“ಮೂಲ್ಕಿ ಸೀಮೆ ಅರಸು ಕಂಬಳದ ಅನಧಿಕೃತ ಸಭೆಗೂ ಕಂಬಳ ಸಮಿತಿಗೂ ಯಾವುದೇ ಸಂಬಂಧವಿಲ್ಲ“

ಮುಲ್ಕಿ: ಮುಲ್ಕಿ ಸೀಮೆ ಅರಸು ಕಂಬಳದ ಕುರಿತು ಕೋಸ್ಟಲ್ ಸಭಾಂಗಣ ಹಳೆಯಂಗಡಿಯಲ್ಲಿ ನಡೆದ ಸಭೆಗೂ ಅರಸು ಕಂಬಳ ಸಮಿತಿಗೂ ಯಾವುದೇ ಸಂಬಂಧವಿಲ್ಲ ಎಂದು ಮೂಲ್ಕಿ ಸೀಮೆ ಅರಸು ಕಂಬಳ ಸಮಿತಿ ಸ್ಪಷ್ಟನೆ ನೀಡಿದೆ. 27/9/2025 ಶನಿವಾರ ಬೆಳಗ್ಗೆ ಅರಮನೆಯ ಧರ್ಮ ಚಾವಡಿಯಲ್ಲಿ ಮುಲ್ಕಿ ಸೀಮೆಯ ಅರಸರು, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮೊಕ್ತೇಸರರು, ಕಂಬಳ ಸಮಿತಿಯ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ದುಗ್ಗಣ್ಣ ಸಾವಂತರ ಅಧ್ಯಕ್ಷತೆಯಲ್ಲಿ ನಡೆದ ಮುಲ್ಕಿ ಸೀಮೆಯ ಅರಸು ಕಂಬಳದ ಸಭೆಯಲ್ಲಿ ಎಲ್ಲರ ಒಕ್ಕೊರಳಿನ ಆಗ್ರಹದಂತೆ ಹಿಂದಿನ ಸಮಿತಿಯನ್ನು ಬರ್ಕಾಸ್ತುಗೊಳಿಸಲಾಗಿದೆ. ಹಳೆಯಂಗಡಿಯ ಕೋಸ್ಟಲ್ ಸಭಾಂಗಣದಲ್ಲಿ ನಡೆದ ಸಭೆ ಅನಧಿಕೃತವಾಗಿರುತ್ತದೆ ಎಂದು ಸಮಿತಿ ಹೇಳಿದೆ. ಈ ವರ್ಷದ ಮುಲ್ಕಿ ಸೀಮೆ ಅರಸು ಕಂಬಳವು ಗೌರವಾನ್ವಿತ ಅರಸರಾದ ಶ್ರೀ ದುಗ್ಗಣ್ಣ ಸಾವಂತರ ಮಾರ್ಗದರ್ಶನ, ನಿರ್ದೇಶನ, ಅಧ್ಯಕ್ಷತೆಯಲ್ಲಿ ನಡೆಯಲಿರುವುದು.

Advt
error: Content is protected !!