ಉಳ್ಳಾಲ: ಬೋಳಿಯಾರು ಸುತ್ತಮುತ್ತಲಿನ 8 ಜಮಾಅತ್ ಗಳ ಸಹಭಾಗಿತ್ವದಲ್ಲಿ ಮಾದಕದ್ರವ್ಯ ಮುಕ್ತ ಪರಿಸರದ ಗುರಿಯೊಂದಿಗೆ ರಚನೆಯಾಗಿರುವ ಸಂಯುಕ್ತ ಜಮಾಅತ್ ಒಕ್ಕೂಟ ಬೋಳಿಯಾರು ಇದರ ಅಧಿಕೃತ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಸ್ವಾಗತ್ ಹಾಲ್ ಬೋಳಿಯಾರಿನಲ್ಲಿ ನಡೆಯಿತು. ಅಮ್ಮೆಂಬಳ ಕೇಂದ್ರ ಜುಮಾ ಮಸೀದಿ ಖತೀಬ್ ಅಸ್ಸಯ್ಯದ್ ಅಮೀರ್ ಅಸ್ಸಖಾಫ್ ತಂಙಲ್ ರವರ ನೇತೃತ್ವದಲ್ಲಿ ಮೌಲಿದ್ ಮಜ್ಲಿಸ್ ನಡೆಯಿತು. ಈ ಸಂದರ್ಭದಲ್ಲಿ ಪದಾಧಿಕಾರಿಗಳ ಅಧಿಕೃತ ಅಧಿಕಾರ ಸ್ವೀಕಾರ ಹಾಗೂ ಒಕ್ಕೂಟದ ನೂತನ ಲೋಗೋ ಬಿಡುಗಡೆಗೊಳಿಸಲಾಯಿತು.
ಮುಹಿಯುದ್ದೀನ್ ಜುಮಾ ಮಸೀದಿ ಬೋಳಿಯಾರು ಖತೀಬ್ ರಿಯಾಝ್ ಅಬೂಬಕ್ಕರ್ ರಿಹ್ಮಾನಿರವರು ಮಾದಕದ್ರವ್ಯ ಮುಕ್ತ ಪರಿಸರವಾಗಲು ಜನತೆ ಮತ್ತು ಜಮಾಅತ್ ಯಾವ ರೀತಿಯಲ್ಲಿ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಬಹುದು ಎನ್ನುವುದರ ಕುರಿತು ದಿಕ್ಸೂಚಿ ಭಾಷಣಗೈದರು.
ಸುಬ್ಬಗುಳಿ ಜಮಾಅತ್ ಖತೀಬ್ ಮೊಹಮ್ಮದ್ ಸೈಫುಲ್ಲಾ ಸಹದಿ ಅಲ್ ಅಫ್ಲಲಿ ಹಾಗೂ ಕುಕ್ಕೋಟು ಜುಮಾ ಮಸೀದಿ ಖತೀಬರಾದ ನಾಸಿರ್ ಅಝ್ಹರಿ ಅಲ್ ಮುರ್ಶಿದಿರವರು ಶುಭಹಾರೈಸಿದರು.ಕಾರ್ಯಕ್ರಮದಲ್ಲಿ ಖತೀಬರಾದ ಅಬ್ದುರ್ರಹ್ಮಾನ್ ಮದನಿ ಮಧ್ಯನಡ್ಕ, ಅನ್ವರ್ ಮರ್ಝೂಖ್ ಅಸ್ಸಖಾಫಿ ಪಾನೇಲ, ಮುಹಮ್ಮದ್ ಅಲಿ ಅರ್ಷದಿ ರಂತಡ್ಕ ಉಪಸ್ಥಿತರಿದ್ದರು.ಜಮಾಅತ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಬಾಕಿಮಾರ್, ಅಬೂಬಕ್ಕರ್ ಕೋಟೆ, ಮುಹಮ್ಮದ್ ಪಲ್ಲ, ಮುಹಮ್ಮದ್ ರಂತಡ್ಕ,ಉಬೈದ್ ಅಮ್ಮೆಂಬಳ, ಅಬೂಬಕ್ಕರ್ ಹಾಜಿ ಮಧ್ಯನಡ್ಕ.
ಸಂಯುಕ್ತ ಜಮಾಅತ್ ಅಧ್ಯಕ್ಷ ಶರೀಫ್ ಕಾಪಿಕಾಡ್, ಉಪಾಧ್ಯಕ್ಷ ರಝಾಕ್ ಬಂಡಸಾಲೆ, ಕೋಶಾಧಿಕಾರಿ ನಿಯಾಝ್ ಎಂ.ಕೆ, ಸಂಘಟನಾ ಕಾರ್ಯದರ್ಶಿಗಳಾದ ಕಬೀರ್ ರಂತಡ್ಕ,ಸಿ.ಎ.ಅಬ್ದುಲ್ ಖಾದರ್, ಜೊತೆ ಕಾರ್ಯದರ್ಶಿಗಳಾದ ಇಸಾಕ್ ಮಧ್ಯನಡ್ಕ, ಜಾಫರ್ ಪಾನೇಲ ಉಪಸ್ಥಿತರಿದ್ದರು. ಕಾರ್ಯಕ್ರಮ ಆಯೋಜನಾ ಸಮಿತಿ ಸಹ ಸಂಚಾಲಕ ಎಂ.ಎಸ್.ಯೂಸುಫ್ ಸ್ವಾಗತಿಸಿದರು. ಒಕ್ಕೂಟದ ಪ್ರ.sಕಾರ್ಯದರ್ಶಿ ಹಮೀದ್ ಒಡಕಿನಕಟ್ಟೆ
ವಂದಿಸಿದರು.