
ಮೂಲ್ಕಿ: ಇಲ್ಲಿಗೆ ಸಮೀಪದ ಕೊಲ್ನಾಡ್ ಬ್ರಿಡ್ಜ್ ಸಮೀಪ ಕುಳಾಯಿಯ ರಾಯನ್ಸ್ ಸ್ಕೂಲ್ ಬಸ್ ಹಿಂಭಾಗಕ್ಕೆ ಟೂರಿಸ್ಟ್ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್ ರಸ್ತೆ ಬದಿಗೆ ಇಳಿದು ಪಲ್ಟಿಯಾಗಿದ್ದು ಬಸ್ ನಲ್ಲಿದ್ದ ಮಕ್ಕಳಿಗೆ ಗಾಯಗಳಾಗಿವೆ.

ಶುಕ್ರವಾರ ಸಂಜೆ ಘಟನೆ ನಡೆದಿದ್ದು ಸ್ಕೂಲ್ ಬಸ್ ಚಾಲಕ ಮಗುವೊಂದನ್ನು ಇಳಿಸಲು ಬಸ್ ರಸ್ತೆ ಬದಿ ನಿಲ್ಲಿಸಿದ್ದು ಈ ವೇಳೆ ಹಿಂಭಾಗದಿಂದ ಬಸ್ ಡಿಕ್ಕಿ ಹೊಡೆದಿದೆ. ಗಾಯಳು
ಮಕ್ಕಳನ್ನು ಕೂಡಲೇ ಮುಕ್ಕ ಹಾಗೂ ಇತರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಒಂದು ಮಗುವಿಗೆ ತೀವ್ರ ಗಾಯವಾಗಿದೆ ಎನ್ನಲಾಗಿದ್ದು ಹೆಚ್ಚಿನ ಮಾಹಿತಿ ಲಭಿಸಬೇಕಿದೆ.
