ಸ್ಮಾರ್ಟ್ ಸಿಟಿಯಿಂದ ನಿರ್ಮಾಣಗೊಂಡ ಕಾವೂರು ಕೆರೆ ಲೋಕಾರ್ಪಣೆ

ಸುರತ್ಕಲ್: ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ವತಿಯಿಂದ 8 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿಗೊಂಡಿರುವ ಕಾವೂರು ಕೆರೆಯನ್ನು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಲೋಕಾರ್ಪಣೆಗೊಳಿಸಿದರು.


ಕೆರೆ ಹಾಗೂ ವಾಕಿಂಗ್ ಪಾಥ್ ಉದ್ಘಾಟನೆ ನೆರವೇರಿಸಿ ಮಾತಾಡಿದ ಅವರು, “ಕಾವೂರು ಕೆರೆಯನ್ನು ಅಭಿವೃದ್ಧಿ ಪಡಿಸುವಾಗ ಒಂದೇ ಒಂದು ಮರವನ್ನು ಕಡಿದಿಲ್ಲ. ಪ್ರಕೃತಿಗೆ ತೊಂದರೆಯಾಗದಂತೆ ಕೆರೆಯನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಿ ಲೋಕಾರ್ಪಣೆಗೊಳಿಸಲಾಗಿದೆ. ಇದೇ ಕೆರೆ ರೀತಿಯಲ್ಲಿ ಪಣಂಬೂರು ಬೀಚ್, ಸುರತ್ಕಲ್ ಬೀಚ್, ನಾಯರ್ ಕುದ್ರು ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಆದಷ್ಟು ಶೀಘ್ರವಾಗಿ ಎಲ್ಲ ಯೋಜನೆ ಪೂರ್ಣಗೊಳಿಸಿ ಜನರ ಅನುಕೂಲಕ್ಕೆ ಒದಗಿಸಲಾಗುತ್ತದೆ” ಎಂದರು.
ಬಳಿಕ ಮಾತಾಡಿದ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, “ರಾಜಕೀಯ ಬೇರೆ ಅಭಿವೃದ್ಧಿ ಬೇರೆ, ಅಭಿವೃದ್ಧಿ ವಿಚಾರ ಬಂದಾಗ ನಾವೆಲ್ಲರೂ ಒಂದಾಗಿ ಕೆಲಸ ಮಾಡುತ್ತೇವೆ. ಅದುವೇ ಬಿಜೆಪಿ ಪಕ್ಷದ ವಿಶೇಷತೆಯಾಗಿದೆ. ಕಾವೂರು ಕೆರೆಯಲ್ಲಿ ಧಾರ್ಮಿಕ ನಂಬಿಕೆ ಅಡಗಿದೆ. ಮಹಾಲಿಂಗೇಶ್ವರ ದೇವರ ಜಳಕದ ಕೆರೆಯೂ ಇದೇ ಆಗಿದ್ದು ಕೆರೆಯನ್ನು ಅಭಿವೃದ್ಧಿಪಡಿಸುವಲ್ಲಿ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು” ಎಂದರು.
ವೇದಿಕೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ., ಮಂಗಳೂರು ಮೇಯರ್ ಜಯಾನಂದ ಅಂಚನ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಕಾವೂರು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ್ ಭಟ್, ಮನಪಾ ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು, ಕಾವೂರು ಕೆರೆ ಅಭಿವೃದ್ಧಿ ಅಧ್ಯಕ್ಷ ದೀಪಕ್ ಪೂಜಾರಿ, ಸ್ಮಾರ್ಟ್ ಸಿಟಿ ನಿರ್ದೇಶಕ ಅರುಣ್ ಪ್ರಭಾ, ಕಾರ್ಪೋರೇಟರ್ ಗಳಾದ ಲೋಕೇಶ್ ಬೊಳ್ಳಾಜೆ, ಶ್ವೇತಾ ಪೂಜಾರಿ, ರೂಪಶ್ರೀ ಪೂಜಾರಿ, ವರುಣ್ ಚೌಟ, ಸುಮಂಗಳ, ಗಾಯತ್ರಿ ರಾವ್, ನಯನಾ ಕೋಟ್ಯಾನ್, ಲೋಹಿತ್ ಅಮೀನ್, ಸಂಗೀತ ನಾಯಕ್, ಶೋಭಾ ರಾಜೇಶ್, ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ್, ಪ್ರೇಮಾನಂದ ಶೆಟ್ಟಿ, ಸಂಗೀತಾ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!