ಮಂಗಳೂರು: ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ “ಫಾದರ್”! ಪ್ರಾರ್ಥನೆಗೆ ಬರುತ್ತಿದ್ದ ಇನ್ನೂ ಕೆಲವು ಬಾಲಕರ ಮೇಲೂ ಅಮಾನುಷ ಕೃತ್ಯ ಬೆಳಕಿಗೆ!!

ಮಂಗಳೂರು: ಅಪ್ರಾಪ್ತ ಬಾಲಕನಿಗೆ ಚರ್ಚ್ ಫಾದರ್ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿದ ಘಟನೆ ವರದಿಯಾಗಿದ್ದು ದಕ್ಷಿಣ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಫಾದರ್ ಸಿಪ್ರಿಯನ್ ಪಿಂಟೋ ಎಂದು ಹೆಸರಿಸಲಾಗಿದೆ.
ಬಾಲಕ ಪ್ರಾರ್ಥನೆ ಮಾಡಲು ಚರ್ಚ್‌ಗೆ ಬರುತ್ತಿದ್ದ ವೇಳೆ ನಾನಾ ರೀತಿಯಲ್ಲಿ ಆಮಿಷ ಒಡ್ಡಿದ್ದ ಸಿಪ್ರಿಯನ್ ಪಿಂಟೋ ಆತನನ್ನು ಪ್ರಾರ್ಥನಾ ಕೊಠಡಿ ಹಾಗೂ ತನ್ನ ರೂಮಿಗೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಬಗ್ಗೆ ಎಫ್ ಐ ಆರ್ ನಲ್ಲಿ ಹೇಳಲಾಗಿದೆ.


ಕಳೆದ ಆಗಸ್ಟ್ 14ರ ಸಂಜೆಯೂ ಪ್ರಾರ್ಥನೆಯ ಸಮಯದಲ್ಲಿ ಬಾಲಕನಿಗೆ ಮತ್ತೆ ಕಿರುಕುಳ ನೀಡಿದ್ದು ಇದರಿಂದ ಭಯಕ್ಕೆ ಒಳಗಾದ ಬಾಲಕ ತನ್ನ ಸ್ನೇಹಿತರೊಂದಿಗೆ ಈ ವಿಷಯವನ್ನು ಹಂಚಿಕೊಂಡಿದ್ದು ಈ ವೇಳೆ ಇನ್ನೂ ಕೆಲವು ಬಾಲಕರಿಗೆ ಆರೋಪಿ ಲೈಂಗಿಕ ದೌರ್ಜನ್ಯ ಎಸಗಿದ್ದು ಬೆಳಕಿಗೆ ಬಂದಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advt
error: Content is protected !!