ಸುರತ್ಕಲ್: ಸೂರಿಂಜೆ ಬಳಿಯ ಪುಚ್ಚಾಡಿ ಎಂಬಲ್ಲಿನ ಗುಡ್ಡ ಪ್ರದೇಶಕ್ಕೆ ಬೆಂಕಿ ತಗುಲಿದ್ದು ಕಳೆದೆರಡು ದಿನಗಳಿಂದ ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.
ಹಲವು ಎಕ್ರೆಗಳಷ್ಟು ವಿಸ್ತೀರ್ಣದ ಗುಡ್ಡಕ್ಕೆ ಬೆಂಕಿ ತಗುಲಿದ್ದು ಆಕಸ್ಮಿಕವೋ ಅಥವಾ ಕಿಡಿಗೇಡಿಗಳ ಕೃತ್ಯವೋ ತಿಳಿದುಬಂದಿಲ್ಲ.
ಹುಲ್ಲು, ತರಗೆಲೆ ಒಣಗಿರುವ ಪರಿಣಾಮ ಬೆಂಕಿ ನಿಯಂತ್ರಣಕ್ಕೆ ಬರುತ್ತಿಲ್ಲ. ಭಾರೀ ಬೆಂಕಿ, ಹೊಗೆ ವ್ಯಾಪಿಸಿದ್ದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.