ಸುರತ್ಕಲ್: ಕ್ರೀಡೆ ಮನಸ್ಸು ಮತ್ತು ದೇಹವನ್ನು ಹತೋಟಿಯಲ್ಲಿಡುತ್ತದೆ. ಮಾತ್ರವಲ್ಲದೆ ದೈಹಿಕ ಮತ್ತು ಮಾನಸಿಕವಾಗಿ ಸದೃಢತೆಯನ್ನು ನೀಡುತ್ತದೆ ಎಂದು ಮಂಗಳೂರು ಸೇವಾ ಲೈಪ್ ಟ್ರಸ್ಟ್ ಅಧ್ಯಕ್ಷರಾದ ಅರ್ಜುನ್ ಭಂಡಾರ್ಕರ್ ನುಡಿದರು.

ಅವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ , ಮಂಗಳೂರು ಉತ್ತರ ವಲಯ ಮಧ್ಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಯಲ್ಲಿ ಜರಗಿದ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರ ತ್ರೋಬಾಲ್ ಪಂದ್ಯಾಟ ವನ್ನು ಉದ್ಘಾಟಸಿ ಮಾತನಾಡಿದರು. ಸರಕಾರಿ ಶಾಲೆಯು ಖಾಸಗಿ ಶಾಲೆಯನ್ನು ಮೀರಿಸುವ ರೀತಿ ಬೆಳೆದಿರುವುದು ಇತರ ಶಾಲೆಗೆ ಮಾದರಿಯಾಗಿದೆ ಎಂದರು ವೇದಿಕೆಯಲ್ಲಿ ಮುಂಬಯಿ ವಿ.ಕೆ. ಸಮೂಹ ಸಂಸ್ಥೆಯ ಸಿ.ಎಂ.ಡಿ ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು,ಜೀವನ್ ಶೆಟ್ಟಿ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳು ಮಂಗಳೂರು ಉತ್ತರ ವಲಯ, ಶ್ರೀಕಾಂತ್ ಶೆಟ್ಟಿ ಬಾಳ ಅಧ್ಯಕ್ಷರು ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘ, ಜಯೇಶ್ ಗೋವಿಂದ ಅಧ್ಯಕ್ಷರು ಲಯನ್ಸ್ ಕ್ಲಬ್ ಸುರತ್ಕಲ್, ಶ್ರೀಧರ್ ಟಿ ಎನ್ ಅಧ್ಯಕ್ಷರು ರೋಟರಿ ಕ್ಲಬ್ ಸುರತ್ಕಲ್,ರಮೇಶ್ ರಾವ್ ಮಧ್ಯಮಠ ನಿಕಟ ಪೂರ್ವ ಅಧ್ಯಕ್ಷರು ರೋಟರಿ ಕ್ಲಬ್ ಸುರತ್ಕಲ್, ಗಿರೀಶ್ ಕೋಟೆ ಅಧ್ಯಕ್ಷರು ಯುವಕ ಮಂಡಲ ಕೋಟೆ ಸೂರಿಂಜೆ, ವಿನೋದ್ ಕುಮಾರ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ದೈಹಿಕ ಶಿಕ್ಷಕರ ಸಂಘ,ನಿತಿನ್ ಆರ್ ಪುತ್ರನ್ ಅಧ್ಯಕ್ಷರು ಮಂಗಳೂರು ತಾಲೂಕು ದೈಹಿಕ ಶಿಕ್ಷಕರ ಸಂಘ, ಶಿಕ್ಷಣ ಇಲಾಖೆಯ ಸಿ, ಅರ್, ಪಿ ಮಹಮ್ಮದ್ ಸಿಖಂದರ್, ಸತೀಶ್ ಸದಾನಂದ ಕಾರ್ಯದರ್ಶಿ ನಾಗರಿಕ ಸಲಹಾ ಸಮಿತಿ ಸುರತ್ಕಲ್ ,ವಿದ್ಯಾನಿಧಿ ಎಜುಕೇಶನ್ ಟ್ರಸ್ಟ್ ನ ಕೋಶಾಧಿಕಾರಿ ವಿಠಲ್ ಶೆಟ್ಟಿ, ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಶಾಲಾಭಿವೃದ್ದಿ ಸಮಿತಿಯ ಉಪಾಧ್ಯಕ್ಷೆ ಶಶಿಕಲಾ,ಮಾಜಿ ಅಧ್ಯಕ್ಷೆ ಪ್ರಫುಲ್ಲ ಪಂಜ, ಸದಸ್ಯರಾದ ಲೀಲಾಧರ ಶೆಟ್ಟಿ,ಹರೀಶ್ ಭಂಡಾರಿ, ಪರಮೇಶ್ವರ್,ಕುಸುಮಾಕರ ಶೆಟ್ಟಿ, ಸವಿತ ಕುಲಾಲ್,ದಿನೇಶ್ ಕುಲ್ಲಂಗಾಲು, ರಿತೇಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಅನಿಲ್ ಸಾಲ್ಯಾನ್ ವಹಿಸಿದರು. ವಿದ್ಯಾನಿಧಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಸ್ವಾಗತಿಸಿದರು ಶಾಲೆಯ ಮುಖ್ಯ ಶಿಕ್ಷಕಿ ಜೇನ್ ಡಿಸೋಜ ಧನ್ಯವಾದ ಸಮರ್ಪಿಸಿದರು ಸಹ ಶಿಕ್ಷಕಿ ಶೈಲಾ ಕಾರ್ಯಕ್ರಮ ನಿರೂಪಿಸಿದರು.
