
ಮಂಗಳೂರು: ಸರಕಾರದ ಸುತ್ತೋಲೆಯ ಪ್ರಕಾರ ಪ್ರತಿ ಗ್ರಾಮ ಪಂಚಾಯತ್ ನಲ್ಲಿ ವಾರ್ಷಿಕವಾಗಿ ನಾಲ್ಕು ಬಾರಿ ಗ್ರಾಮ ಸಭೆಯನ್ನು ಇಟ್ಟು ಗ್ರಾಮಸ್ಥರ ಸಮಸ್ಯೆಯನ್ನು ಗ್ರಾಮದಲ್ಲಿಯೆ ಪರಿಹರಿಸುವ ಸರಕಾರದ ಒಂದು ಉದ್ದೇಶ ಆದರೆ ಇತ್ತೀಚಿನ ದಿನಗಳಲ್ಲಿ ಈ ಗ್ರಾಮ ಸಭೆಯು ಅಧಿಕಾರಿಗಳ ಬೇಜವಾಬ್ದಾರಿಯಿಂದ ಕಾಟಾಚಾರಕ್ಕೆ ನಡೆಯುತ್ತಿದೆ. ಅಂತಹ ಘಟನೆ ಚೇಳೃರು ಗ್ರಾಮ ಪಂಚಾಯತ್ ನಲ್ಲಿ ನಡೆಯಿತು. ಗ್ರಾಮ ಸಭೆಗೆ ಹಾಜರಾಗಬೇಕಾದ 26 ಇಲಾಖೆಗಳ ಅಧಿಕಾರಿಗಳು ಗೖರುಹಾಜರಾಗಿದ್ದು ಕೇವಲ 5 ಇಲಾಖೆ ಅಧಿಕಾರಿಗಳು ಹಾಜರಿದ್ದ ಕಾರಣ ಗ್ರಾಮಸ್ಥರು ಅಕ್ರೋಶಗೊಂಡು ಗ್ರಾಮಸಭೆಯನ್ನು ಬಹಿಷ್ಕರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ ಘಟನೆ ಚೇಳೃರು ಗ್ರಾಮ ಪಂಚಾಯತ್ ನಲ್ಲಿ ನಡೆದ ದ್ವಿತೀಯ ಹಂತದ ಗ್ರಾಮ ಸಭೆಯಲ್ಲಿ ನಡೆಯಿತು ಗ್ರಾಮದ ಸಮಸ್ಯೆಯನ್ನು ಕೇಳಬೇಕಾಗಿದ್ದ ಅಧಿಕಾರಿಗಳಿಗೆ ಗೈರುಹಾಜರಾಗಿದ್ದ ಕಾರಣ ಗ್ರಾಮ ಸಭೆಯೇ ನಡೆಸುವುದು ಬೇಡ ಎಂಬ ನಿರ್ಧಾರವನ್ನು ಗ್ರಾಮಸ್ಥರು ಪಟ್ಟು ಹಿಡಿದರು.

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರೇಷನ್ ಕಾರ್ಡ್ ಸಮಸ್ಯೆ ಬಹಳಷ್ಟು ಇದೆ ಗ್ರಾಮ ಪಂಚಾಯತ್ ನಲ್ಲಿ ಯಾವುದೇ ಜನಪರ ಕೆಲಸಗಳು,ಕಾಮಗಾರಿಗಳು ಆಗುತ್ತಿಲ್ಲ ಕೇಂದ್ರ ಸರಕಾರದ ಜಲವಿಷನ್ ನಲ್ಲಿ ಆಗಬೇಕಾಗಿದ್ದ ಕಾಮಗಾರಿಗಳು ಪೂರ್ತಿಯಾಗಿಲ್ಲ, ನಿವೇಶನ ರೈತರಿಗೆ ನಿವೇಶನ ನೀಡಲು ಎಸ್ ಸಿ ಎ ಸ್ ಟಿ ಯವರಿಗೆ ಮತ್ತು ಇತರರಿಗೆ ಜಾಗ ಮೀಸಲಿಟ್ಟಿದ್ದು ಅದನ್ನು ನೀಡಲು ಆಗುತ್ತಿಲ್ಲ ಹಾಗೂ ಗ್ರಾಮ ಪಂಚಾಯತ್ ನ ಯಾವುದೇ ಸಮಸ್ಯೆಯನ್ನು ಮೇಲಾಧಿಕಾರಿಗಳಿಗೆ ತಿಳಿಸಿದರು ಸೂಕ್ತ ಸ್ಪಂದನೆ ನೀಡುತ್ತಿಲ್ಲ ಇಂತಹ ಸಮಸ್ಯೆಯನ್ನೆಲ್ಲ ನಾವು ಯಾರಲ್ಲಿ ಹೇಳುವುದು ಎಂದು ಗ್ರಾಮಸ್ಥರು ತನ್ನ ಅಳಲನ್ನು ತೋಡಿಕೊಂಡರು ಅದಕ್ಕೆ ಉತ್ತರಿಸಬೇಕಾದ ಅಧಿಕಾರಿಗಳಿಗೆ ಬಾರದ ಕಾರಣ ನಾವು ಯಾರಲ್ಲಿ ಈ ಸಮಸ್ಯೆಯನ್ನು ಹೇಳುವುದು ಎಂದು ಗ್ರಾಮಸ್ಥರು ಗ್ರಾಮ ಸಭೆಯ ನೋಡಲ್ ಅಧಿಕಾರಿಯಾಗಿದ್ದ ಹಾಗೂ ಗ್ರಾಮ ಪಂಚಾಯತ್ ನ ಆಡಳಿತ ಅಧಿಕಾರಿಯಾಗಿದ್ದ ಮಂಗಳೂರು ನಗರ ಪಾಲಿಕೆಯ ಇಂಜಿನಿಯರ್ ಮಿಥುನ್ ಅವರನ್ನು ಆಗ್ರಹಿಸಿದರು .
ಇದಕ್ಕೆ ಉತ್ತರಿಸಿದ ನೋಡಲ್ ಅಧಿಕಾರಿಯವರು ಈ ಬಗ್ಗೆ ಇಂದಿನ ನಿರ್ಣಯವನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸಲಾಗುವುದು ಹಾಗೂ ಇನ್ನೊಮ್ಮೆ ಗ್ರಾಮ ಸಭೆಯನ್ನು ಕರೆಯಲಾಗುವುದು ಎಂದರು ಗ್ರಾಮ ಸಭೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಕ್ಷ್ಮಿ ಲೆಕ್ಕಾಧಿಕಾರಿ ಸುರೇಶ್ಗ್ರಾ,ಮ ಆಡಳಿತ ಅಧಿಕಾರಿ ಸುಲೋಚನಾ,ಶಿಶು ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ರೇಣುಕಾ, ಕಾಟಿಪಳ್ಳ ಆರೋಗ್ಯ ಕೇಂದ್ರದ ಸಹಾಯಕಿ ಮಂಜುಳಾ,ಹಾಗೂ ಮೆಸ್ಕಾಂ ಇಲಾಖೆ,ಪಶು ಇಲಾಖೆ, ಇಂಜಿನಿಯರ್ ವಿಭಾಗದವರು ಉಪಸ್ಥಿತರಿದ್ದರು.
