ಸೆ.20: ದ.ಕ., ಉಡುಪಿ ಹಾಗೂ ಕೊಡಗು ಅಂತರ್ ಜಿಲ್ಲಾಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ ಕ್ರೀಡಾಕೂಟ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಶನ್ ಮಂಗಳೂರು ಇವರು ಆಯೋಜಿಸುವ “ದಕ್ಷಿಣ ಕನ್ನಡ ಉಡುಪಿ ಹಾಗೂ ಕೊಡಗು ಅಂತರ್ ಜಿಲ್ಲಾ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ ಕ್ರೀಡಾಕೂಟ”ವು ಸೆ.20ರಂದು ಬೆಳಗ್ಗೆ 6 ಗಂಟೆಯಿಂದ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆಯಲಿರುವುದು ಎಂದು ಆಯೋಜಕರಾದ ರವಿರಾಜ್ ಪುತ್ತೂರು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಕ್ರೀಡಾ ಕೂಟದ ಉದ್ಘಾಟನಾ ಸಮಾರಂಭ ಬೆಳಗ್ಗೆ 10 ಗಂಟೆಗೆ ನಡೆಯಲಿರುವುದು. 30+ ರಿಂದ 90+ ವಯೋಮಿತಿಯ ಪುರುಷ ಹಾಗೂ ಮಹಿಳಾ ಸ್ಪರ್ಧಿಗಳಿಗೆ ಈ ಕೆಳಗಿನ 3 ಕ್ರೀಡೆಗಳಲ್ಲಿ ಭಾಗವಹಿಸಬಹುದಾಗಿದೆ.

ಓಟ : 100 2,200 2,400, 800, 1500
ನಡಿಗೆ : 5000 ಮೀ ಪುರುಷರಿಗೆ ಹಾಗೂ 3000 ಮೀ ಮಹಿಳೆಯರಿಗೆ
ಜಿಗಿತ : ಲಾಂಗ್ ಜಂಪ್, ಟ್ರಿಪಲ್ ಜಂಪ್, ಹೈ ಜಂಪ್
ಎಸೆತ : ಶಾಟ್‌ಪುಟ್, ಜಾವೆಲಿನ್, ಡಿಸ್ಕಸ್ ಹಾಗೂ ಹ್ಯಾಮ‌ರ್

ಕ್ರೀಡಾ ಕೂಟದ ಪ್ರಮುಖ ವಿಷಯಗಳು:
ಮಾಸ್ಟರ್ಸ್ ಕ್ರೀಡೆ ನಡೆಯುವ ಸಂದರ್ಭ ಚಿಕ್ಕ ಮಕ್ಕಳಿಗೂ ಕ್ರೀಡಾ ಸ್ಫೂರ್ತಿ ನೀಡುವ ಬಗ್ಗೆ ಯೋಚಿಸಿ ಈ ಬಾರಿ ವಯೋಮಿತಿ 10 ವರ್ಷ, 12 ವರ್ಷ ಹಾಗೂ 14 ವರ್ಷ ಕೆಳಗಿನ 200 2, 400 2,100 2, 60 ಮೀ. ಹಾಗೂ ಲಾಂಗ್ ಜಂಪ್, ಶಾಟ್‌ಪುಟ್, ಜಾವೆಲಿನ್ ಕ್ರೀಡೆ ಇರಲಿದೆ.
ಪತ್ರಿಕಾಗೋಷ್ಟಿಯಲ್ಲಿ ಅಧ್ಯಕ್ಷ ಕೆ.ಜಗದೀಶ್ ಶೆಟ್ಟಿ, ರೇಖಾ ಶೆಟ್ಟಿ, ನಂದಕುಮಾರ್ ಅಂಚನ್, ಚಂದ್ರಹಾಸ್ ಅಂಚನ್ ಮತ್ತಿತರರು ಉಪಸ್ಥಿತರಿದ್ದರು.

Advt
error: Content is protected !!