ಮಂಗಳೂರು: “ಬಾಂಬುಗಳನ್ನ ಸ್ಫೋಟಿಸಲು ದೇಶದ ಹೊರಗಿನಿಂದಲೇ ಬರುವವರ ನಿರೀಕ್ಷೆ ಯಾಕೆ ಮಾಡುತ್ತೀರಿ
ಅಲ್ಲಿಯ ಭಯೋತ್ಪಾದಕರಿಂದ ಪ್ರೇರಣೆಗೆ ಒಳಗಾಗಿ ದೇಶದ ಒಳಗೆ ಭಯೋತ್ಪಾದನೆಗೆ ಮುಂದಾಗಿರುವ ಉಗ್ರರನ್ನು ಬೆಂಬಲಿಸಿ ಮಾತಾಡುವಷ್ಟು ಕೀಳು ರಾಜಕೀಯವನ್ನು ಕಾಂಗ್ರೆಸ್ ಮಾಡುತ್ತಿರುವುದು ದೇಶದ ಭದ್ರತೆಗೆ ಅಪಾಯಕಾರಿ. ಈ ಬಗ್ಗೆ ಜಿಲ್ಲೆಯ ಕಾಂಗ್ರೆಸಿಗರು ಮೌನವಾಗಿರುವುದನ್ನು ನೋಡಿದರೆ ದೇಶದ ಬಗ್ಗೆ ಕಾಳಜಿ ಕಡಿಮೆ ಅಲ್ಪ ಸಂಖ್ಯಾತ ಓಟಿನ ಬಗ್ಗೆ ಹೆಚ್ಚು ಆಸಕ್ತಿ ಇರುವಂತಿದೆ” ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ ಭರತ್ ಶೆಟ್ಟಿ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಪಕ್ಷದ ನಾಯಕ ಡಿಕೆ ಶಿವಕುಮಾರ್ ಅವರು
ದೇಶದ ಒಳಗಡೆ ಮತ್ತೊಂದು ಪುಲ್ವಾಮಾ ಮುಂಬೈ ದಾಳಿ ಅಂತ ಉಗ್ರ ಕೃತ್ಯ ನಡೆಸಲು ತಯಾರಿ ಮಾಡಿಕೊಳ್ಳುತ್ತಿರುವ ಯುವ ಉಗ್ರರ ಬಗ್ಗೆ ಕರುಣೆಯಿಂದ ಮಾತನಾಡಿರುವುದು ವಿದ್ವಾಂಸಕ ಕೃತ್ಯ ಎಸಗಲು ಕಾಂಗ್ರೆಸ್ ಪಕ್ಷ ಪ್ರೇರಣೆ ನೀಡುವಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ.
ಕೂಡಲೇ ಕಾಂಗ್ರೆಸ್ ಪಕ್ಷದ ವರಿಷ್ಠರು ಮೌನ ಮುರಿಯಬೇಕು, ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಿ ಎಂದು ಸವಾಲು ಹಾಕಿದ್ದಾರೆ.