ಎಸ್.ಡಿ.ಪಿ.ಐ. ತಲಪಾಡಿ ಗ್ರಾಮ ಸಮಿತಿ ವತಿಯಿಂದ “ರಕ್ತ ಕೊಟ್ಟು-ಬಾಂಧವ್ಯ ಕಟ್ಟು” ಅಭಿಯಾನ

ಉಳ್ಳಾಲ: ಎಸ್.ಡಿ.ಪಿ.ಐ. ತಲಪಾಡಿ ಗ್ರಾಮ ಸಮಿತಿ ಹಾಗೂ ಯನೇಪೋಯ ಮೆಡಿಕಲ್ ಕಾಲೇಜ್ ಆಸ್ಪತ್ರೆ ಸಹಯೋಗದೊಂದಿಗೆ ರಕ್ತದಾನ ಶಿಬಿರ ಹಾಗೂ ಹಲವು ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ತಲಪಾಡಿಯಲ್ಲಿ ಯಶಸ್ವಿಯಾಗಿ ನಡೆಯಿತು.

 

ಕಾರ್ಯಕ್ರಮದಲ್ಲಿ ಹಸಿವು ಮುಕ್ತ ಭಯಮುಕ್ತ ಚಳುವಳಿಯ ಸಾರಥಿ ಶೋಷಿತ ವರ್ಗದ ದ್ವನಿ SDPI ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಭಾಗವಹಿಸಿ ಶುಭ ಹಾರೈಸಿದರು.

ಬೆಂಗಳೂರಿನಲ್ಲಿ ಹೈ ಕೋರ್ಟ್ ನ್ಯಾಯವಾದಿಯಾಗಿ ಸೇವೆ ಸಲ್ಲಿಸುತ್ತಿರುವ ಸಮಾಜ ಸೇವಕ ಫಲಾಹ್ ವಿದ್ಯಾಸಂಸ್ಥೆಯ ಸಂಚಾಲಕರಾದ ಅಡ್ವೊಕೇಟ್ ಮುಜಫರ್ ಅಹಮದ್, ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಇರ್ಷಾದ್ ಅಜ್ಜಿನಡ್ಕ, ಕೊರೋನ ಸಮಯದಲ್ಲಿ ರೋಗಿಗಳ ಶುಶ್ರೂಷೆಯಲ್ಲಿ ಮುಂಚೂಣಿಯಲ್ಲಿದ್ದು ಬಿ ಹ್ಯೂಮನ್ ಸಂಸ್ಥೆ ಕಟ್ಟಿ ಸಮಾಜಕ್ಕೆ ಒಳಿತನ್ನು ಬಯಸುತ್ತಿರುವ ಆಸಿಫ್ ಡೀಲ್ಸ್, ಸಿರಾಜುಲ್ ಹುದಾ ಎಜುಕೇಷನ್ ಟ್ರಸ್ಟ್ ಅಧ್ಯಕ್ಷರಾದ ಅಬ್ಬಾಸ್ ಯು ಸಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಹೈ ಜಂಪ್ ಸ್ಪರ್ದೆಯಲ್ಲಿ ತೃತೀಯ ಸ್ಥಾನ ಪಡೆದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಲಪಾಡಿ ಪಟ್ನ ವಿದ್ಯಾರ್ಥಿನಿ ಫಾತಿಮತ್ ಸನಾ,2021-22ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ 96 ಶೇಕಡಾ ಅಂಕ ಪಡೆದ ಮಹಮ್ಮದ್ ಇಸ್ಮಾಯಿಲ್ ಫಝಲ್, C A foundation ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲೇ 62ಶೇಕಡಾ ಅಂಕವನ್ನು ಪಡೆದು ತೇರ್ಗಡೆಯಾದ ಪ್ರತಿಭಾವಂತ ವಿದ್ಯಾರ್ಥಿ ಮುನೀಮ್ ಅಹಮದ್,ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆಗೈದು ಹೆಸರು ಗಳಿಸುತ್ತಿರುವ ಸಿಟಿಜನ್ಸ್ ಅಕಾಡೆಮಿ ಅಧ್ಯಕ್ಷರಾದ ಫೈಝಲ್ ಇವರುಗಳನ್ನು SDPI ತಲಪಾಡಿ ಗ್ರಾಮಸಮಿತಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

error: Content is protected !!