ಸುರತ್ಕಲ್: ವಾಯ್ಸ್ ಆಫ್ ಬ್ಲಡ್ ಡೋನರ್ಸ್ ವತಿಯಿಂದ ಲಯನ್ಸ್ ಕ್ಲಬ್ ಬಿಜೈ, ಬಂದರ್ ಫ್ರೆಂಡ್ಸ್ ಹಾಗೂ ವಫಾ ಎಂಟರ್ ಪ್ರೈಸಸ್ ಕಾಟಿಪಳ್ಳ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ ಬಂದರ್ ನ ಕಸಾಯಿಗಲ್ಲಿ ಮತ್ತು ಕಾಟಿಪಳ್ಳದಲ್ಲಿ ಜರುಗಿತು.
ಈ ವೇಳೆ ಮಾತಾಡಿದ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಸಂಸ್ಥಾಪಕ ರವೂಫ್ ಬಂದರ್ ಅವರು, “ರಕ್ತದಾನ ಅತ್ಯಂತ ಶ್ರೇಷ್ಠವಾದ ದಾನವಾಗಿದೆ. ಇದರ ಮಹತ್ವವನ್ನು ಜನಸಾಮಾನ್ಯರು ಅರಿಯುವ ಮೂಲಕ ಆಸ್ಪತ್ರೆಗಳ ಬ್ಲಡ್ ಬ್ಯಾಂಕ್ ಗಳಲ್ಲಿ ರಕ್ತದ ಕೊರತೆಯನ್ನು ನೀಗಿಸಬೇಕು. ಕಳೆದ ಹಲವು ವರ್ಷಗಳಿಂದ ಸಮಾಜದಲ್ಲಿ ರಕ್ತದಾನ ಮತ್ತು ಅರಿವನ್ನು ಮೂಡಿಸುತ್ತಿರುವ ಸಂಘಟನೆ ಈ ಮೂಲಕ ಸಾವಿರಾರು ಮಂದಿಯ ಸಂಕಷ್ಟಕ್ಕೆ ಸ್ಪಂದಿಸಿದ ತೃಪ್ತಿಯಿದೆ. ಇನ್ನು ಮುಂದಿನ ದಿನಗಳಲ್ಲಿ ನೇತ್ರದಾನದ ಕುರಿತು ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಸಂಘಟನೆ ನಡೆಸಲಿದೆ” ಎಂದರು.
ಸಂಘಟನೆಯ ಅಧ್ಯಕ್ಷ ಡಾ. ಲಯನ್ ಒಸ್ವಾಲ್ಡ್ ಫುರ್ತಾಡೋ, ಬಂದರ್ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ಫಯಾಜ್ ಬಂದರ್, ಬಿ ಹ್ಯೂಮನ್ ಸ್ಥಾಪಕಾಧ್ಯಕ್ಷ ಆಸೀಫ್ ಡೀಲ್ಸ್, ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಕಾರ್ಯದರ್ಶಿ ರೂಬಿಯ ಅಖ್ತರ್, ಅಲಿಷಾ ಅಮಿನ್, ಝಹೀರ್ ಅಬ್ಬಾಸ್, ವಫಾ ಎಂಟರ್ ಪ್ರೈಸಸ್ ಸ್ಥಾಪಕ ಅಬ್ದುಲ್ ವಹಾಬ್, ಪಾಲುದಾರರಾದ ಅಹ್ಮದ್ ಖುರೇಷಿ, ಅಬ್ದುಲ್ ನಾಸಿರ್ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅಶಕ್ತರಿಗೆ ವೀಲ್ ಚೆಯರ್, ವಾಕರ್ ನೀಡಲಾಯಿತು. ಒಟ್ಟು 250 ಯುನಿಟ್ ರಕ್ತ ಸಂಗ್ರಹಿಸಲಾಗಿಯಿತು.