
ಉಡುಪಿ: ಮೀನುಗಾರನಿಗೆ ಚೂರಿಯಿಂದ ಇರಿದು ಹತ್ಯೆ ಮಾಡಿದ ಘಟನೆ ಮಲ್ಪೆಯ ಬೋಟೊಂದರಲ್ಲಿ ಇಂದು ಬೆಳಗ್ಗೆ ನಡೆದಿದೆ.
ಚಿಕ್ಕಮಗಳೂರು ಮೂಲದ ಅಭಿಷೇಕ್ (24) ಕೊಲೆಯಾದ ದುರ್ದೈವಿ. ರಾಯಚೂರು ಮೂಲದ ಗೋಂವಿಂದ ರಾಜು ಕೊಲೆ ಆರೋಪಿಯಾಗಿದ್ದಾನೆ. ಮುಂಜಾನೆ ಮಲ್ಪೆ ಬಂದರಿನಲ್ಲಿ ಯುವಕನಿಗೆ ಆರೋಪಿ ಚಾಕು ಇರಿದು ಪರಾರಿಯಾಗಿದ್ದ. ಕಾರ್ಯಾಚರಣೆ ನಡೆಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
