ಬೆಳ್ಳಾಯರು ರೈಲು ಹಳಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಪತ್ನಿ-ಮಗುವನ್ನೂ ಕೊಂದಿದ್ದ ಕಾರ್ತಿಕ್ ಭಟ್! ಪಕ್ಷಿಕೆರೆ ಫ್ಲ್ಯಾಟ್ ನಲ್ಲಿ ಮೃತದೇಹ ಪತ್ತೆ!!

ಮೂಲ್ಕಿ: ಇಲ್ಲಿಗೆ ಸಮೀಪದ ಬೆಳ್ಳಾಯರು ರೈಲ್ವೇ ಹಳಿಯಲ್ಲಿ ಶುಕ್ರವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡ ಯುವಕನ ಗುರುತು ಪತ್ತೆಯಾಗಿದ್ದು ಆತನನ್ನು ಪಕ್ಷಿಕೆರೆ ನಿವಾಸಿ ಕಾರ್ತಿಕ್ ಭಟ್(32) ಎಂದು ಹೆಸರಿಸಲಾಗಿದೆ. ಕಾರ್ತಿಕ್ ಪಕ್ಷಿಕೆರೆ ಪಂಚಾಯತ್ ಬಳಿಯ ಫ್ಲ್ಯಾಟ್ ನಲ್ಲಿ ವಾಸಿಸುತ್ತಿದ್ದು ಅಲ್ಲಿ ಪೊಲೀಸರು ತೆರಳಿದಾಗ ಬಾಗಿಲು ಹಾಕಿದ ಸ್ಥಿತಿಯಲ್ಲಿದ್ದು ಪರಿಶೀಲನೆ ನಡೆಸಿದಾಗ ಒಳಗಡೆ ಪತ್ನಿ ಮತ್ತು ಎರಡು ವರ್ಷ ಪ್ರಾಯದ ಮಗುವಿನ ಶವ ಪತ್ತೆಯಾಗಿದೆ. ಮೂರು ದಿನಗಳಿಂದ ಬಾಗಿಲು ಮುಚ್ಚಿದ್ದು ಪತ್ನಿ ಮಗುವನ್ನು ಕೊಂದು ಕಾರ್ತಿಕ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಪಕ್ಷಿಕೆರೆ ಜಂಕ್ಷನ್ ನಲ್ಲಿ “ಹೋಟೆಲ್ ಕಾರ್ತಿಕ್” ನಡೆಸುತ್ತಿರುವ ಜನಾರ್ಧನ ಭಟ್ ಎಂಬವರ ಮೂವರು ಮಕ್ಕಳಲ್ಲಿ ಒಬ್ಬನಾದ ಕಾರ್ತಿಕ್ ಕದ್ರಿಯ ಸೊಸೈಟಿ ಒಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಶುಕ್ರವಾರ ಮಧ್ಯಾಹ್ನ ತನ್ನ ಸ್ಕೂಟರ್ ಅನ್ನು ಕಲ್ಲಾಪು ದೇವಸ್ಥಾನ ಬಳಿ ನಿಲ್ಲಿಸಿ ರೈಲು ಹಳಿಯಲ್ಲಿ ಹೋಗಿದ್ದು ಬಳಿಕ ಛಿದ್ರಗೊಂಡ ಸ್ಥಿತಿಯಲ್ಲಿ ಮೃತದೇಹ ಪಟ್ಟೆಯಾಗಿತ್ತು. ಮೂಲ್ಕಿ ಠಾಣಾ ಪೊಲೀಸರು ಪ್ರಕರಣ ದಾಖಳಿಸಿಕೊಂಡಿದ್ದಾರೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಘಟನೆ ನಡೆದಿರುವ ಶಂಕೆಯಿದ್ದು ಮೂಲ್ಕಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

error: Content is protected !!