
ಮಂಗಳೂರು: ಸ್ಟಿಗ್ಗಿ ಇನ್‍ಸ್ಟಾ ಮಾರ್ಟ್ ಕಂಪೆನಿಯ ವತಿಯಿಂದ ಮಂಗಳೂರಿನಲ್ಲಿ ಖಾಲಿಯಿರುವ ಇನ್ ಸೈಡ್ ಸ್ಟೋರ್ ಕೆಲಸಗಳಿಗಾಗಿ ಪಿಕ್ಕರ್ ಮತ್ತು ಪ್ಯಾಕರ್ ಹಾಗೂ ಲೋಡಿಂಗ್ ಹುದ್ದೆಗಳಿಗೆ ಪಾರ್ಟ್ ಟೈಮ್ ಹಾಗೂ ಫುಲ್ ಟೈಮ್ ಉದ್ಯೋಗದ ಅವಕಾಶ ಲಭ್ಯವಿದ್ದು, ಈ ಸಂಬಂಧ ಸ್ವಿಗ್ಗಿ ಇನ್‍ಸ್ಟಾ ಮಾರ್ಟ್ ಕಂಪೆನಿಯ ವತಿಯಿಂದ ನೇರ ಸಂದರ್ಶನವನ್ನು ಇಂದು ಬೆಳಿಗ್ಗೆ 10 :30 – ಮಧ್ಯಾಹ್ನ 1:30 ರವರೆಗೆ ಪಡೀಲ್ ಜಿಲ್ಲಾಡಳಿತ ಕಟ್ಟಡದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಲಾಗಿದೆ.


ಸಂದರ್ಶನದಲ್ಲಿ ಎಸ್.ಎಸ್.ಎಲ್.ಸಿ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿರುವ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಸ್ವ-ವಿವರವುಳ್ಳ ಬಯೋಡೇಟಾದೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ವೇತನದೊಂದಿಗೆ ಫಿ.ಎಫ್. ಇ.ಎಸ್.ಐ ಮತ್ತು ಇನ್ಸೆಂಟಿವ್ ಸೌಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರವನ್ನು ಸಂರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.