
ಉಡುಪಿ: ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯು ಕಳೆದ 5 ವರ್ಷಗಳಿಂದ ಉತ್ತಮವಾದ ಗ್ರಾಹಕರನ್ನು ಹೊಂದಿ ಅಭಿವೃದ್ಧಿಯತ್ತ ಸಾಗುತ್ತಿದೆ. ಗ್ರಾಹಕರ ಉತ್ತಮ ರೀತಿಯ ಸಹಕಾರವೇ ಸೊಸೈಟಿಯ ಶಕ್ತಿ. ನಗುಮುಖದ ಸಿಬ್ಬಂದಿಗಳ ಸೇವೆ ಕೂಡ ಗ್ರಾಹಕರಿಗೆ ತೃಪ್ತಿ ಕೊಡುವಂತಿದೆ. ಪ್ರಿಯದರ್ಶಿನಿ ಸೊಸೈಟಿ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಅರಸು ಪ್ರಶಸ್ತಿ ಪುರಸ್ಕೃತರು ಹಾಗೂ ಬಂಗೇರ ಆದಿ ಮೂಲಸ್ಥಾನ ಹೂಡೆ ಇದರ ಅಧ್ಯಕ್ಷರಾದ ಶ್ರೀ ನಾಗೇಶ್ ಡಿ ಬಂಗೇರ ರವರು ನುಡಿದರು.
ಅವರು ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಹಳೆಯಂಗಡಿ ಶಾಖೆಯಲ್ಲಿ ನಡೆದ ಗ್ರಾಹಕರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಎಲ್ಐಸಿ ನಿವೃತ್ತ ಅಧಿಕಾರಿ ಶ್ರೀ ಜನಾರ್ದನ ಶೆಟ್ಟಿಗಾರ್ ರವರು ಮಾತನಾಡಿ ಸ್ಪರ್ಧಾತ್ಮಕ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನವೀಕೃತ ಸೌಲಭ್ಯಗಳೊಂದಿಗೆ ಸೊಸೈಟಿಯ ಮುಂದೆ ಸಾಗಿದರೆ ಅಭಿವೃದ್ಧಿ ಖಂಡಿತ. ಈ ನಿಟ್ಟಿನಲ್ಲಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಕೂಡ ನವೀಕೃತ ಹೊಸ ಟೆಕ್ನಾಲಜಿಗಳನ್ನು ಉಪಯೋಗಿಸಿ ಸೇವೆ ಸಲ್ಲಿಸುತ್ತಿರುವುದು ಸಾಧನೀಯ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೊಸೈಟಿಯ ಅಧ್ಯಕ್ಷರಾದ ಶ್ರೀ ಎಚ್ ವಸಂತ್ ಬೆರ್ನಾರ್ಡ್ ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಶ್ರೀ ಉಮಾನಾಥ್ ಜೆ ಶೆಟ್ಟಿಗಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಸುದರ್ಶನ್ ಪೂಜಾರಿ, ಲೆಕ್ಕಿಗರಾದ ಲೋಲಾಕ್ಷಿ, ಸಾಲ ವಿಭಾಗದ ಹಿರಿಯ ಪ್ರಬಂಧಕರಾದ ಮೋಹನ್ ದಾಸ್ ಉಪಸ್ಥಿತರಿದ್ದರು.
ಹಳೆಯಂಗಡಿ ಶಾಖಾ ಪ್ರಬಂಧಕರಾದ ಪ್ರಜ್ಞಾಶ್ರೀ ರವರು ಸ್ವಾಗತಿಸಿ, ಸಹ ಸಿಬ್ಬಂದಿ ರೇಷ್ಮಾ ಕುಮಾರಿ ರವರು ವಂದಿಸಿದರು.
