“ವಿವೇಕಾನಂದರು ಯುವ ಸಮುದಾಯದ ಮೇಲೆ ಇಟ್ಟಿರುವ ಭರವಸೆ ಸಾಕಾರಗೊಳಿಸಲು ಶ್ರಮಿಸಬೇಕಿದೆ” -ಭಾಸ್ಕರ್ ಅಮೀನ್ ತೋಕೂರು

ಹಳೆಯಂಗಡಿ: ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ರೋಟರಿ ಕ್ಲಬ್ ಬೈಕಂಪಾಡಿ ಇದರ ಮಾರ್ಗದರ್ಶನಲ್ಲಿ ಫೇಮಸ್ ಯೂತ್ ಕ್ಲಬ್(ರಿ) ಮತ್ತು ಫೇಮಸ್ ಮಹಿಳಾ ಮಂಡಲ 10ನೇ ತೋಕೂರು, ಹಳೆಯಂಗಡಿ ಇದರ ಜಂಟಿ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ಯುವ ದಿನವನ್ನು ಸಂಸ್ಥೆಯ ಕಾರ್ಯಾಲಯದಲ್ಲಿ ಆಚರಿಸಲಾಯಿತು.


ಫೇಮಸ್ ಯೂತ್ ಕ್ಲಬ್ ಅಧ್ಯಕ್ಷ ಭಾಸ್ಕರ್ ಅಮೀನ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತಾಡುತ್ತಾ, “ಸ್ವಾಮಿ ವಿವೇಕಾನಂದರ ವ್ಯಕ್ತಿತ್ವವೇ ಯುವಪೀಳಿಗೆಗೆ ದಾರಿದೀಪ ಹಾಗೂ ಸ್ವಾಮಿ ವಿವೇಕಾನಂದರು ಯುವ ಸಮುದಾಯದ ಮೇಲೆ ಇಟ್ಟಿರುವ ಭರವಸೆಗಳನ್ನು ಸಾಕಾರಗೊಳಿಸಲು ಯುವ ಸಂಘಟನೆಗಳು ಶ್ರಮಿಸಬೇಕಿದೆ” ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

 

ಕಾರ್ಯಕ್ರಮದಲ್ಲಿ ಯಕ್ಷದೇಗುಲ ಹತ್ತು ಸಮಸ್ತರು 10ನೇ ತೋಕೂರು ಸಂಸ್ಥೆಯ ಅಧ್ಯಕ್ಷ ಸುರೇಶ್ ಬಿ.ದೇವಾಡಿಗ, ವಿಶ್ವ ಬ್ಯಾಂಕ್ ಕುಡಿಯುವ ನೀರು ಮತ್ತು ಪರಿಸರ ನೈರ್ಮಲ್ಯ ಸಮಿತಿ ಕ್ಲಸ್ಟರ್-2 ರ ಅಧ್ಯಕ್ಷ ದಿನಕರ್ ಸಾಲ್ಯಾನ್ ಫೇಮಸ್ ಯೂತ್ ಕ್ಲಬ್ ಅಧ್ಯಕ್ಷ ಭಾಸ್ಕರ್ ಅಮೀನ್, ಫೇಮಸ್ ಯೂತ್ ಕ್ಲಬ್ ಮಹಿಳಾ ಮಂಡಲದ ಅಧ್ಯಕ್ಷೆ ಪ್ರೇಮಲತಾ ಯೋಗೀಶ್, ಭೋಜ ಕೋಟ್ಯಾನ್, ಹಿಮಕರ್ ಕೋಟ್ಯಾನ್, ನವೀನ್ ಚಂದ್ರ ಅಮೀನ್, ಅಮಿತ ದಿನಕರ್, ಕುಸುಮ ಹರೀಶ್ ಕೋಟ್ಯಾನ್, ಇಂದಿರಾ ಸಂಜೀವ ಕರ್ಕೇರ ಮತ್ತು ಸದಸ್ಯರು ಉಪಸ್ಥಿತರಿದ್ದರು. ಭಾಸ್ಕರ್ ಅಮೀನ್ ಸ್ವಾಗತಿಸಿ, ಸಂಪತ್ ಜೆ. ಶೆಟ್ಟಿ ಧನ್ಯವಾದವನ್ನು ಅರ್ಪಿಸಿದರು. ಮಹಮ್ಮದ್ ಶರೀಫ್ ನಿರೂಪಿಸಿದರು.

error: Content is protected !!