ಡಿ.16-23 “ತಿಬರಾಯನ”ಕ್ಕೆ ಶಿಬರೂರು ಕೊಡಮಣಿತ್ತಾಯ ದೈವಸ್ಥಾನ ಸಜ್ಜು

ಮಂಗಳೂರು: ಇತಿಹಾಸ ಪ್ರಸಿದ್ಧ ಶ್ರೀ ಕೊಡಮಣಿತ್ತಾಯ ಕ್ಷೇತ್ರ ಶಿಬರೂರು ಇಲ್ಲಿ ಡಿಸೆಂಬರ್ 16 ಶುಕ್ರವಾರದಿಂದ ಡಿ.23ನೇ ಶುಕ್ರವಾರದ ತನಕ ನಡೆಯುವ ವರ್ಷಾವಧಿ ಉತ್ಸವ “ತಿಬರಾಯನ” ಹಾಗೂ ಡಿ.17ನೇ ಶನಿವಾರದಂದು ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಶ್ರೀ ಕ್ಷೇತ್ರ ಸಜ್ಜುಗೊಂಡಿದೆ.

ಎಸ್. ವಾಸುದೇವ ಶಿಬಿರಾಯ, ಮೊಕ್ತೇಸರ ಪುರಂದರ ಎಂ. ಶೆಟ್ಟಿ ಮತ್ತು ಆಡಳಿತ ಮಂಡಳಿಯ ಸರ್ವ ಸದಸ್ಯರು, ತಿಬಾರಗುತ್ತಿನಾರ್ ಉಮೇಶ ಎನ್. ಶೆಟ್ಟಿ, ಶಿಬರೂರುಗುತ್ತು ಶ್ರೀ ಕಿಟ್ಟಣ್ಣ ಆರ್. ಶೆಟ್ಟಿ ಭಕ್ತರಿಗೆ ಪ್ರೀತಿಯ ಆಮಂತ್ರಣ ಕೋರಿದ್ದಾರೆ.


ಡಿ.17ರ ಶನಿವಾರ ಉತ್ಸವ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ 5.00 ಗಂಟೆಗೆ ನವಕ ಪ್ರಧಾನ ಕಲರಾಭಿಷೇಕ, ಮಹಾಪೂಜೆ ರಾತ್ರಿ 10.00 ಗಂಟೆಗೆ ಧ್ವಜಾರೋಹಣ ಬೆಳಿಗ್ಗೆ 7.30ರಿಂದ 9.00ರವರೆಗೆ ತುಲಾಭಾರ ಸೇವೆ ಬೆಳಿಗ್ಗೆ 10.00 ಗಂಟೆಗೆ ಶ್ರೀ ಉಳ್ಳಾಯ ದೈವದ ನೇಮೋತ್ಸವ, ಉರುಳು ಸೇವೆ, ಕಂಚೀಲು ಸೇವೆ, ಮಧ್ಯಾಹ್ನ 1.00 ಗಂಟೆಗೆ ಮಹಾ ಅನ್ನಸಂತರ್ಪಣೆ
ರಾತ್ರಿ 11.00 ಗಂಟೆಗೆ ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ ನಡೆಯಲಿದೆ.


18 ಆದಿತ್ಯವಾರದಂದು ರಾತ್ರಿ 9ರಿಂದ12 ಶ್ರೀ ಕಾಂತೇರಿ ಧೂಮಾವತಿ ದೈವದ ನೇಮೋತ್ಸವ ಹಾಗೂ 19 ಸೋಮವಾರದಂದು ರಾತ್ರಿ 9ರಿಂದ 12ರ ತನಕ ಸರಳ ಧೂಮಾವತಿ ದೈವದ ನೇಮೋತ್ಸವ ಹಾಗೂ 20ರಂದು ಮಂಗಳವಾರ ರಾತ್ರಿ 9ರಿಂದ 12 ಗಂಟೆಯ ತನಕ ಜಾರಂದಾಯ ದೈವದ ನೇಮೋತ್ಸವ ಮತ್ತು 21ರಂದು ಬುಧವಾರ ರಾತ್ರಿ 9ರಿಂದ 12ರವರೆಗೆ ಕೈಯ್ಯರು ಧೂಮಾವತಿ ದೈವದ ನೇಮೋತ್ಸವ, ರಾತ್ರಿ 9ರಿಂದ 12 ತನಕ ಪಿಲಿಚಾಮುಂಡಿ ದೈವದ ನೇಮೋತ್ಸವ ಹಾಗೂ ಕ್ಷೇತ್ರದಲ್ಲಿ ತುಲಾಭಾರ ಸೇವೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

error: Content is protected !!