
ಮಂಗಳೂರು: ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರನ್ನು ಅಕ್ರಮ ಸಂಬಂಧ ಶಂಕೆಯ ಹಿನ್ನೆಲೆಯಲ್ಲಿ ಪತಿ ಕೊಲೆಗೈದಿರುವ ಪ್ರಕರಣ ವರದಿಯಾಗಿದೆ. ಮಹಾರಾಷ್ಟ್ರ ಮೂಲದ ಸೋನಾಲಿ(30) ಕೊಲೆಯಾಗಿದ್ದು ಆಕೆಯ ಪತಿ ಶಿವಲಿಂಗಪ್ಪ ಎಂಬಾತನನ್ನು ಕಾವೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚಾಕುವಿನಿಂದ ಇರಿದು ಕೊಲೆ ಮಾಡಿದ್ದು ಹೆಚ್ಚಿನ ವಿವರ ಇನ್ನಷ್ಟೇ ಲಭಿಸಬೇಕಿದೆ. ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ.
