
ಮಂಗಳೂರು: ಪಾಕ ಶಾಸ್ತ್ರದಲ್ಲಿ “ನಳಪಾಕ” ಎಂದೇ ಪ್ರಸಿದ್ದರಾಗಿರುವ ವೆಂಕಟೇಶ್ ಪಾವಂಜೆ ಅವರಿಗೆ ಪಾಕಶಾಸ್ತ್ರದ ವಿಶೇಷ ಸಾಧನೆಗಾಗಿ 2026 ನೇ ಸಾಲಿನ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಪಾಕ ಶಾಸ್ತ್ರದಲ್ಲಿ ಅಪಾರ ಅನುಭವ, ಶ್ರದ್ದೆ ಹಾಗೂ ಸಮರ್ಪಣಾ ಮನೋಭಾವದಿಂದ ವಿಶಿಷ್ಠ ಗುರುತನ್ನು ಮೂಡಿಸಿದ್ದಾರೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ , ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನ, ಪಾವಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸೇರಿದಂತೆ ಹಲವು ಪ್ರಸಿದ್ದ ದೇವಾಲಯಗಳ ಬ್ರಹ್ಮಕಲಶೋತ್ಸವ, ನಾಗಮಂಡಲ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಲಕ್ಷಾಂತರ ಭಕ್ತಾದಿಗಳಿಗೆ ಸಾಂಪ್ರಾದಾಯಿಕ ಶೈಲಿಯ ಪಾಕವಿಧಾನ ಮತ್ತು ಅನ್ನಪ್ರಸಾದವನ್ನು ಅತ್ಯಂತ ಶ್ರದ್ಧೆ, ಶುಚಿತ್ವ ಹಾಗೂ ಭಕ್ತಭಾವದಿಂದ ಸಿದ್ಧಪಡಿಸಿ ಯಶಸ್ವಿಯಾಗಿ ಸೇವೆ ಸಲ್ಲಿಸಿರುವುದು ಇವರ ಸಾಧನೆಗೆ ಸಾಕ್ಷಿಯಾಗಿದೆ.
