
ಉಡುಪಿಯಲ್ಲಿ ಪ್ರಿಯದರ್ಶಿನಿ ಸೊಸೈಟಿಯ 5ನೇ ಶಾಖೆ ಶುಭಾರಂಭ

ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕು ಹಳೆಯಂಗಡಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಐದನೇ ಶಾಖೆಯು ಉಡುಪಿಯ ತಾಲೂಕು ಕಚೇರಿ, ಬಳಿಯ ಸನಿಲ್ ಪ್ಲಾಜಾ ಕಟ್ಟಡ ದಲ್ಲಿ ರವಿವಾರ ಬೆಳಗ್ಗೆ ಶುಭಾರಂಭಗೊಂಡಿತು. ಮುಲ್ಕಿ ಸೀಮೆಯ ಅರಸರಾದ ಎಂ. ದುಗ್ಗಣ್ಣ ಸಾವಂತರು, ದೀಪ ಪ್ರಜ್ವಲನೆಯನ್ನು ಮಾಡಿ ಬ್ಯಾಂಕ್ ಗೆ ಶುಭ ಹಾರೈಸಿದರು. ಬಳಿಕ ಮಾತಾಡಿದ ಅವರು, “ಹಳೆಯಂಗಡಿಯಲ್ಲಿ ಆರಂಭವಾದ ಪ್ರಿಯದರ್ಶಿನಿ ಬ್ಯಾಂಕ್ ಸೇವೆ ಉಡುಪಿ ಜಿಲ್ಲೆಗೂ ವಿಸ್ತರಣೆಯಾಗಿರುವುದು ಖುಷಿಯ ವಿಚಾರ. ಬ್ಯಾಂಕ್ ಶಾಖೆಯು 5ರಿಂದ 50 ಆಗಲಿ. ಎಲ್ಲರಿಗೂ ಬ್ಯಾಂಕಿಂಗ್ ಸೇವೆ ಸಿಗುವಂತಾಗಲಿ” ಎಂದರು.

ಬಳಿಕ ಪ್ರಿಯದರ್ಶಿನಿ ಸ್ವ-ಸಹಾಯ ಗುಂಪಿಗೆ ಚಾಲನೆಯನ್ನುನೀಡಿ ಮಾತಾಡಿದ ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಒಕ್ಕೂಟಮತ್ತು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿ. ಮಂಗಳೂರು ಇದರ ನಿರ್ದೇಶಕ ಡಾ. ಐಕಳಬಾವ ದೇವಿ ಪ್ರಸಾದ್ ಶೆಟ್ಟಿಯವರು, “ಸಹಕಾರಿ ಕ್ಷೇತ್ರದ ತತ್ವದ ಮೇಲೆ ನಾವೆಲ್ಲರೂ ನಂಬಿಕೆ ಇಟ್ಟವರು. ವಸಂತ ಬೆರ್ನಾರ್ಡ್ ಅವರು ಸಾಕಷ್ಟು ಹೋರಾಟ ಮಾಡಿ ಈ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಗ್ರಾಹಕ ಸ್ನೇಹಿಯಾಗಿ ಮುಂದುವರಿಯುತ್ತಿರುವ ಈ ಬ್ಯಾಂಕ್ ಇನ್ನಷ್ಟು ಹೆಚ್ಚಿನ ವ್ಯವಹಾರ ಮಾಡಲಿ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳಿಗಿಂತ ಹೆಚ್ಚಾಗಿ ಸಹಕಾರಿ ಬ್ಯಾಂಕ್ ಗಳು ಸೇವೆ ಸಲ್ಲಿಸುತ್ತಿವೆ. ಉಡುಪಿ ಜಿಲ್ಲೆಯಲ್ಲಿ ಬ್ಯಾಂಕ್ ಇನ್ನಷ್ಟು ಶಾಖೆಯನ್ನು ವಿಸ್ತರಿಸುವ ಮೂಲಕ 10 ವರ್ಷಗಳನ್ನು ಪೂರೈಸುವಷ್ಟರಲ್ಲಿ 100 ಕೋಟಿ ಆರ್ಥಿಕ ವ್ಯವಹಾರ ನಡೆಸಲಿ“ ಎಂದು ಶುಭ ಹಾರೈಸಿದರು.

ಕರ್ನಾಟಕ ಸರಕಾರದ ಮಾಜಿ ಸಚಿವರಾದ ಕೆ. ಅಭಯಚಂದ್ರ ಜೈನ್ ಮಾತಾಡಿ, ”ಸಹಕಾರಿ ಬ್ಯಾಂಕ್ ಗಳು ಬಡವರ, ಮಧ್ಯಮ ವರ್ಗದವರ ಹತ್ತಿರದ ಬ್ಯಾಂಕ್. ಉಡುಪಿ ಜಿಲ್ಲೆ ಮಾತ್ರವಲ್ಲ ರಾಜ್ಯದೆಲ್ಲೆಡೆ 75ರಷ್ಟು ಶಾಖೆಗಳನ್ನು ಹೊಂದಲಿ. ಬಡವರಿಗೆ ಈ ಬ್ಯಾಂಕ್ ನ ಬಾಗಿಲು ಸದಾ ತೆರೆದಿರಲಿ“ ಎಂದರು.

ಉಡುಪಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಮಾತಾಡಿ, ”ಪ್ರಿಯದರ್ಶಿನಿ ಬ್ಯಾಂಕ್ ಗ್ರಾಹಕರ ಸೇವೆಯ ಮೂಲಕ ಮನೆಮಾತಾಗಿದೆ. ಉಡುಪಿ ಜಿಲ್ಲೆಯಲ್ಲಿ ಜನರಿಗೆ ಸಹಕಾರ ನೀಡುತ್ತಾ ಜನಸ್ನೇಹಿಯಾಗಿ ಮುಂದುವರಿಯಲಿ“ ಎಂದರು.

ಜನಸ್ನೇಹಿ ಬ್ಯಾಂಕ್ ಎಂಬ ಹೆಗ್ಗುರುತು:
ಸಹಕಾರಿ ರಂಗದ ದಿಗ್ಗಜರಾದ ದಿವಂಗತ ಎಚ್ ನಾರಾಯಣ ಸನಿಲ್ ಮತ್ತು ದಿವಂಗತ ಪಂಜದ ಗುತ್ತು ಶಾಂತರಾಮ ಶೆಟ್ಟಿ ರವರ ಪ್ರೇರಣೆಯಂತೆ ಕಳೆದ ಐದು ವರ್ಷದ ಹಿಂದೆ ಪ್ರಾರಂಭಗೊಂಡ ಪ್ರಿಯದರ್ಶಿನಿ ಕೋ ಆಪರೇಟಿವ್ ಪ್ರಸ್ತುತ 45 ಕೋಟಿ ಠೇವಣಿ ಹೊಂದಿದ್ದು, 484.78 ಕೋಟಿ ವಹಿವಾಟು ಮಾಡಿ 3843 ಸದಸ್ಯರನ್ನು ಹೊಂದಿ 54 ಲಕ್ಷ ವಾರ್ಷಿಕ ಲಾಭವನ್ನು ಪಡೆದು, ನಾಲ್ಕು ಶಾಖೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದು ಇದೀಗ 5ನೇ ಶಾಖೆಯು ಉಡುಪಿಯಲ್ಲಿ ಪ್ರಾರಂಭಗೊಂಡಿದೆ.
ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರಾದ ಲಾವಣ್ಯ ಕೆ.ಆರ್. ರವರು, ಉಡುಪಿ ಜಿಲ್ಲಾ ಕೇಂದ್ರ ಸಹಕಾರಿ ಯೂನಿಯನ್ ಮತ್ತು ಬಡಗಬೆಟ್ಟು ಕೋ ಆಪರೇಟಿವ್ ಸೊಸೈಟಿ ಲಿ. ಇದರ ಅಧ್ಯಕ್ಷರಾದ ಇಂದ್ರಾಳಿ ಜಯಕರ ಶೆಟ್ಟಿ ರವರು, ಶ್ರೀ ಸರಸ್ವತಿ ಕೋ ಆಪರೇಟಿವ್ ಸೊಸೈಟಿ, ಪಡುಕುತ್ಯಾರ್ ಉಡುಪಿ ಇದರ ಅಧ್ಯಕ್ಷರಾದ ಬಿ. ಸೂರಕುಮಾರ್ ರವರು, ಲೊಂಬಾರ್ಡ್ ಮೆಮೋರಿಯಲ್ ಆಸ್ಪತ್ರೆ ಉಡುಪಿ ಇದರ ನಿರ್ದೇಶಕರಾದ ಡಾ| ಸುಶೀಲ್ ಜತ್ತನ್ನ ರವರು, ಹೈಟೆಕ್ ಮೆಡಿಕೆರ್ ಹಾಸ್ಪಿಟಲ್ ಉಡುಪಿ ಇದರ ಎಂ.ಡಿ. ಡಾ| ಟಿ. ಎಸ್. ರಾವ್, MS ರವರು, ಕೊರಂಗ್ರಪಾಡಿ ಸಹಕಾರಿ ವ್ಯವಸಾಯಿಕ ಸಂಘ ಉಡುಪಿ ಇದರ ಅಧ್ಯಕ್ಷರಾದ ಶ್ರೀಧರ್ ದೇವಾಡಿಗ ರವರು, ಉಡುಪಿ ಹೋಮಿಯೋಪಥಿಕ್ ಫಿಶಿಷಿಯನ್ ಡಾ| ಬೆರಿಲ್ ಎ. ಬೆರ್ನಾರ್ಡ್ ರವರು, ಕಟ್ಟಡ ಮಾಲೀಕರಾದ ಶಂಭು ಎ. ಸನಿಲ್ ರವರು ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿರುತ್ತಾರೆ.

ಸೊಸೈಟಿಯು 2021 ರಲ್ಲಿ ಪ್ರಾರಂಭಗೊಂಡು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿ., ಮಂಗಳೂರು ಇದರ ಅಧ್ಯಕ್ಷರಾದ ಡಾ|| ಎಂ. ಎನ್ ರಾಜೇಂದ್ರ ಕುಮಾರ್ ರವರ ಮಾರ್ಗದರ್ಶನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. 2025-26ನೇ ಸಾಲಿನಲ್ಲಿ 97% ಸಾಲ ವಸೂಲಾತಿ ನಡೆಸಿ ಲೆಕ್ಕಪರಿಶೋಧನಾ ವರದಿ (ಆಡಿಟ್ ವರದಿ) ಕೂಡಾ “ಎ” ಶ್ರೇಣಿಯಲ್ಲಿದ್ದು, ಹೆಮ್ಮೆ ಪಡುವಂತಾಗಿದೆ. ಸೊಸೈಟಿಯಲ್ಲಿ ಅಡಮಾನಕ್ಕೆ ಬರುವ ಚಿನ್ನಾಭರಣಗಳ ನೈಜತೆ ಮತ್ತು ಪರಿಶುದ್ಧತೆಯ ನಿಖರತೆಗಾಗಿ ಪ್ರಧಾನ ಕಚೇರಿಯಲ್ಲಿ ಗೋಲ್ಡ್ ಪ್ಯೂರಿಟಿ ಟೆಸ್ಟಿಂಗ್ ಮೆಷಿನ್ನ್ನು, ಸೊಸೈಟಿಯ 4 ಶಾಖೆಗಳಲ್ಲೂ ಇ-ಮುದ್ರಾಂಕ ವ್ಯವಸ್ಥೆ, ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ, ಹವಾನಿಯಂತ್ರಿತ ಬ್ಯಾಂಕಿಂಗ್ ವಿಭಾಗವನ್ನು ಹೊಂದಿರುತ್ತದೆ. ಸಂಘದಲ್ಲಿ 27 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಹಾಗೂ ಒಟ್ಟು 15 ನಿರ್ದೇಶಕರ ತಂಡ ಇದೆ. ಇವರೆಲ್ಲರ ಶ್ರಮದಿಂದಲೇ 2023-24ನೇ, 2024-25ನೇ ಮತ್ತು 2025-26ನೇ ಸಾಲಿನಲ್ಲಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ “ವಿಶಿಷ್ಟ ಸಾಧನ ಪ್ರಶಸ್ತಿ” ದೊರಕಿರುತ್ತದೆ. ಹಾಗೂ 72ನೇ ಅಖಿಲ ಭಾರತ ಸಹಕಾರ ಸಪ್ತಾಹ 2025 ರ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ನಿಯಮಿತ ಬೆಂಗಳೂರು ಮತ್ತು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಮಂಗಳೂರು ಇವರು “ಉತ್ತಮ ಪತ್ತಿನ ಸಹಕಾರಿ ಸಂಘ ಪ್ರಶಸ್ತಿ” ನೀಡಿ ಗೌರವಿಸಿರುತ್ತಾರೆ.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಶುಭ ಹಾರೈಸಿದರು
ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರಾದ ಲಾವಣ್ಯ ಕೆ. ಆರ್, ಉಡುಪಿ ಜಿಲ್ಲಾಕೇಂದ್ರ ಸಹಕಾರಿಯೂನಿಯನ್ ಮತ್ತು ಬಡಗಬೆಟ್ಟು ಕೋ ಆಪರೇಟಿವ್ ಸೊಸೈಟಿ ಲಿ. ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ಉಡುಪಿ ಪಡುಕುತ್ಯಾರ್ ಸರಸ್ವತಿ ಕೋ ಆಪರೇವಿಟ್ ಸೊಸೈಟಿ ಅಧ್ಯಕ್ಷ ಬಿ. ಸೂರ್ಯಕುಮಾರ್, ಲೊಂಬಾರ್ಡ್ ಮೆಮೋರಿಯಲ್ ಆಸ್ಪತ್ರೆ ನಿರ್ದೇಶಕರಾದ ಡಾ| ಸುಶೀಲ್ ಜತ್ತನ್ನ ,ಹೈಟೆಕ್ ಮೆಡಿಕೆರ್ ಹಾಸ್ಪಿಟಲ್ ಉಡುಪಿ ಎಂ.ಡಿ. ಡಾ| ಟಿ. ಎಸ್. ರಾವ್, ಎಂ ಎಸ್ ಕೊರಂಗ್ರಪಾಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಶ್ರೀಧರ್ ದೇವಾಡಿಗ, ಉಡುಪಿ ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರಮೇಶ್ಕಾಂಚನ್, ಹೋಮಿಯೋಪಥಿಕ್ ಫಿಶಿಷಿಯನ್ ಡಾ| ಬೆರಿಲ್ ಎ. ಬೆರ್ನಾರ್ಡ್, ಮುಲ್ಕಿ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷೆ ಶರ್ಲಿ ಸುಮಾಲಿನಿ,ಕಟ್ಟಡ ಮಾಲೀಕ ಶಂಭು ಎ. ಸನಿಲ್, ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಪ್ರಧಾನ ಅಧ್ಯಕ್ಷ ಎಚ್ ವಸಂತ್ ಬೆರ್ನಾರ್ಡ್ , ಉಪಾಧ್ಯಕ್ಷ ವಿಜಯಕುಮಾರ್ ಸನಿಲ್, ನಿರ್ದೇಶಕರಾದ ಉಮಾನಾಥ್ ಜೆ ಶೆಟ್ಟಿಗಾರ್, ಧನಂಜಯ ಮಟ್ಟು , ಗೌತಮ್ ಜೈನ್, ಗಣೇಶ ಪ್ರಸಾದ್ ದೇವಾಡಿಗ, ಜೈ ಕೃಷ್ಣ ಕೋಟ್ಯಾನ್,, ಡಾ. ಶೆರಿಲ್ ಆಯೋನಾ ಐಮನ್,ರೇಖಾ ಶೆಟ್ಟಿ, ಹರೀಶ್ ಎನ್ ಪುತ್ರನ್ ಸಸಿಹಿತ್ಲು,ನವೀನ್ ಸಾಲ್ಯಾನ್ ಪಂಜ, ಮೋಹನ ದಾಸ್, ಅನಿಲ್ ಪೂಜಾರಿ ಸಸಿಹಿತ್ಲು, ರಜಿಯಾ ಭಾನು, ಕರಿಯ ಕಾಡಿಗ, ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಪೂಜಾರಿ,ಉಡುಪಿ ಶಾಖಾ ಪ್ರಬಂಧಕರಾದ ನಿಶಾ ಸುಹೈಲ್ ಡೇನಿಯಲ್,ಎಪಿ ಎಂ ಸಿ ಮಾಜೀ ಅಧ್ಯಕ್ಷ ಪ್ರಮೋದ್ ಕುಮಾರ್ ಕಿನ್ನಿಗೋಳಿ,ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಶಶೀoದ್ರ ಸಾಲ್ಯಾನ್ ಹಳೆಯಂಗಡಿ, ಅಶೋಕ್ ಪೂಜಾರ, ಮಂಜುನಾಥ ಕಂಬಾರ, ಸುಭಾಶ್ಚಂದ್ರ ಕೆಎಸ್ ರಾವ್ ನಗರ,ಧರ್ಮಾನಂದ ಶೆಟ್ಟಿಗಾರ್, ಸಂತೋಷ್ ಪೂಜಾರಿ ಕೊಪ್ಪಲ ಹಳೆಯಂಗಡಿ ಮತ್ತಿತರರು ಉಪಸ್ಥಿತರಿದ್ದರು.

ಸೊಸೈಟಿ ಅಧ್ಯಕ್ಷ ವಸಂತ್ ಬೆರ್ನಾರ್ಡ್, ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಧನ್ಯವಾದ ಅರ್ಪಿಸಿದರು.
ಪ್ರಕಾಶ್ ಕಿನ್ನಿಗೋಳಿ ನಿರೂಪಿಸಿದರು.
