ಬೈಲೂರು-ಪಳ್ಳಿ ಜನರ ನಿದ್ದೆಗೆಡಿಸಿದ ಚಿರತೆ! ಅರಣ್ಯ ಅಧಿಕಾರಿಗಳ ವಿರುದ್ಧ ಅಸಮಾಧಾನ

ಕಾರ್ಕಳ: ತಾಲೂಕು ವ್ಯಾಪ್ತಿಯಲ್ಲಿ ಬರುವ ಬೈಲೂರು ಸಮೀಪದ ಪಳ್ಳಿ, ಕಣಂಜಾರ್, ರಂಗನಪಲ್ಕೆ, ಎಲಿಯಾಲ್, ನಿಂಜೂರ್ ಪರಿಸರದಲ್ಲಿ ಚಿರತೆ ಹಾವಳಿಯಿಂದ ಜನರು ನಿದ್ದೆ ಕಳೆದುಕೊಂಡಿದ್ದಾರೆ. ಪಳ್ಳಿ ಮಾರುತಿನಗರ ಪರಿಸರದಲ್ಲಿ ಹಾಡಹಗಲೇ ಚಿರತೆ ಓಡಾಟ ನಡೆಸುತ್ತಿದ್ದು ಜನರು ಮನೆಯಿಂದ ಹೊರಬರಲು ಭಯ ಪಡುವಂತಾಗಿದೆ. ಸಾಕು ನಾಯಿಗಳು ಚಿರತೆಗೆ ಆಹಾರವಾಗುತ್ತಿದ್ದು ಮೇಯಲು ಬಿಟ್ಟ ದನಗಳ ಮೇಲೂ ದಾಳಿ ನಡೆಸುತ್ತಿದೆ. ಇಷ್ಟೆಲ್ಲ ಆದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಹಿಡಿಯಲು ಮನಸ್ಸು ಮಾಡುತ್ತಿಲ್ಲ ಎಂದು ನಾಗರಿಕರು ಅಸಮಾಧಾನ ಹೊರಹಾಕಿದ್ದಾರೆ.
ಪಳ್ಳಿ, ಮಾರುತಿನಗರ, ಮಂಗಲ್ದಿ ಮಠ ಪರಿಸರದಲ್ಲಿ ಚಿರತೆ ಅಡ್ಡಾಡುತ್ತಿದೆ. ಹಗಲಲ್ಲೇ ಜೋರಾಗಿ ಕೂಗುತ್ತ ಓಡಾಡುತ್ತಿರುವ ಕಾರಣ ಮಕ್ಕಳು ಮನೆಯಿಂದ ಹೊರಬರಲು ಸಾಧ್ಯವಿಲ್ಲದ ಪರಿಸ್ಥಿತಿಯಿದೆ. ನಾಯಿ, ಬೆಕ್ಕುಗಳು ಚಿರತೆಗೆ ಆಹಾರವಾಗುತ್ತಿದ್ದು ಇಲ್ಲಿ ಗೂಡು ಇಟ್ಟು ಚಿರತೆ ಹಿಡಿಯಲು ಅರಣ್ಯ ಇಲಾಖೆ ಕ್ರಮ ವಹಿಸಬೇಕಿದೆ.

 

error: Content is protected !!