ಕೈಕಂಬದಲ್ಲಿ ಬೃಹತ್ ಜನಸ್ಪಂದನಾ ಕಾರ್ಯಕ್ರಮ ಮತ್ತು ಉಚಿತ ಅರೋಗ್ಯ ತಪಾಸಣಾ ಶಿಬಿರ
ಸುರತ್ಕಲ್: ಇನಾಯತ್ ಅಲಿ ಅಭಿಮಾನಿ ಬಳಗ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಹಾಗೂ ಲಯನ್ಸ್ ಕ್ಲಬ್ ಮುಚ್ಚೂರು ನೀರುಡೆ ಘಟಕದ ಸಂಯುಕ್ತಾಶ್ರಯದಲ್ಲಿ ಸಹೃದಯಿ ಜನನಾಯಕ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಹುಟ್ಟುಹಬ್ಬದ ಪ್ರಯುಕ್ತ ಬೃಹತ್ ಜನಸ್ಪಂದನಾ ಕಾರ್ಯಕ್ರಮ ಮತ್ತು ಉಚಿತ ಅರೋಗ್ಯ ತಪಾಸಣಾ ಶಿಬಿರ ಮಂಗಳವಾರ ಕೈಕಂಬದ ಝರಾ ಕನ್ವೆಂಷನ್ ಹಾಲ್ ನಲ್ಲಿ ಜರುಗಿತು.
ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತಾಡಿದ ಖ್ಯಾತ ವಾಗ್ಮಿ ಲಕ್ಷ್ಮೀಶ್ ಗಬ್ಲಡ್ಕ ಅವರು, “ಇವತ್ತು ಇನಾಯತ್ ಅಲಿ ಎಂಬ ಅಸಾಮಾನ್ಯ ಯುವಕ ಹುಟ್ಟಿದ ದಿನ. ಜನನಾಯಕ ಎಂದು ಸುಮ್ಮನೆ ಯಾರನ್ನೂ ಕರೆಯುವುದಿಲ್ಲ. ಅವರು ಜನರ ಮಧ್ಯೆ ಇರುವ ಕಾರಣಕ್ಕೆ ಜನನಾಯಕ ಎಂಬ ಪದಕ್ಕೆ ಅನ್ವರ್ಥಕ ಅವರು. ಎಲ್ಲಾ ಜಾತಿ, ಧರ್ಮಗಳ ಜನರು ಇಂದು ಇನಾಯತ್ ಅಲಿಯನ್ನು ಒಪ್ಪಿಕೊಂಡಿದ್ದಾರೆ. ಇಂದು ಇಲ್ಲಿ ಸೇರಿರುವ ಜನಸಮೂಹವೇ ಸೂಚಿಸುತ್ತದೆ ಅವರ ಅಭಿಮಾನ ಜನರಲ್ಲಿ ಎಷ್ಟಿದೆ ಎನ್ನುವುದನ್ನು. ಇದನ್ನು ಆಯೋಜನೆ ಮಾಡಿರುವ ಅಭಿಮಾನಿ ಬಳಗಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಜನರನ್ನು ಬೇಧ ಭಾವ ನೋಡದೆ ಒಂದಾಗಿ ಕಾಣುವ ಇನಾಯತ್ ಅಲಿ ಅವರು ನೂರ್ಕಾಲ ಸಮಾಜಕ್ಕಾಗಿ ಬಾಳಲಿ” ಎಂದರು.
ಇನಾಯತ್ ಅಲಿ ಮಾತನಾಡಿ, “ಲಯನ್ಸ್‌ಕ್ಲಬ್, ಕೆಎಂಸಿ, ಪ್ರಸಾದ್ ನೇತ್ರಾಲಯ ಬ್ಲಡ್ ಡೋನರ್ಸ್ ಮಂಗಳೂರು ಅವರಿಗೆ ತಲೆಬಾಗುತ್ತಾ ನನಗೋಸ್ಕರ ರಾತ್ರಿ ಹಗಲೆನ್ನದೆ ಕಾರ್ಯಕ್ರಮ ಮಾಡಿದ ನನ್ನ ಅಭಿಮಾನಿ ಬಳಗಕ್ಕೆ ಅಭಾರಿಯಾಗಿದ್ದೇನೆ. ನಾವು ಬದುಕುವುದು ಮೂರು ದಿವಸ ಮಾತ್ರ. ಆದರೆ ಅಸಕ್ತರಿಗೆ ನೆರವಾಗುವ ಮೂಲಕ ನೆನಪಿಡುವ ಕಾರ್ಯಕ್ರಮ ಆಯೋಜನೆ ಮಾಡಿದ್ದೀರಿ. ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ. ನಿಮ್ಮ ಪ್ರೀತಿ ವಿಶ್ವಾಸ ಕಮ್ಮಿಯಾಗಿಲ್ಲ. ಇಂತಹ ಸಮಾಜಮುಖಿ ಕಾರ್ಯಕ್ರಮ ಮುಂದುವರಿಸಿ” ಎಂದರು.
ಕದ್ರಿ ವಿಠಲನಾಥ ತಂತ್ರಿ ಮಾತನಾಡಿ, “ಜನರು ಸಾಮಾನ್ಯವಾಗಿ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಅಥವಾ ಅವರಷ್ಟಕ್ಕೆ ಆಚರಣೆ ಮಾಡ್ತಾರೆ. ಆದರೆ ಇನಾಯತ್ ಅವರು ಸಮಾಜಕ್ಕಾಗಿ ಹುಟ್ಡುಹಬ್ಬ ಆಚರಿಸಿದರು. ಇದು ನಿಜವಾದ ಹುಟ್ಟುಹಬ್ಬ. ದೀಪದ ಪಂಚಜ್ಯೋತಿಯಂತೆ ಅವರ ಆಯುಷ್ಯ ವೃದ್ಧಿಸಲಿ. ಅವರಿಂದ ಇನ್ನೂ ಸಮಾಜಕಾರ್ಯ ನಡೆಸಲು ದೇವರು ಅನುಗ್ರಹಿಸಲಿ, ಅವರ ಆರೋಗ್ಯ, ವರ್ಚಸ್ಸು, ರಾಜಕೀಯ ಭವಿಷ್ಯ, ಐಶ್ವರ್ಯ ವೃದ್ಧಿಸಲಿ. ಜನರಿಗೋಸ್ಕರ ಬದುಕುವ ಇನಾಯತ್ ಅಲಿಯತ್ ಅವರು ಜನಪ್ರತಿನಿಧಿಯಾಗಲಿ ಅವರ ಭವಿಷ್ಯ ಉಜ್ವಲವಾಗಲಿ” ಎಂದು ಶುಭಹಾರೈಸಿದರು.
ಪೆರಾರ ಚರ್ಚ್ ಧರ್ಮಗುರು ಫಾ. ಆಂಟನಿ ವಿನ್ಸೆಂಟ್ ಲೂಯಿಸ್ ಅವರು ಮಾತನಾಡಿ, “ಯುವಕನಾಗಿ ಇನಾಯತ್ ಅಲಿ ಮಾಡುವ ಕೆಲಸ ಶ್ಲಾಘನೀಯ” ಎಂದು ಹುಟ್ಟುಹಬ್ಬದ ಶುಭ ಹಾರೈಸಿದರು.
ವೇದಿಕೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ, ಪೆರಾರ ಚರ್ಚ್ ಧರ್ಮಗುರು ಫಾ. ಆಂಟನಿ ವಿನ್ಸೆಂಟ್ ಲೂಯಿಸ್, ಕದ್ರಿ ವಿಠಲನಾಥ ತಂತ್ರಿ ಕದ್ರಿ, ಕೆಪಿಸಿಸಿ ಆರ್.ಕೆ. ಪೃಥ್ವಿರಾಜ್, ಲಕ್ಷ್ಮೀಶ ಗಬ್ಲಡ್ಕ, ಕೃಷ್ಣ ಅಮೀನ್, ಗಂಜಿಮಠ ಪಂ.ಅಧ್ಯಕ್ಷೆ ಮಾಲತಿ, ರೋಸಾಮಿಸ್ತಿಕಾ ಪ್ರಿನ್ಸಿಪಾಲ್ ಸಾಧನಾ ಡಿಸೋಜಾ, ಮೆಲ್ವಿನ್ ಡಿಸೋಜಾ, ಶ್ರೀಧರ್ ಮಳಲಿ, ರಾಜ್ ಕುಮಾರ್ ಶೆಟ್ಟಿ ತಿರುವೈಲುಗುತ್ತು, ನೀರುಡೆ ಮುಚ್ಚೂರು ಲಯನ್ಸ್ ಕ್ಲಬ್ ಅಧ್ಯಕ್ಷ ರೋಷನ್ ಡಿಸೋಜಾ, ಪವಿತ್ರಾ ಸನಿಲ್, ದೀಪಕ್ ಪೆರ್ಮುದೆ, ಹಫೀಸ್ ಪೆರ್ಮುದೆ, ಪದ್ಮನಾಭ ಕೋಟ್ಯಾನ್, ಇನಾಯತ್ ಅಲಿ ಅಭಿಮಾನಿ ಬಳಗದ ಅಧ್ಯಕ್ಷ ಇಕ್ಬಾಲ್ ಹಲಿಯಾರ್, ಯುಪಿ ಇಬ್ರಾಹಿಂ, ಸುರತ್ಕಲ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುಹಮ್ಮದ್ ಸಮೀರ್ ಕಾಟಿಪಳ್ಳ, ಮಾಸ್ಟರ್ ಶೆಪ್ ವಿನ್ನರ್ ಮುಹಮ್ಮದ್ ಆಶಿಕ್, ಗಿರೀಶ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.
ಸಫಲ್ ಕೆ.ಬಿ.ಎನ್. ಕುಡ್ತಮುಗೇರು ಕಾರ್ಯಕ್ರಮ ನಿರೂಪಿಸಿದರು.