ಮಂಗಳೂರು ಮಾರುಕಟ್ಟೆಗೆ ಮೋಂಟ್ರ ಎಲೆಕ್ಟ್ರಿಕ್‌ ಆಟೋ ಬಿಡುಗಡೆ


ಜೆಪ್ಪು ತನಿಯ ಮೋಟಾಸ್೯ನಿಂದ ಆರಂಭದ ಡೆಲಿವರಿ ಪಡೆದುಕೊಂಡ ಗ್ರಾಹಕರು
ಮಂಗಳೂರು: ಮೋಂಟ್ರ ಸಂಸ್ಥೆಯ ಸುಪರ್‌ ಆಟೋ ಮಂಗಳೂರಿನ ಮಾರುಕಟ್ಟೆಗೆ ಸೋಮವಾರ ಬಿಡುಗಡೆಗೊಂಡಿತು. ಜಪ್ಪಿನಮೊಗರುವಿನಲ್ಲಿರುವ ತನಿಯ ಮೋಂಟ್ರಾ ಷೋರೂಮಿನಲ್ಲಿ ಮೊದಲ ಇಬ್ಬರು ಗ್ರಾಹಕರಿಗೆ ಆಟೋ ರಿಕ್ಷಾಗಳ ಕೀಲಿಕೈಯನ್ನು ಹಸ್ತಾಂತರಿಸಲಾಯಿತು.

ಮೋಂಟ್ರ ಇಲೆಕ್ಟ್ರಿಕ್‌ ಸಂಸ್ಥೆಯ ಪ್ರಾದೇಶಿಕ ಮಾರುಕಟ್ಟೆ ವಿಭಾಗ ಮುಖ್ಯಸ್ಥ ಕಾಮೇಶ್‌ ಆರುಮುಗಂ ಹಾಗೂ ಸಂಸ್ಥೆಯ ರಿಸರ್ಚ್‌ ಆಂಡ್‌ ಡೆವಲಪ್‌ಮೆಂಟ್‌ ವಿಭಾಗ ಮುಖ್ಯಸ್ಥ ಡಾ.ಶಿವಕುಮಾರ್‌  ಆಟೋ ಕೀಲಿಕೈಯನ್ನು ಗ್ರಾಹಕರುಗಳಾದ ಪ್ರಶಾಂತ್‌ ಕುಲಾಲ್‌ ಹಾಗೂ ಪ್ರಭಾಕರ್‌ ಕುಲಾಲ್‌ ಅವರಿಗೆ ಹಸ್ತಾಂತರಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಮೇಶ್ ಆರುಮುಗಂ, ವಿಭಿನ್ನ ರೀತಿಯಲ್ಲಿ ಆಟೋ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಅನುಕೂಲವಾಗುವಂತೆ  ಮೋಂಟ್ರ ಆಟೋ ರಿಕ್ಷಾ ಸಿದ್ಧಪಡಿಸಲಾಗಿದೆ. ಹೆಚ್ಚು ಮೈಲೇಜ್‌, ಪಿಕಪ್‌ ಹಾಗೂ ಚಾಲಕನ ಸೀಟು ಎತ್ತರವಾಗಿ ಇರುವುದರಿಂದ ಹೆಚ್ಚು ದುಡಿಮೆಯೊಂದಿಗೆ ಅನುಕೂಲತೆಗಳು ಹೆಚ್ಚಿವೆ.  ಪ್ರಯಾಣಿಕರಿಗೂ ಹಿಂಬದಿಯಲ್ಲಿ ಅತಿ ಉದ್ದನೆಯ ಸೀಟು ಹಾಗೂ ಲಗೇಜ್‌ ಗಳನ್ನು ಇಡಲು ಪ್ರತ್ಯೇಕ ಢಿಕ್ಕಿ ವ್ಯವಸ್ಥೆಗಳು ಇವೆ.  ದೇಶದಾದ್ಯಂತ ಮಾರುಕಟ್ಟೆಗಳಲ್ಲಿ ಲಭ್ಯವಿದ್ದು, ಗ್ರಾಹಕರು ರಿಕ್ಷಾ ಮೇಲೆ ಒಳ್ಳೆಯ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ ಎಂದರು.
ಡಾ.ಸಿವಕುಮಾರ್‌ ಮಾತನಾಡಿ,  ಮಂಗಳೂರು ಹಾಗೂ ಉಡುಪಿ ನಾಗರಿಕರಿಗೆ ಇದೊಂದು ಶುಭಸುದ್ಧಿ .  ಕಾತುರದಿಂದ ಕಾಯುತ್ತಿದ್ದ ಗ್ರಾಹಕರಿಗೆ ಇಂದು  ರಿಕ್ಷಾ ಕೈ ಸೇರಿದೆ.  ಅತಿ ಹೆಚ್ಚು ಬೇಡಿಕೆಗಳು ಮಂಗಳೂರಿನಾದ್ಯಂತ ವ್ಯಕ್ತವಾಗಿದ್ದು,  ಎಲ್ಲರಿಗೂ ಸಮಯಕ್ಕೆ ಸರಿಯಾಗಿ ಡೆಲಿವರಿಯನ್ನು ನೀಡುವ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ಕಲ್ಪಿಸಲಾಗುವುದು.  ಎಲ್ಲಾ ರೀತಿಯಲ್ಲಿ ಪ್ರಯಾಣಿಕರಿಗೆ ಹಾಗೂ ಚಾಲಕರಿಗೆ ಅನುಕೂಲತೆಗಳು ಹೆಚ್ಚಿರುವುದರಿಂದ ಸೂಪರ್‌ ಆಟೋ ಎಂದು ಕರೆಯಲಾಗುತ್ತಿದೆ. ಸರ್ವಿಸ್‌ ವಿಚಾರದಲ್ಲಿಯೂ ಪರಿಣಾಮಕಾರಿ ಹೊಣೆಯನ್ನು ಸಂಸ್ಥೆ ವಹಿಸಿದೆ ಎಂದರು.
ಈ ಸಂದರ್ಭ ಟೆರಿಟರಿ ಸರ್ವಿಸ್‌ ಮೆನೇಜರ್‌ ಬಾನು ಪ್ರತಾಪ್‌, ಶ್ರೀ ಡೆವಲಪರ್ಸ್‌ ನ ಗಿರೀಶ್‌ ಎಂ. ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ತನಿಯ ಮೋಂಟ್ರ ಸಂಸ್ಥೆಯ ಮಾಲೀಕ ಗೌತಮ್‌ ಜಿ. ಕುಲಾಲ್‌ , ಸಂಧ್ಯಾ ಗೌತಮ್‌ ಕೋಟ್ಯಾನ್‌ ಹಾಗೂ ಸ್ವಾಮಿ ಪ್ರಸಾದ್‌ ಮೂಡಬಿದ್ರೆ  ಉಪಸ್ಥಿತರಿದ್ದರು.

ಗ್ರಾಹಕ ಪ್ರಶಾಂತ್‌ ಕುಲಾಲ್‌ ಮಾತನಾಡಿ, ನೂತನ ರಿಕ್ಷಕ್ಕಾಗಿ ಹುಡುಕಾಡುತ್ತಿದ್ದೆವು. ಯುಟ್ಯೂಬ್‌ ಮೂಲಕ ಹುಡುಕಾಡುತ್ತಿದ್ದಾಗ  ಮೋಂಟ್ರ ರಿಕ್ಷಾದ ಪರಿಚಯವಾಗಿತ್ತು. ಅದಕ್ಕಾಗಿ ಸಂಪರ್ಕಿಸಿ ರಿಕ್ಷಾ ಟ್ರಯಲ್‌ ನೋಡಿದಾಗ ಅಧ್ಭುತವಾಗಿತ್ತು.  ಗ್ರಾಮೀಣ ಭಾಗದ ರಸ್ತೆಗಳಲ್ಲಿ ಪಿಕಪ್‌ ಕಂಡು  ಅದ್ಭುತ ಅನಿಸಿತ್ತು. ಅಲ್ಲದೆ ಹೆಚ್ಚು ಪ್ರಯಾಣಿಕರನ್ನು ಕುಳಿತು ಆರಾಮವಾಗಿ ಪ್ರಯಾಣಿಸಬಹುದು. ಮೈಲೇಜ್‌ ಜಾಸ್ತಿಯಾಗಿರುವುದರಿಂದ ಸಂಪಾದಿಸಿದ ಆದಾಯದಲ್ಲಿ ಮನೆಯ ಜವಾಬ್ದಾರಿಯನ್ನು ನಿಭಾಯಿಸಬಹುದು. ಬಹುದಿನಗಳಿಂದ ನಿರೀಕ್ಷಿಸುತ್ತಿದ್ದೆವು, ಇದೀಗ ರಿಕ್ಷಾ ಕೈ ಸೇರಿರುವುದು ಖುಷಿಯಾಗಿದೆ.

ಇನ್ನೋರ್ವ ಗ್ರಾಹಕ ಪ್ರಭಾಕರ್ ಕುಲಾಲ್ ಮಾತನಾಡಿ ಮೌಂಟ್ರಾ ರಿಕ್ಷಾ ವೈಶಿಷ್ಟ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಆಟೋರಿಕ್ಷಾ ಚಾಲಕರಿಗೆ ಇದೊಂದು ಉತ್ತಮ ವರದಾನವಾಗಿದೆ. ಆದಷ್ಟು ಶೀಘ್ರದಲ್ಲಿ ಗ್ರಾಹಕರಿಗೆ ತಲುಪುವಂತಾಗಲಿ ಎಂದು ಶುಭ ಹಾರೈಸಿದರು

ನೀರುಮಾರ್ಗದ ಗ್ರಾಹಕರಾದ ಅರುಣ್ ಅವರು ಮಾತನಾಡಿ ಮಾರುಕಟ್ಟೆಯಲ್ಲಿ ಇದೊಂದು ಅತ್ಯುತ್ತಮ ಎಲೆಕ್ಟ್ರಿಕ್ ಆಟೋರಿಕ್ಷಾ ಆಗಿದೆ. ಸುಮಾರು ಆರು ತಿಂಗಳಿಂದ ಕಾದು ಈಗ ಇದು ಕೈ ಸೇರುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

error: Content is protected !!