
ಮಂಗಳೂರು: ಕರ್ನಾಟಕ ಸರ್ಕಾರ, ತನ್ನ ಬಿಯಾಂಡ್ ಬೆಂಗಳೂರು ಮಿಷನ್ ಮತ್ತು LEAP ಉಪಕ್ರಮದ ಅಡಿಯಲ್ಲಿ, ಕರ್ನಾಟಕದ ಉನ್ನತ ಸಾಮರ್ಥ್ಯದ ಸ್ಪಾರ್ಟ್ ಅಪ್‌ಗಳನ್ನು ಗುರುತಿಸಿ, ಪೋಷಿಸಿ ಮತ್ತು ವೇಗವರ್ಧಿಸುವ ಗುರಿಯುಳ್ಳ, ಉದ್ಯಮ-ನೇತೃತ್ವದ ರಚನಾತ್ಮಕ ಸ್ಪಾರ್ಟ್ ಅಪ್ ವೇಗವರ್ಧಕ ಕಾರ್ಯಕ್ರಮವಾದ ಕೆ-ಕಾಂಬಿನೇಟರ್ ಅನ್ನು ಆರಂಭಿಸುತ್ತಿದೆ.
ಕರ್ನಾಟಕದಲ್ಲಿ ಮೊದಲ ಕೆ-ಕಾಂಬಿನೇಟರ್ ಉಪಕ್ರಮವನ್ನು ಆಯೋಜಿಸಲು ಮತ್ತು ಮುನ್ನಡೆಸಲು TiE ಮಂಗಳೂರು ಆಯ್ಕೆಯಾಗಿದೆ, ಇದು ಉಡುಪಿ-ಮಂಗಳೂರು ಮತ್ತು ವಿಶಾಲ ಕರಾವಳಿ ಕರ್ನಾಟಕ ಪ್ರದೇಶದ ಸ್ಪಾರ್ಟ್ ಅಪ್‌ಗಳನ್ನು ಬೆಂಬಲಿಸುವತ್ತ ಗಮನ ಹರಿಸಿ, ರಾಜ್ಯಾದ್ಯಂತ ಕಾರ್ಯಕ್ರಮದ ವಿಸ್ತರಣೆಯ ಆರಂಭವನ್ನು ಸೂಚಿಸುತ್ತದೆ.
TiE ಗ್ಲೋಬಲ್‌ನ ದಶಕದಷ್ಟು ಹಳೆಯದಾದ ಸಂಘಟಿತ ಮಾರ್ಗದರ್ಶನ ವಿಧಾನವಾದ TiE ನರ್ಚರ್ ಅನ್ನು ಆಧರಿಸಿ, ಕೆ-ಕಾಂಬಿನೇಟರ್ ಪ್ರತಿ ಕೋಹಾರ್ಟ್‌ಗೆ 4-6 ಸ್ಪಾರ್ಟ್ ಅಪ್‌ಗಳನ್ನು ಆಯ್ಕೆ ಮಾಡಲಿದ್ದು, ವರ್ಷಕ್ಕೆ ಮೂರು ಕೋಹಾರ್ಟ್‌ಗಳನ್ನು ಯೋಜಿಸಲಾಗಿದೆ. ಆಯ್ಕೆಯಾದ ಸಂಸ್ಥಾಪಕರು ಬೂಟ್ ಕ್ಯಾಂಪ್‌ಗಳು, ಮಾಸ್ಪರ್‌ಕ್ಲಾಸ್‌ಗಳು, 15+ ಮಾರ್ಗದರ್ಶನ ಅಧಿವೇಶನಗಳು, ಪೀರ್ ರಿವ್ಯೂಗಳು, ಮಾರುಕಟ್ಟೆ ಮತ್ತು ಉದ್ಯಮ ಸಂಪರ್ಕಗಳು, ಹೂಡಿಕೆ ಸಿದ್ಧತೆ ಹಾಗೂ ಡೆಮೊ ಡೇ ಅವಕಾಶಗಳನ್ನು ಒಳಗೊಂಡ ರಚನಾತ್ಮಕ 16 ವಾರಗಳ ವೇಗವರ್ಧಕ ಪಯಣವನ್ನು ಪೂರ್ಣಗೊಳಿಸಲಿದ್ದಾರೆ.
ಈ ಕಾರ್ಯಕ್ರಮವು ತಮ್ಮ ಪೂಫ್ ಆಫ್ ಕಾನ್ಸೆಪ್ಟ್ (PoC) ಅಥವಾ ಮಿನಿಮಮ್ ವಯಬಲ್ ಪ್ರಾಡಕ್ಟ್ (MVP) ಅನ್ನು ಯಶಸ್ವಿಯಾಗಿ ಪರೀಕ್ಷಿಸಿ, ವಿಸ್ತರಣೆಯ ಆರಂಭಿಕ ಹಂತಗಳನ್ನು ಪ್ರವೇಶಿಸುತ್ತಿರುವ ಸ್ಪಾರ್ಟ್ ಅಪ್‌ಗಳನ್ನು ಗುರಿಯಾಗಿಸಿಕೊಂಡಿದ್ದು, ಪ್ರಾಡಕ್ಟ್-ಮಾರುಕಟ್ಟೆ ಹೊಂದಾಣಿಕೆ, ಗ್ರಾಹಕ ಮೌಲೀಕರಣ, ಗೋ-ಟು-ಮಾರ್ಕೆಟ್ ತಂತ್ರ, ಮಾರುಕಟ್ಟೆ ಪ್ರವೇಶ ಮತ್ತು ಹೂಡಿಕೆ ಸಿದ್ಧತೆಯ ಮೇಲೆ ಬೆಂಬಲ ಕೇಂದ್ರೀಕರಿಸಿದೆ.
ಪ್ರತಿ ಕೋಹಾರ್ಟ್‌ನಿಂದ ಎರಡು ಅರ್ಹ ಸ್ಟಾರ್ಟ್ ಅಪ್‌ಗಳು ₹10 ಲಕ್ಷದ ಕಾರ್ಯಕ್ಷಮತೆ-ಆಧಾರಿತ ಅನುದಾನಕ್ಕೆ, 0% ಈಕ್ವಿಟಿಯಲ್ಲಿ ಅರ್ಹತೆ ಪಡೆಯಲಿದ್ದು, ಇದು ಕಾರ್ಯಕ್ರಮದ ಯಶಸ್ವಿ ಪೂರ್ಣಗೊಳಿಕೆ, ಅನ್ವಯಿಕ ಮಾನದಂಡಗಳು ಮತ್ತು ಅನುಮೋದನೆಗಳಿಗೆ ಒಳಪಟ್ಟಿರುತ್ತದೆ.
ಕೆ-ಕಾಂಬಿನೇಟರ್ ಉಪಕ್ರಮವು ಐದು ವರ್ಷಗಳಲ್ಲಿ ಒಟ್ಟು ₹9.26 ಕೋಟಿ ಅನುಮೋದಿತ ಅನುದಾನ ಹಂಚಿಕೆಯನ್ನು ಹೊಂದಿದೆ, ಈ ಪೈಕಿ ಮೊದಲ ಕಂತಿನ ₹1.89 ಕೋಟಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ಇದು ಕಾರ್ಯಕ್ರಮದ ಅನುಷ್ಠಾನದ ಆರಂಭವನ್ನು ಸೂಚಿಸುತ್ತದೆ.
ಕೆ-ಕಾಂಬಿನೇಟರ್ – TiE ನರ್ಚರ್ ಪ್ರಾಯೋಜಿತ, ಸಂಸ್ಥಾಪಕರಿಗೆ TiE ಯ ಜಾಗತಿಕ ಮಾರ್ಗದರ್ಶಕ ಜಾಲದ ಜೊತೆಗೆ, ಅದರ ವಿಶಾಲ ಉದ್ಯಮ, ಹೂಡಿಕೆದಾರ ಮತ್ತು ಉದ್ಯಮಶೀಲತಾ ಪರಿಸರ ವ್ಯವಸ್ಥೆಗೆ ಪ್ರವೇಶ ನೀಡಲಿದ್ದು, ಭರವಸೆಯ ಪ್ರಾದೇಶಿಕ ಉದ್ಯಮಗಳಿಗೆ ತಜ್ಞರ ಮಾರ್ಗದರ್ಶನ ಪಡೆಯಲು, ಮಾರುಕಟ್ಟೆಗಳನ್ನು ತಲುಪಲು, ಸ್ಥಳೀಯವಾಗಿ ವಿಸ್ತರಣಾಶೀಲ ವ್ಯವಹಾರಗಳನ್ನು ನಿರ್ಮಿಸಲು ಮತ್ತು ಜಾಗತಿಕವಾಗಿ ಬೆಳೆಯಲು ಅನುವು ಮಾಡಿಕೊಡುತ್ತದೆ.

ಮೊದಲ ಕೋಹಾರ್ಟ್‌ಗೆ ಅರ್ಜಿಗಳು ಇಂದಿನಿಂದ ಆರಂಭವಾಗಲಿವೆ.
ಕಾರ್ಯಕ್ರಮ: ಕೆ-ಕಾಂಬಿನೇಟರ್ – TiE ನರ್ಚರ್ ಪ್ರಾಯೋಜಿತ
ಅನುಷ್ಠಾನ ಪಾಲುದಾರ: TiE ಮಂಗಳೂರು
ಅತಿಥೇಯ ಸ್ಥಳ: wrkwrk, ಮಂಗಳೂರು ಮತ್ತು ಉಡುಪಿ
ನೋಡಲ್ ಏಜೆನ್ಸಿ: ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM
ಮಾಧ್ಯಮ ಸಂಪರ್ಕ:
ಎಕ್ಸಿಕ್ಯುಟಿವ್ ಡೈರೆಕ್ಟರ್, TiE ಮಂಗಳೂರು
ed@mangaluru.tie.org
+91 96117 54584