ಲಾಸ್ಟ್ ಬೆಂಚಲ್ಲಿ ಕಾಮಿಡಿ ಮಾತ್ರವಲ್ಲ ಸೆಂಟಿಮೆಂಟೂ ಇದೆ!

📝#ಶಶಿ ಬೆಳ್ಳಾಯರು

ತೆರೆಕಂಡಿರುವ “ಲಾಸ್ಟ್ ಬೆಂಚ್” ತುಳು ಭಾಷೆಯ ಮೊದಲ ಮಲ್ಟಿ ಸ್ಟಾರ್ ಸಿನಿಮಾ ಆಗಿದೆ. ತುಳು ಚಿತ್ರರಂಗದ ಮೂವರು ಯಶಸ್ವಿ ನಾಯಕ ನಟರಾದ ಪೃಥ್ವಿ ಅಂಬರ್, ರೂಪೇಶ್ ಶೆಟ್ಟಿ, ವಿನೀತ್ ಕುಮಾರ್ ಜೊತೆಯಾಗಿ ನಟಿಸಿರೋ ಕಾರಣದಿಂದ ಸಾಕಷ್ಟು ನಿರೀಕ್ಷೆಗಳನ್ನು ಚಿತ್ರ ಪ್ರಾರಂಭದಿಂದಲೇ ಹುಟ್ಟುಹಾಕಿತ್ತು. ಪ್ರೇಕ್ಷಕನ ನಿರೀಕ್ಷೆಗೆ ಯಾವುದೇ ರೀತಿಯಲ್ಲಿ ಕೊರತೆ ಬರದಂತೆ ನಿರ್ದೇಶಕ ಪ್ರಧಾನ್ ಎಂ.ಪಿ. ನೋಡ್ಕೊಂಡಿದ್ದಾರೆ.
ಚಿತ್ರದ ಟೈಟಲ್ ಲಾಸ್ಟ್ ಬೆಂಚ್ ಆಗಿರೋದ್ರಿಂದ ಇದು ಪಕ್ಕಾ ಕಾಲೇಜ್ ಸ್ಟೋರಿ ಅಂತ ಗೆಸ್ ಮಾಡ್ಕೋಬಹುದು. ಅದಕ್ಕೆ ತಕ್ಕಂತೆ ಈಗಿನ ಕಾಲದ ಕಾಲೇಜ್ ಹುಡುಗ-ಹುಡುಗೀರ ಕಲರ್ ಫುಲ್ ಲೈಫನ್ನು ನಿರ್ದೇಶಕ ಕಟ್ಟಿಕೊಟ್ಟಿದ್ದಾರೆ. ಲವ್ವು, ಲವ್ವರ್ಸು, ಕಾಲೇಜ್ ಎಲೆಕ್ಷನ್ನು, ಸ್ಟಡೀಸು ಎಲ್ಲದರ ಮಧ್ಯೆ ಮೂವರು ಕಥಾ ನಾಯಕರು ಮತ್ತೊಬ್ಬ ಸ್ನೇಹಿತ, ಇಬ್ಬರು ಸ್ನೇಹಿತೆಯರ ಕಥೆ ಸಾಗುತ್ತೆ. ಪ್ರಜ್ವಲ್ ಪ್ರಕಾಶ್ ಪಾಂಡೇಶ್ವರ್ ಚಿತ್ರದಲ್ಲಿ ಡೀಸೆಂಟ್ ಸ್ಟೂಡೆಂಟ್ ಆಗಿ ಇಷ್ಟವಾಗ್ತಾರೆ.
ಚಿತ್ರಕ್ಕೆ ಇನ್ನೊಂದು ಪ್ಲಸ್ ಪಾಯಿಂಟ್ ಅಂದ್ರೆ ಸೆಂಟಿಮೆಂಟ್ ಕ್ಲೈಮಾಕ್ಸ್. ಒಂದರೆ ಘಳಿಗೆ ಪ್ರೇಕ್ಷಕ ಸೈಲೆಂಟಾಗಿ ಕಣ್ಣಂಚು ತೆವಗೊಳಿಸಿದ್ರೆ ನಿರ್ದೇಶಕನ ಶ್ರಮ ಸಾರ್ಥಕ. ಚಿತ್ರದಲ್ಲಿ ವಿಸ್ಮಯ ವಿನಾಯಕ್ ಅನ್ನೋ ಅಪ್ಪಟ ಪ್ರತಿಭೆ ಇನ್ನೂ ಚೆನ್ನಾಗಿ ನಟಿಸಿದ್ದಾರೆ. ಭೋಜರಾಜ್ ವಾಮಂಜೂರ್, ಅರವಿಂದ್ ಬೋಳಾರ್ ಚಿತ್ರದ ಸೆಂಟರ್ ಆಫ್ ಅಟ್ರಾಕ್ಷನ್. ಆರಾಧ್ಯ ಶೆಟ್ಟಿ, ನಿರೀಕ್ಷಾ ಶೆಟ್ಟಿ ಕಾಲೇಜ್ ಕ್ಯಾಂಪಸ್ಸಲ್ಲಿ ಚೆನ್ನಾಗಿ ಕಾಣ್ತಾರೆ. ಹಾಡು ಚೆನ್ನಾಗಿದೆ, ಕಥೆ ಒಂದೇ ಕಾಲೇಜ್ ಲೋಕೇಶನ್ ನಲ್ಲಿ ನಡೆಯುತ್ತೆ ಆದ್ರೂ ಬೋರ್ ಅನಿಸಲ್ಲ. ರವಿ ರಾಮಕುಂಜ, ರೂಪಾ ವರ್ಕಾಡಿ, ಪ್ರವೀಣ್ ಮರ್ಕಮೆ ಅಪರೂಪಕ್ಕೆ ಕಂಡರೂ ಗುರುತಿಸಲ್ಪಡುತ್ತಾರೆ. ಬೇಬಿ ಐಸಿರಿ ಕ್ಯೂಟ್ ಆಗಿ ನಟಿಸಿದ್ದಾರೆ. ಲಾಸ್ಟ್ ಬೆಂಚ್ ಮೊದಲೇ ಹೇಳಿದಂತೆ ಈಗಿನ ಕಾಲೇಜ್ ಸ್ಟೋರಿ. ಹಾಗಂತ ಕಾಲೇಜ್ ಹೋಗೋರು ಮಾತ್ರ ನೋಡೋದಲ್ಲ, ಫ್ಯಾಮಿಲಿ ಜೊತೆಗೆ ಕೂತು ಯಾವುದೇ ಮುಜುಗರ ಇಲ್ದೆ ಸಿನಿಮಾ ನೋಡ್ಬಹುದು. ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ಬಳಿಕ ತುಳುವರಿಗೆ ಒಂದೊಳ್ಳೆ ಹಾಸ್ಯ ರಾಸಾಯಣ. ಕಾಲೇಜ್ ಮೆಟ್ಟಿಲು ಹತ್ತಿ ಇಳಿದವರು ಒಂದ್ಸಾರಿ ಥಿಯೇಟರ್ ಹೋಗಿ ಲಾಸ್ಟ್ ಬೆಂಚಲ್ಲಿ ಕೂತು ತಮ್ಮ ಹಳೆಯ ನೆನಪುಗಳನ್ನು ನೆನಪು ಮಾಡ್ಕೋಬಹುದು.

error: Content is protected !!