ಅಪ್ಪು ಸ್ಮರಣೆಗೆ “ಗಂಧದಗುಡಿ” ಉಚಿತ ಶೋ ಏರ್ಪಡಿಸಿ ಮಾದರಿಯಾದ ಇನಾಯತ್ ಅಲಿ!

ಸುರತ್ಕಲ್: ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ
ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರ ಸ್ಮರಣೆಗಾಗಿ ಜನರಿಗೆ “ಗಂಧದ ಗುಡಿ” ಡಾಕ್ಯೂಮೆಂಟರಿಯ ಉಚಿತ ವೀಕ್ಷಣೆ ವ್ಯವಸ್ಥೆ ಕಲ್ಪಿಸುವ ಮೂಲಕ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಅವರು ಇತರರಿಗೆ ಮಾದರಿಯಾಗಿದ್ದಾರೆ.


ಅವರು ಸುರತ್ಕಲ್ ಸಿನಿ ಗ್ಯಾಲಕ್ಸಿ ಚಿತ್ರಮಂದಿರದಲ್ಲಿ 500 ಮಂದಿಗೆ ಉಚಿತ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟರು.
ಪುನೀತ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಚಿತ್ರ ಪ್ರದರ್ಶನ ಆರಂಭಿಸಲಾಯಿತು.


ಈ ವೇಳೆ ಮಾತಾಡಿದ ಇನಾಯತ್ ಅಲಿ ಅವರು, ಪುನೀತ್ ರಾಜ್ ಕುಮಾರ್‌ ಅವರು ಕನ್ನಡ ನಾಡು ನುಡಿ ಜಲಕ್ಕಾಗಿ ಕನ್ನಡಿಗರು ಒಟ್ಟಾಗಬೇಕಾದ ಅಗತ್ಯವಿದೆ ಎಂಬ ಸಂದೇಶವನ್ನು ಚಿತ್ರದಲ್ಲಿ ನೀಡಿದ್ದಾರೆ. ಇದು ಜನರಲ್ಲಿ ಅರಿವು ಮೂಡಿಸಬೇಕು ಎಂಬ ಕಾರಣಕ್ಕೆ ಚಿತ್ರ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದ್ದೇನೆ” ಎಂದರು.
ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ ಮತ್ತಿತರರು ಉಪಸ್ಥಿತರಿದ್ದರು.

error: Content is protected !!