನ್ಯಾಷನಲ್ ಸಂಸ್ಥೆ ಸಹಯೋಗದೊಂದಿಗೆ ಈ ಅತ್ಯುತ್ತಮ ನೌಕೆಯನ್ನು ನಿರ್ಮಿಸುವ ಮೂಲಕ ಅಂತರಾಷ್ಟ್ರೀಯ ಹಡಗು ನಿರ್ಮಾಣ ಮಾರುಕಟ್ಟೆಯಲ್ಲಿ ಬಲವಾದ ನೆಲೆಯನ್ನು ಸ್ಥಾಪಿಸಿದೆ. ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ ಮತ್ತು ಅದರ ಅಂಗಸಂಸ್ಥೆಯಾದ ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ಎರಡು ಕೂಡ ಪಾಶ್ಚಾತ್ಯ ಯುರೋಪಿಯನ್ ಮಾರುಕಟ್ಟೆಗೆ ಉತ್ತಮ
ಗುಣಮಟ್ಟದ ಹಡಗುಗಳನ್ನು ನಿರ್ಮಿಸಲು ತಮ್ಮ ಅಚಲವಾದ ಬದ್ಧತೆಯನ್ನು ಪ್ರದರ್ಶಿಸುತ್ತಿದೆ.