ಸುರತ್ಕಲ್: “ಅಲಿ ಮತ್ತು ಬಾವಾ ಚುನಾವಣೆ ಬಂದಾಗ ದೇವಸ್ಥಾನ, ದೈವಸ್ಥಾನ, ಕೋಲ, ಬಲಿ, ನೇಮ, ಯಕ್ಷಗಾನಕ್ಕೆಲ್ಲ ಹೋಗ್ತಾ ಇದ್ದಾರೆ. ಅಲ್ಲಿ ಪೂಜೆ ಮಾಡಿಸಿ ಗಂಧ ಪ್ರಸಾದ ತಗೋತಿದ್ದಾರೆ. ನಾನು ಇದನ್ನೇ ಪ್ರಶ್ನೆ ಮಾಡಿದ್ದೇನೆ. ನೀವು ತಗೊಂಡ ಗಂಧ ಪ್ರಸಾದ ಏನ್ ಮಾಡ್ತೀರಿ? ಇದಕ್ಕೆ ಉತ್ತರಿಸದೆ ನೀವು ಮಾಧ್ಯಮಗಳ ಮುಂದೆ ಹೋಗಿ ಏನೇನೋ ಮಾತಾಡೋದು ಅಗತ್ಯವಿಲ್ಲ. ನಮಗೆ ನೀವು ಆ ಪ್ರಸಾದವನ್ನು ಏನ್ ಮಾಡ್ತೀರಿ ಅನ್ನೋದು ತಿಳಿದಿದೆ” ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ. ಅವರು ತಮ್ಮ ಹೇಳಿಕೆಯನ್ನು ಪುನರುಚ್ಛರಿಸಿದರು.
ಅವರು ಅಡ್ಯಾರ್ ನಲ್ಲಿ ಜರುಗಿದ ಸಾರ್ವಜನಿಕ ಸಭೆಯಲ್ಲಿ ಮಾತಾಡುತ್ತಾ “ಬಾವಲಿಗಳಂತೆ ಟಿಕೆಟ್ ಆಸೆಗಾಗಿ ಜನರನ್ನು ಮಂಗ ಮಾಡಲು ಇದು ಬುದ್ಧಿವಂತರ ಜಿಲ್ಲೆ. ಇಲ್ಲಿ ಹಣಕ್ಕಾಗಿ ವೋಟ್ ಮಾರುವ ಜನರು ಇಲ್ಲ, ಹಣ ಹಂಚಿದರೆ ನಿಮ್ಮ ಹಣ ಖಾಲಿಯಾದೀತೇ ಹೊರತು ವೋಟ್ ಬೀಳಲ್ಲ” ಎಂದು ಹೇಳಿದರು.
ವೇದಿಕೆಯಲ್ಲಿ ಅಜಿತ್ ಶೆಟ್ಟಿ ಅಡ್ಯಾರ್, ಪ್ರಸಾದ್ ಸಾಮಾನಿ, ಸುಜಿತ್ ಅಡ್ಯಾರ್, ಪ್ರಸನ್ನ ಮತ್ತಿತರರು ಉಪಸ್ಥಿತರಿದ್ದರು.