ಸ್ಟಾರ್ಟಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ ಇದು ಮೋದಿ ಸರ್ಕಾರದ ಜನಪ್ರಿಯ ಘೋಷಣೆಗಳು. ಕೊರೊನಾ ಬಳಿಕ ದೇಶದಲ್ಲಿ ಸ್ಟಾರ್ಟಪ್ ರೂಪದಲ್ಲಿ ಅವೆಷ್ಟೋ ಕಂಪನಿಗಳು ಬೆಳೆದು ಬಂದಿದ್ದು, ಸಾಕಷ್ಟು ಹೆಸರು ಮಾಡಿದ್ದೂ ಇದೆ. ಮಂಗಳೂರಿನಲ್ಲಿ ಒಂದಷ್ಟು ಯುವಕರು ಸೇರಿಕೊಂಡು ಇದೇ ರೀತಿಯಲ್ಲಿ ಇ-ಕಾಮರ್ಸ್ ಪ್ಲಾಟ್ ಫಾರಂ ಒಂದನ್ನು ಹುಟ್ಟುಹಾಕಿದ್ದು ಇಡೀ ರಾಜ್ಯದಲ್ಲಿ ಸಂಸ್ಥೆಯನ್ನು ಬೆಳೆಸಲು ಯೋಜನೆ ಹಾಕಿದ್ದಾರೆ.
ಇ-ಕಾಮರ್ಸ್ ಪ್ಲಾಟ್‌ಫಾರಂ ಮೂಲಕ ಹೊಸ ಉದ್ಯಮದತ್ತ ಹೆಜ್ಜೆ!
ಕಂಪನಿಯ ಪ್ರಚಾರಾರ್ಥ ಗ್ರಾಹಕರಿಗೆ ಲಕ್ಷಾಂತರ ಮೌಲ್ಯದ ಉಡುಗೊರೆ
ಡ್ರೀಮ್ ಡೀಲ್ ಹೆಸರಲ್ಲಿ ರಾಜ್ಯದ 16 ಕಡೆ ಮಳಿಗೆ ಸ್ಥಾಪನೆ
ಮಂಗಳೂರಿನ ಉತ್ಸಾಹಿ ಯುವಕರ ತಂಡವೊಂದು ಆನ್‌ಲೈನ್ ಶಾಪಿಂಗ್ ವೇದಿಕೆಯನ್ನು ರಚಿಸಿದ್ದಾರೆ. ಡ್ರೀಮ್ ಆ್ಯಂಡ್ ಡೀಲ್ ಪ್ರೈವೇಟ್ ಲಿಮಿಟೆಡ್ ಕಂಪನಿಯಡಿ ಡಿಡಿ ಗ್ರಾಬ್ ಡಾಟ್ ಕಾಮ್ ಹೆಸರಲ್ಲಿ ಇ-ಕಾಮರ್ಸ್ ಫ್ಲಾಟ್‌ಫಾರಂ ಅಸ್ತಿತ್ವಕ್ಕೆ ಬಂದಿದ್ದು ನೇರವಾಗಿ ಗ್ರಾಹಕರ ಮಾರುಕಟ್ಟೆ ಸೃಷ್ಟಿಸುವ ಪ್ರಯತ್ನದಲ್ಲಿದ್ದಾರೆ. ಆನ್‌ಲೈನ್ ಶಾಪಿಂಗ್‌ನಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಗಳಿಸಿರುವ ಅಮೆಝಾನ್, ಫ್ಲಿಪ್ ಕಾರ್ಟ್‌ಗೆ ರೀತಿಯಲ್ಲೇ ಬೆಳೆಯುವ ದೃಷ್ಟಿಯಿಂದ ಯೋಜನೆ ಹಾಕಿದ್ದಾರೆ. ಇದಕ್ಕಾಗಿ ರಾಜ್ಯದಾದ್ಯಂತ ಗ್ರಾಹಕರನ್ನು ಆಕರ್ಷಿಸಲು ಪ್ರತೀ ತಿಂಗಳು ಲಕ್ಷಾಂತರ ರೂಪಾಯಿ ಬೆಲೆಯ ಉಡುಗೊರೆಗಳನ್ನೂ ನೀಡುತ್ತಿದ್ದಾರೆ.
ಈಗಾಗಲೇ ಮಂಗಳೂರು, ಉಡುಪಿ, ಭಟ್ಕಳ, ದಾವಣಗೆರೆ, ಬೆಂಗಳೂರು ಸೇರಿದಂತೆ 16 ಕಡೆಗಳಲ್ಲಿ ಶಾಖೆಗಳನ್ನು ತೆರೆದಿರುವ ಡ್ರೀಮ್ ಡೀಲ್ ಸಂಸ್ಥೆಯು ಸುಮಾರು ನಾಲ್ಕು ಸಾವಿರ ಮಂದಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗವನ್ನೂ ನೀಡಿದೆ. ಮುಂದಿನ ವರ್ಷದ ತ್ರೈಮಾಸಿಕ ಅವಧಿಯಲ್ಲಿ ರಾಜ್ಯದಲ್ಲಿ 35 ಕಡೆ ಶಾಖೆಗಳನ್ನು ತೆರೆಯುವ ಉದ್ದೇಶವನ್ನೂ ಹೊಂದಿದೆ. ಹಾಸನ, ಚಿಕ್ಕಬಳ್ಳಾಪುರ, ರಾಮನಗರ, ಬೆಳಗಾವಿ, ರಾಯಚೂರು, ಮಂಡ್ಯದಲ್ಲಿ ಸದ್ಯದಲ್ಲೇ ನೂತನ ಶಾಖೆಗಳು ತೆರೆದುಕೊಳ್ಳಲಿವೆ ಎನ್ನುತ್ತಾರೆ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಮಹಮ್ಮದ್ ಸುಹೈಲ್ ಅವರು.
ನೇರವಾಗಿ ಗ್ರಾಹಕರನ್ನು ಆಕರ್ಷಿಸುತ್ತಿರುವ ಸಂಸ್ಥೆಯು ಆಮೂಲಕ ಜನರೊಂದಿಗೆ ನೇರ ಮಾರುಕಟ್ಟೆಯ ಸಂಪರ್ಕವನ್ನು ಸ್ಥಾಪಿಸುತ್ತಿದೆ. ಗ್ರಾಹಕರಲ್ಲಿ ಉಳಿತಾಯ ಭಾವನೆ ಬೆಳೆಸಿ, ಪ್ರತಿ ತಿಂಗಳು ಆಕರ್ಷಕ ಬಹುಮಾನಗಳನ್ನೂ ನೀಡುತ್ತಿದೆ. ಇದಕ್ಕಾಗಿಯೇ ಸಮರ್ಥ ತಂಡವನ್ನು ಮಾಡಿಕೊಂಡಿದ್ದು, ಸಂಸ್ಥೆಯ 5 ಶೇಕಡಾ ಲಾಭಾಂಶವನ್ನು ಪ್ರತಿ ತಿಂಗಳು ಗ್ರಾಹಕರಿಗೆ ತಲುಪಿಸುತ್ತಿರುವುದಾಗಿ ಅದರ ಪ್ರಾಯೋಜಕರು ಹೇಳುತ್ತಾರೆ.
ಡ್ರೀಮ್ ಡೀಲ್ ಸಂಸ್ಥೆಯಲ್ಲಿ ಫರ್ನಿಚರ್ ಮತ್ತು ಇಲೆಕ್ಟ್ರಾನಿಕ್ಸ್ ಸಾಮಗ್ರಿಗಳನ್ನು ನೀಡಲಾಗುತ್ತಿದ್ದು, ಗ್ರಾಹಕರು ತಿಂಗಳ ಕಂತಿನಲ್ಲಿ ಸಾಮಗ್ರಿಗಳನ್ನು ಪಡೆಯುವುದಕ್ಕೂ ಅವಕಾಶ ಇದೆ. ಇದಲ್ಲದೆ, ಪ್ರತಿ ತಿಂಗಳೂ ಆಕರ್ಷಕ ಬಹುಮಾನಗಳನ್ನು ಘೋಷಿಸಲಾಗಿದ್ದು, ಇದರ ಫಲಿತಾಂಶವನ್ನು ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತಿದೆ. ಆಮೂಲಕ ತಮ್ಮ ಒಟ್ಟು ವಹಿವಾಟನ್ನು ಪಾರದರ್ಶಕವಾಗಿಯೇ ನಡೆಸಲಾಗುತ್ತದೆ ಎಂದು ಸಂಸ್ಥೆಯ ಪ್ರವರ್ತಕರು ತಿಳಿಸಿದ್ದಾರೆ.
ಕರಾವಳಿಯಲ್ಲಿ ಜನ್ರ ಮನೆಮಾತಾಗಿ ಬೆಳೆದುನಿಂತ ಜನಪ್ರಿಯ ಸಂಸ್ಥೆ ಡ್ರಿಮ್ ಡೀಲ್ ಗ್ರೂಪ್’ನ ಉಳಿತಾಯ ಯೋಜನೆ ಈಗ ರಾಜ್ಯಮಟ್ಟದಲ್ಲಿಯೂ ಮನೆಮಾತಾಗಿದೆ. ತಮ್ಮ ತಂಡದ ಸದಸ್ಯರ ಪರಿಶ್ರಮದಿಂದ ಡ್ರೀಮ್ ಡೀಲ್ ಇದೀಗ ರಾಜ್ಯದ 16ಕ್ಕೂ ಹೆಚ್ಚು ಕಡೆಗಳಲ್ಲಿ ಶಾಖೆಗಳನ್ನು ತೆರೆಯುವಂತೆ ಮಾಡಿದೆ.ಈಗಾಗಲೇ ಮೈಸೂರು,ಚಿಕ್ಕಮಗಳೂರು, ಬೆಳ್ತಂಗಡಿ, ಬೆಂಗಳೂರು, ಭಟ್ಕಳ, ಹೀಗೆ ೧೬ ಕಡೆಗಳಲ್ಲಿ ‘ಡ್ರೀಮ್ ಡೀಲ್ ಗ್ರೂಪ್’ ತನ್ನ ಶಾಖೆಯನ್ನು ಹೊಂದಿದ್ದು ಇತ್ತೀಚಿಗೆ ಶಿವಮೊಗ್ಗ, ದಾವಣಗೆರೆ, ಕೋಲಾರದಲ್ಲಿ ತನ್ನ ಹೊಸ ಶಾಖೆಗಳನ್ನು ತೆರೆದಿದೆ. ಮುಂದಿನ ದಿನಗಳಲ್ಲಿ ಹಾಸನ, ಬಾಗೇಪಲ್ಲಿ, ರಾಮನಗರ,ಮಂಡ್ಯ, ರಾಯಚೂರಿನಲ್ಲಿ ಶಾಖೆಗಳು ಉದ್ಘಾಟನೆಗೊಳ್ಳಲಿದೆ.
ವಿವಿಧ ಉಳಿತಾಯ ಯೋಜನೆ ಮೂಲಕ ತನ್ನ ಗ್ರಾಹಕರಿಗೆ ಬಂಪರ್ ಡ್ರಾ ಅಷ್ಟೇ ಅಲ್ಲದೇ ಅದ್ಭುತ ಉಳಿತಾಯ ಯೋಜನೆಯನ್ನು ಪರಿಚಯಿಸುತ್ತಿದೆ. ಈಗಾಗಲೇ ಹಲವು ಹಂತದ ಉಳಿತಾಯ ಯೋಜನೆಗಳ ಡ್ರಾ ಕೂಟವನ್ನು ಪ್ರತಿ ತಿಂಗಳು ಯಶಸ್ವಿಯಾಗಿ ನಡೆಸುತ್ತಾ ಬಂದಿದೆ.
ಗ್ರಾಹಕರು ನಮ್ಮೊಂದಿಗೆ ಇರಿಸಿರುವ ನಂಬಿಕೆಯೇ ನಮ್ಮ ಬೆಳವಣಿಗೆಗೆ ಪ್ರೇರಣೆಯಾಗಿದೆ. ಸಂಸ್ಥೆಯು ಆರ್‌ಬಿಐ ನಿಯಮಾವಳಿಯಂತೆ ಹಾಗೂ ಎಲ್ಲ ಮಾದರಿಯ ತೆರಿಗೆ ಕ್ರಮಗಳನ್ನು ಅನುಸರಿಸಿಕೊಂಡು ನಡೆಯುತ್ತಿದೆ.ಯೂಟ್ಯೂಬ್‌ನಲ್ಲಿ ನೇರಪ್ರಸಾರದ ಮೂಲಕ ಲೈವ್ ಡ್ರಾ,ಉಳಿತಾಯ ಯೋಜನೆಗೆ ಮಾಸಿಕ ಹಣ ಪಾವತಿಸುವ ಪ್ರತಿಯೊಬ್ಬನಿಗೂ ತಮ್ಮ ಆಯ್ಕೆಯ ಬಹುಮಾನ ಪಡೆಯುವ ಅವಕಾಶವೂ ಇದರಲ್ಲಿದೆ. ಯಾವುದೇ ವದಂತಿಗಳಿಗೆ,ಗೊಂದಲಗಳಿಗೆ ಜನರು ಒಳಗಾಗುವ ಪ್ರಶ್ನೆಯೇ ಇಲ್ಲಿಲ್ಲ.ಎಲ್ಲವೂ ಕಾನೂನು ಪ್ರಕಾರವಾಗಿಯೇ ನಡೆಯುತ್ತಿದೆ ಎನ್ನುವುದು ಸಂಸ್ಥೆಯ ಎಕ್ಸಿಕ್ಯುಟಿವ್ ಡೈರೆಕ್ಟರ್ ಅಭಿಜಿತ್ ದಾಸ್ ಅವರ ಮಾತುಗಳು.