ಕಾಟಿಪಳ್ಳ ಉತ್ತರ 5ನೇ ವಾರ್ಡ್ ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ 1 ಕೋಟಿ 18.5 ಲಕ್ಷ ರೂ. ಅನುದಾನದಲ್ಲಿ ಗುದ್ದಲಿಪೂಜೆ!

ಸುರತ್ಕಲ್: ಮನಪಾ ವ್ಯಾಪ್ತಿಯ ಕಾಟಿಪಳ್ಳ ಉತ್ತರ 5ನೇ ವಾರ್ಡ್ ಸಮಗ್ರ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆ ಹಾಗೂ ಶಾಸಕರ ನಿಧಿಯಿಂದ 1 ಕೋಟಿ 18.5 ಲಕ್ಷ ರೂ. ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ವೈ. ಅವರು ಬುಧವಾರ ಸಂಜೆ ಗುದ್ದಲಿಪೂಜೆ ನೆರವೇರಿಸಿದರು.


ಬಳಿಕ ಮಾತಾಡಿದ ಶಾಸಕರು, “ವಾರ್ಡ್ ನಲ್ಲಿ ಅನೇಕ ಸಣ್ಣ ಸಣ್ಣ ಕಾಮಗಾರಿಗಳು ಕಳೆದ ಹಲವು ಸಮಯಗಳಿಂದ ಬಾಕಿ ಉಳಿದಿತ್ತು. ಅದರ ಜೊತೆಗೆ ತಡೆಗೋಡೆ, ಚರಂಡಿ ಕಾಮಗಾರಿ, ರಸ್ತೆ, ಚಪ್ಪಡಿ ಕಲ್ಲು ಹಾಸುವ ಕಾಮಗಾರಿಗೂ ಚಾಲನೆ ನೀಡಲಾಗಿದೆ. ಇನ್ನು ಕೆಲವೇ ತಿಂಗಳಲ್ಲಿ ಕಾಮಗಾರಿ ಮುಗಿಯಲಿದೆ. ಚುನಾವಣೆ ಸಂದರ್ಭದಲ್ಲಿ ವಿರೋಧಿಗಳು ಏನೇ ಅಪಪ್ರಚಾರ ನಡೆಸಿದರೂ ಕಿವಿಗೊಡುವ ಪ್ರಶ್ನೆಯಿಲ್ಲ. ಅಪಪ್ರಚಾರಕ್ಕೆ ಅಭಿವೃದ್ಧಿ ಕಾರ್ಯಗಳಿಂದಲೇ ಉತ್ತರ ನೀಡುತ್ತೇನೆ” ಎಂದರು.


ಇದೇ ವೇಳೆ ಸಾರ್ವಜನಿಕ ಬಾವಿಯನ್ನು ಜನರ ಅವಶ್ಯಕತೆಗಾಗಿ ಲೋಕಾರ್ಪಣೆಗೊಳಿಸಲಾಯಿತು.
ಮಂಗಳೂರು ಉತ್ತರ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ, ತಿಲಕ್ ರಾಜ್ ಕೃಷ್ಣಾಪುರ, ಹರಿಪ್ರಸಾದ್, ರಾಜೇಶ್ ಕುಮಾರ್, ಹೆಚ್. ಎಸ್. ಸುನಿಲ್, ಸತೀಶ್ ಭಟ್, ಲೋಹಿತ್ ಕುಮಾರ್, ರವಿ ಪೂಜಾರಿ, ಸುರೇಶ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

error: Content is protected !!