
ಧಾರವಾಡ: ನಗರದ ಬಾರಾಕೋಟ್ರಿಯ ರಂಕಾ ಸ್ಟೆಲೋ ಅಪಾರ್ಟ್‌ಮೆಂಟ್‌ನ ಆರನೇ ಮಹಡಿಯ ಮನೆಯ ಕೋಣೆಯಲ್ಲಿ ಡಾ.ಕಿರಣ್ ಹೊನ್ನಣ್ಣ(ಅರಿವಳಿಕೆ ತಜ್ಞ) ಅವರನ್ನು ನಿನ್ನೆ ಸಂಜೆ ಪತ್ನಿಯೇ ಇರಿದು ಬರ್ಬರವಾಗಿ ಕೊಲೆ ಮಾಡಿದ್ದು ಮಗ 8 ವರ್ಷ ಪ್ರಾಯದ ನಿಹಿತ್ ಗೂ ಮನಬಂದಂತೆ ಚಾಕುವಿನಲ್ಲಿ ಇರಿಯಲಾಗಿದೆ. ಸದ್ಯ ಗಂಭೀರ ಗಾಯಗೊಂಡಿರುವ ಪುತ್ರ ನಿಹಿತ್‌ನನ್ನು ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಸಂಬಂಧ ಕಿರಣ್ ಪತ್ನಿ ಡಾ.ಪ್ರಿಯಾಂಕಾ ಕತ್ತನಹಳ್ಳಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಿರಣ್ ಅವರು ಚಿರಾಯು ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರು. ಕಿರಣ್ ಅವರ ಕುತ್ತಿಗೆ ಮತ್ತು ಬೆನ್ನಿನ ಭಾಗಕ್ಕೆ ಇರಿದು ಹತ್ಯೆ ಮಾಡಲಾಗಿತ್ತು.
‘ಮನೆಯಲ್ಲಿ ಪತಿ, ಪತ್ನಿ ಮತ್ತು ಪುತ್ರ ಮೂವರು ವಾಸ ಇದ್ದರು. ಕಿರಣ್‌ಗೆ ಬೆಳಿಗ್ಗೆ ಕುಟುಂಬದವರು, ಸ್ನೇಹಿತರು ಫೋನ್ ಮಾಡಿದಾಗ ಪತ್ನಿ ಪ್ರಿಯಾಂಕಾ ಮಾತನಾಡಿ ಕಿರಣ್ ಡ್ಯೂಟಿ ಹೋಗಿದ್ದಾರೆ, ವಿಶ್ರಾಂತಿ ಪಡೆಯುತ್ತಿದ್ಧಾರೆ ಎಂದು ಹೇಳಿದ್ದಾರೆ. ಅಕ್ಕಪಕ್ಕದ ಮನೆಯವರು ಕೇಳಿದಾಗ ಕಿರಣ್ ಹೊರಗೆ ಹೋಗಿದ್ದಾರೆ ಎಂದು ಪ್ರಿಯಾಂಕಾ ಹೇಳಿದ್ದಾರೆ. ಪತಿ ಮತ್ತು ಪತ್ನಿ ನಡುವೆ ಕಲಹವಾಗಿ ಘಟನೆ ನಡೆದಿರಬಹುದು’ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದರು.

‘ವೈದ್ಯ ದಂಪತಿ ಪುತ್ರ ನಿಹಿತ್‌ಗೂ (8 ವರ್ಷ) ಆಯುಧದಿಂದ ಇರಿದಿದ್ದಾರೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಾರ್ಟ್‌ಮೆಂಟ್‌ನಲ್ಲಿನ ಸಿ.ಸಿ.ಕ್ಯಾಮೆರಾಗಳಲ್ಲಿ ಫೂಟೇಜ್ ಪರಿಶೀಲಿಸಲಾಗುತ್ತಿದೆ. ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುವುದು’ ಎಂದರು.
