ಸುರತ್ಕಲ್: ಕೈ ಗಾಯದ ಚಿಕಿತ್ಸೆಗಾಗಿ ಬೆಳಗಾವಿಯಿಂದ ಬಂದಿದ್ದ 13 ವರ್ಷದ ಬಾಲಕಿಯನ್ನು ಜೋಕಟ್ಟೆಯ ಬಾಡಿಗೆ ಮನೆಯಲ್ಲಿ ಕುತ್ತಿಗೆಗೆ ಬಟ್ಟೆ ಬಿಗಿದು ಹತ್ಯೆಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ .
ಕೊಲೆ ಪ್ರಕರಣದ ಆರೋಪಿಯನ್ನು ಫಕೀರಪ್ಪ ಮಾದಾರ (51)ಎಂದು ಗುರುತ್ತಿಸಲಾಗಿದೆ .ಈತನು ಬೆಳಗಾವಿ ಜಿಲ್ಲೆಯವನಾಗಿದ್ದು ವಿಜಯ ವಿಠ್ಠಲ ಭಜನಾ ಮಂದಿರದ ಹಿಂಭಾಗ ಕೇಶವ ಎಂಬವರ ಬಾಡಿಗೆ ಮನೆಯಲ್ಲಿ ನೆಲೆಸಿದ್ದನು.
ಈತನು ಕಳೆದ 6 ತಿಂಗಳಿಂದ ಜೋಕಟ್ಟೆ ಪರಿಸರದಲ್ಲಿ ದಿನಗೂಲಿ ನೌಕರನಾಗಿ ಕೆಲಸಮಾಡುತ್ತಿದ್ದನು. ಆರೋಪಿ ಯಾತಕ್ಕಾಗಿ ಬಾಲಕಿಯನ್ನು ಕೊಲೆಮಾಡಿದ್ದಾನೆಂದು ಇನ್ನಷ್ಟೇ ವಿಚರಣೆಯ ಮೂಲಕ ತಿಳಿಯಬೇಕಾಗಿದೆ. ಈತನನ್ನು ಈಗಾಗಲೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ .