
ರೋಟರಿ ಕ್ಲಬ್ ಮುಲ್ಕಿ ಪ್ರಾಯೋಜಿತ ರೋಟರಿ ಸಮುದಾಯ ದಳ ತೋಕೂರು ಇದರ 2026 – 27ನೇ ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀಯುತ ವಿನೋದ್ ಕುಮಾರ್ ಆಯ್ಕೆಯಾದರು.
ಯುವಕ ಸಂಘದ ಸುವರ್ಣ ಸಭಾಂಗದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಮುಂದಿನ ಸಾಲಿನ ಉಪಾಧ್ಯಕ್ಷರಾಗಿ ನಾಗಶಯನ, ಕಾರ್ಯದರ್ಶಿಯಾಗಿ ಉದಯ ಕುಮಾರ್, ಜೊತೆ ಕಾರ್ಯದರ್ಶಿಯಾಗಿ ಗಣೇಶ ಪದ್ಮಶಾಲಿ, ಕೋಶಾಧಿಕಾರಿಯಾಗಿ ಹರಿದಾಸ ಭಟ್, ನಿರ್ದೇಶಕರಾಗಿ ವಾಮನ ಯಸ್ ದೇವಾಡಿಗ, ಸತೀಶ್ ಭಟ್, ಹೇಮನಾಥ ಅಮೀನ್, ವಿನೋದ ಭಟ್, ಪ್ರಮೀಳಾ ಡಿ ಶೆಟ್ಟಿ, ದಂಡಪಾಣಿ ಪರಮೇಶ್ವರ ಯಸ್, ಸಮಿತಿ ಸದಸ್ಯರಾಗಿ ಬಿ . ದುರ್ಗಾಪ್ರಸಾದ್ ಶೆಟ್ಟಿ, ರಮೇಶ್ ದೇವಾಡಿಗ, ಈಶ್ವರ ಭಂಡಾರಿ, ಶೇಖರ್ ಶೆಟ್ಟಿಗಾರ್, ಪಿ. ಸಿ ಕೋಟ್ಯಾನ್, ಬಿ. ದಾಮೋದರ ಶೆಟ್ಟಿ ಆಯ್ಕೆಯಾದರು.
