ಶಿಮಂತೂರು: ವಿಜೃಂಭಣೆಯ ಸಾರ್ವಜನಿಕ ಲಕ್ಷ ತುಳಸಿ ಅರ್ಚನೆ

ಮುಲ್ಕಿ: ಇತಿಹಾಸ ಪ್ರಸಿದ್ಧ ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನದಲ್ಲಿ ಗುರುವಾರ ಸಿಂಹ ಸಂಕ್ರಮಣದ ಶುಭದಿನದಂದು ಸಾರ್ವಜನಿಕ ಲಕ್ಷ ತುಳಸಿ ಅರ್ಚನೆ ವಿಜೃಂಭಣೆಯಿಂದ ನಡೆಯಿತು
ಕ್ಷೇತ್ರದ ತಂತ್ರಿಗಳಾದ ಶಿಬರೂರು ವೇದವ್ಯಾಸ ತಂತ್ರಿ ಹಾಗೂ ಅರ್ಚಕ ಪುರುಷೋತ್ತಮ ಭಟ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆದು ಸಾರ್ವಜನಿಕ ಲಕ್ಷ ತುಳಸಿ ಅರ್ಚನೆಗೆ ಚಾಲನೆ ನೀಡಿದರು.
ಈ ಸಂದರ್ಭ ದೇವಸ್ಥಾನದ ಶ್ರೀಪತಿ ಭಟ್, ಸೀತಾರಾಮ್ ಭಟ್, ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಎನ್ ಶೆಟ್ಟಿ, ಅತಿಕಾರಿಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ,ಉಪಾಧ್ಯಕ್ಷ ಮನೋಹರ ಕೋಟ್ಯಾನ್, ಸದಸ್ಯೆ ಪದ್ಮಿನಿ ಶೆಟ್ಟಿ, ಕೃಷ್ಣಶೆಟ್ಟಿಗಾರ್ ಅಂಗಾರಗುಡ್ಡೆ ಕಿಲ್ಪಾಡಿ ಗ್ರಾ.ಪಂ. ಅಧ್ಯಕ್ಷ ವಿಕಾಸ್ ಶೆಟ್ಟಿ, ಸದಸ್ಯೆ ಮಮತಾ ಶೆಟ್ಟಿ,ಸತೀಶ್ ಶೆಟ್ಟಿ ಕೆಂಚನಕೆರೆ, ಜಯಕರ ಶೆಟ್ಟಿ ಮುಂಬೈ, ಮೋಹನ್ ದಾಸ್ ಶೆಟ್ಟಿ, ಶ್ರೀಕಾಂತ್ ಶೆಟ್ಟಿ ಕೆಂಚನಕೆರೆ, ಸತೀಶ್ ಶೆಟ್ಟಿ ಕೆಂಚನಕೆರೆ, ನಾಗರಾಜ ಶೆಟ್ಟಿ ಶಿಮಂತೂರು ಬಾವ, ಕರುಣಾಕರ ಶೆಟ್ಟಿ, ಉದಯಕುಮಾರ್ ಶೆಟ್ಟಿ ಅಧಿಧನ್, ಯುವಕ ಮಂಡಲದ ಅಧ್ಯಕ್ಷ ಕಿಶೋರ್ ಶೆಟ್ಟಿ, ಉಪಾಧ್ಯಕ್ಷ ಪ್ರವೀಣ್, ಮೋಹನ್ ಕೋಟ್ಯಾನ್ ಶಿಮಂತೂರು,ರಾಘು ಶೆಟ್ಟಿ ಲಾಯಿದೆ ಮನೆ,ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ದಿನೇಶ್ಚಂದ್ರ ಆಜಿಲ, ಹರೀಶ್ ಶೆಟ್ಟಿ, ಚಂದ್ರಹಾಸ ಸುವರ್ಣ,ವಿಶ್ವನಾಥ ಶೆಟ್ಟಿ, ಶಶಿಕಲಾ ಎನ್.ಕಲ್ಪನಾ ಪಿ. ಬಲ್ಲಾಳ್, ಮತ್ತಿತರರು ಉಪಸ್ಥಿತರಿದ್ದರು
ಇದೇ ಸಂದರ್ಭದಲ್ಲಿ ಬೆಂಗಳೂರಿನ ಅಂತರಾಷ್ಟ್ರೀಯ ವಾಸ್ತುತಜ್ಞ ಹಾಗೂ ವೈಜ್ಞಾನಿಕ ಜ್ಯೋತಿಷಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕರಾದ ರಜನಿಸಿ ಭಟ್, ರಾಹುಲ್ ಚಂದ್ರಶೇಖರ್ ಕ್ಷೇತ್ರಕ್ಕೆ ಭೇಟಿ ನೀಡಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು
ಮಧ್ಯಾಹ್ನ ಶ್ರೀ ದೇವರಿಗೆ ಮಧ್ಯಾಹ್ನ ಮಹಾಪೂಜೆ, ಶಿಮಂತೂರು ಗ್ರಾಮದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.

error: Content is protected !!