ಗರ್ಭಿಣಿ ಪತ್ನಿ ಮಗುವನ್ನು ಕೊಂದು ಆತ್ಮಹತ್ಯೆ ಪ್ರಕರಣ: ಕಾರ್ತಿಕ್ ಭಟ್ ತಾಯಿ-ಸೋದರಿ ಅರೆಸ್ಟ್!

ಸುರತ್ಕಲ್: ಪಕ್ಷಿಕೆರೆಯ ಫ್ಲ್ಯಾಟ್ ವೊಂದರಲ್ಲಿ ಗರ್ಭಿಣಿ ಪತ್ನಿ ಹಾಗೂ ಮಗುವನ್ನು ಕೊಂದು ರೈಲ್ವೇ ಹಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಕಾರ್ತಿಕ್ ಭಟ್ ಪ್ರಕರಣ ತಿರುವು ಪಡೆದಿದ್ದು ಪ್ರಕರಣಕ್ಕೆ
ಸಂಬಂಧಿಸಿ ಕಾರ್ತಿಕ್ ತಾಯಿ ಶ್ಯಾಮಲಾ ಭಟ್, ಸಹೋದರಿ ಕಣ್ಮಣಿ ಎಂಬವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿಗಳಿಬ್ಬರ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ
ಪ್ರಕರಣ ದಾಖಲಾಗಿದೆ.
ಕಾರ್ತಿಕ್ ಭಟ್ ಬರೆದಿಟ್ಟಿದ್ದ 6 ಪುಟದ ಡೆತ್ ನೋಟ್ ಆಧಾರದಲ್ಲಿ
ಮುಲ್ಕಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಕಾರ್ತಿಕ್ ಪತ್ನಿಯ ಮನೆಯವರು ಕಾರ್ತಿಕ್ ಹೆತ್ತವರು ಹಾಗೂ ಸಹೋದರಿ
ವಿರುದ್ಧ ಆರೋಪ ಮಾಡಿದ್ದರು.ಆತ್ಮಹತ್ಯೆಗೆ ಅವರ ಕಿರುಕುಳ ಕಾರಣ ಎಂದು ದೂರಿದ್ದರು.

error: Content is protected !!