ಸುರತ್ಕಲ್: ಸೂರಿಂಜೆಯಿಂದ ಪುಚ್ಚಾಡಿ ಕಡೆಗೆ ಹೋಗುವ ರಸ್ತೆಯಲ್ಲಿ ತ್ಯಾಜ್ಯ ಸುರಿಯುವವರಿಂದಾಗಿ ಜನರು ಮೂಗು ಮುಚ್ಚಿಕೊಂಡು ಸಂಚಾರ ನಡೆಸುವಂತಾಗಿದೆ.
ಈ ಹಿಂದೆ ಇಲ್ಲಿನ ಮುಖ್ಯರಸ್ತೆಯಲ್ಲಿ ತ್ಯಾಜ್ಯ ಸುರಿಯದಂತೆ ಪಂಚಾಯತ್ ಬೋರ್ಡ್ ಅಳವಡಿಸಿತ್ತು. ಇಲ್ಲಿನ ತ್ಯಾಜ್ಯವನ್ನು ವಿಲೇವಾರಿ ಮಾಡಿ ಸ್ವಚ್ಛತೆ ಕಾಪಾಡಲಾಗಿತ್ತು. ನಂತರ ಇಲ್ಲಿ ತ್ಯಾಜ್ಯ ಸುರಿಯಲು ಬಂದಿದ್ದ ವಾಹನವನ್ನು ಸ್ಥಳೀಯರು ತಡೆದು ಸುರಿಯದಂತೆ ಎಚ್ಚರಿಕೆ ನೀಡಿದ್ದರು.
ಆದರೆ ಕಳೆದ ಕೆಲಸಮಯದಿಂದ ತ್ಯಾಜ್ಯವನ್ನು ಪುಚ್ಚಾಡಿ ಸಂಪರ್ಕ ಕಲ್ಪಿಸುವ ರಸ್ತೆಯ ಮಧ್ಯದಲ್ಲೇ ಸುರಿಯಲಾಗುತ್ತಿದೆ. ಇದರಿಂದ ಪರಿಸರದಲ್ಲಿ ರೋಗ ಭೀತಿ ಎದುರಾಗಿದ್ದು ಪಂಚಾಯತ್ ಕೂಡಲೇ ತ್ಯಾಜ್ಯ ಎಸೆಯುವವರನ್ನು ಪಟ್ಟಹಚ್ಚಿ ಶಿಕ್ಷಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.