ಸುರತ್ಕಲ್: ಇಲ್ಲಿನ ಎನ್ ಐಟಿಕೆ ಮುಕ್ಕ ಬಳಿಯಲ್ಲಿರುವ ಟೋಲ್ ಗೇಟ್ ದಾಟಿದ್ರೆ ಸಾಕು ಮಂಗಳಮುಖಿಯರದ್ದೇ ದರ್ಬಾರು. ಸಂಜೆ 6 ಗಂಟೆ ದಾಟುತ್ತಿದ್ದಂತೆ ಎಲ್ಲಿಂದಲೋ ಬಂದು ವಕ್ಕರಿಸುವ ಇವರು ದ್ವಿಚಕ್ರ ವಾಹನ ಸವಾರರನ್ನು ಟ್ರಾಫಿಕ್ ಪೊಲೀಸರಂತೆ ಹೆದ್ದಾರಿಯಲ್ಲೇ ಅಡ್ಡಗಟ್ಟಿ ದಂಧೆಗೆ ಸೆಳೆಯುತ್ತಾರೆ.
ಇಲ್ಲಿ ಮಾಂಸ ದಂಧೆ ನಡೀತಾ ಇರೋದು ಇಂದು ನಿನ್ನೆಯಿಂದಲ್ಲ, ಹಲವು ವರ್ಷಗಳಿಂದ ಇಲ್ಲಿ ನಡುರಾತ್ರಿಯವರೆಗೆ ವೇಶ್ಯವಾಟಿಕೆ ನಡೆಸುವ ಇವರಿಂದ ಪಾದಾಚಾರಿಗಳು, ಸಮೀಪದ ಶ್ರೀನಿವಾಸ, ಎನ್ ಐಟಿಕೆ ಕಾಲೇಜ್ ವಿದ್ಯಾರ್ಥಿಗಳು ಸಂಚಾರಕ್ಕೆ ಭಯಪಡುವಂತಾಗಿದೆ. ಹೆದ್ದಾರಿ ಪಕ್ಕ ನಡೆಯುವ ಬೀದಿ ವೇಶ್ಯಾವಾಟಿಕೆ ಇಲ್ಲಿಂದ ಮೂಲ್ಕಿ ಸಮೀಪದ ಕೊಲ್ನಾಡ್ ಜಂಕ್ಷನ್ ತನಕ ಹಬ್ಬಿದೆ. ಹತ್ತಾರು ಮಂದಿ ಮಂಗಳಮುಖಿಯರು ದಂಧೆಯಲ್ಲಿ ತೊಡಗಿಕೊಂಡಿದ್ದು ವಾಹನ ಸವಾರರು, ಕೂಲಿ ಕಾರ್ಮಿಕರು ಇವರ ದಂಧೆಗೆ ಸಿಲುಕಿ ಬರಬಾರದ ರೋಗಕ್ಕೆ ತುತ್ತಾಗುತ್ತಿದ್ದಾರೆ. ಇಷ್ಟೆಲ್ಲ ಆದರೂ ಸುರತ್ಕಲ್ ಠಾಣಾ ಪೊಲೀಸರು ಮಾತ್ರ ಕ್ರಮ ಜರುಗಿಸುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಟೋಲ್ ಗೇಟ್ ಗಿಂತ ಅನತಿ ದೂರದಲ್ಲಿ ಪಡ್ರೆ ಬಸ್ ನಿಲ್ದಾಣವಿದ್ದು ಇಲ್ಲಿ ಕಾಲೇಜ್ ವಿದ್ಯಾರ್ಥಿಗಳು, ಸಾರ್ವಜನಿಕರು ಬಸ್ ಕಾಯುತ್ತಾರೆ. ಇದೇ ಬಸ್ ನಿಲ್ದಾಣದಲ್ಲಿ ಮಂಗಳಮುಖಿಯರು ಖುಲ್ಲಂಖುಲ್ಲಾ ಆಗಿ ವಿಟಪುರುಷರ ಜೊತೆ ಅನೈಸರ್ಗಿಕ ಸೆಕ್ಸ್ ನಲ್ಲಿ ತೊಡಗುತ್ತಿದ್ದು ಮರ್ಯಾದಸ್ಥರು ಓಡಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಇವರಿಂದ ಸಂಜೆಯ ಬಳಿಕ ಇಲ್ಲಿ ಬಸ್ ಕಾಯುವವರನ್ನೂ ವಿಟಪುರುಷರು ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದು ‘ಬರ್ತೀರಾ’ ಎಂದು ಕೇಳುತ್ತಿದ್ದು ಪೊಲೀಸರು ಸೂಕ್ತ ಕ್ರಮ ಜರುಗಿಸದಿದ್ದಲ್ಲಿ ನಾವೇ ತಕ್ಕ ಪಾಠ ಕಲಿಸಬೇಕಾದೀತು ಎಂದು ಎಚ್ಚರಿಸಿದ್ದಾರೆ.