
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಹಾಗೂ ಸಾಧಕರಿಗೆ ಸನ್ಮಾನ
ಸುರತ್ಕಲ್: ವಿದ್ಯಾರ್ಥಿಗಳಿಗೆ ಎಳವೆಯಲ್ಲಿಯೇ ಪೋಷಕರು ಮೌಲ್ಯಯುತ ಜೀವನದ ಪಾಠವನ್ನು ಹೇಳಿಕೊಡುವುದರಿಂದ ಮುಂದಿನ ಶೈಕ್ಷಣಿಕ ಜೀವನದಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಾರೆ. ವಿದ್ಯಾರ್ಥಿಗಳಿಗೆ ಇತಿಹಾಸದ ಚರಿತ್ರೆ, ಜೀವನದಲ್ಲಿ ಸೋತಾಗ ಮುನ್ನುಗ್ಗುವ ಛಲವನ್ನು ಶಿಕ್ಷಣದ ಜೊತೆಗೆ ದೈನಂದಿನ ದಿನಗಳಲ್ಲಿ ನಡೆಯುವ ಚಟುವಟಿಕೆಗಳ ಮೂಲಕ ಪರಿಚಯಿಸುವುದಲ್ಲದೇ, ಸಂಸ್ಕಾರಯುತ ಜೀವನ ಮೌಲ್ಯದ ಪಾಠವನ್ನು ಬೋಧಿಸಬೇಕು ಎಂದು ದಿ.ಬಿ ಹರಿಶ್ಚಂದ್ರ ಆಚಾರ್ಯ ಮೆಮೋರಿಯಲ್ ಟ್ರಸ್ಟ್.ರಿ ಮಂಗಳೂರು ಇದರ ಉಪಾಧ್ಯಕ್ಷರಾದ ಪ್ರೊ.ಜಿ ಯಶವಂತ ಆಚಾರ್ಯ ಅವರು ನುಡಿದರು.
ಅವರು ಪಣಂಬೂರು ಶ್ರೀ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ.ರಿ ಕೃಷ್ಣಾಪುರ ಇದರ ಆಶ್ರಯದಲ್ಲಿ ದಿ.28-6-2026 ರ ಆದಿತ್ಯವಾರದಂದು ಜರುಗಿದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ವಿಶ್ವಕರ್ಮ ಕಲಾಪರಿಷತ್ತು ಮಂಗಳೂರು ಇದರ ಕೋಶಾಧಿಕಾರಿ ಎ.ಜಿ ಸದಾಶಿವ್ ಮಂಗಳಾದೇವಿ ಅವರು ಮಾತನಾಡಿ ಮಕ್ಕಳಿಗೆ ಪಠ್ಯದ ಜೊತೆಗೆ ಅವರ ರುಚಿಯಾನುಸಾರ ಕಲೆಗಳಿಗೆ ಪೋಷಕರು ಪ್ರೋತ್ಸಾಹ ನೀಡಿದರೆ ಉತ್ತಮ ಕಲಾವಿದರಾಗಿ ರೂಪುಗೊಳ್ಳಲು ಸಾಧ್ಯವೆಂದರು.
ಜಾನಕಿ ಕನ್ ಸ್ಟ್ರಕ್ಷನ್ ಎಮ್ ಆರ್ ಪಿ ಎಲ್ ಹಾಗೂ ಗಣೇಶಪುರ ಮಹಾಗಣಪತಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಧರ್ಮೇಂದ್ರ ಮಾತನಾಡಿ ವಿದ್ಯಾರ್ಥಿಗಳು ಶಾಲೆಯ ಪಠ್ಯ ಅಥವಾ ಪಠ್ಯೇತರ ಚಟುವಟಿಕೆಗಳು ಸೋತಾಗ ಅವರಿಗೆ ತೆಗಳಿಕೆ ಇನ್ನೊಬ್ಬರೊಂದಿಗೆ ಹೋಲಿಕೆ ಮಾಡದೇ ಅವರನ್ನು ಬೆನ್ನುತಟ್ಟಿ ಪ್ರೋತ್ಸಾಹಿಸಿ ಗೆಲುವಿನ ಹಾದಿಗೆ ಕರೆದೊಯ್ಯುವ ಕೆಲಸವನ್ನು ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸುಧಾಕರ ಆಚಾರ್ಯ ಕುತ್ತೆತ್ತೂರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸುಮಾರು 20ಕ್ಕೂ ಅಧಿಕ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ದರ್ಜೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ವಿದ್ಯಾರ್ಥಿಗಳಿಗೆ ದಿ. ಪಿ ಶಿವರಾಯ ಆಚಾರ್ಯ ಮತ್ತು ದಿ. ಚಂದ್ರಾವತಿ ಆಚಾರ್ಯ ಸ್ಮರಣಾರ್ಥ ಅವರ ಮಕ್ಕಳ ವತಿಯಿಂದ ಉಚಿತವಾಗಿ ಪುಸ್ತಕ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉದ್ಯಮಿ ದಯಾನಂದ ಆಚಾರ್ಯ ಕೆಳಾರ್ಕಳಬೆಟ್ಟು ಉಡುಪಿ, ಸಂಘದ ಉಪಾಧ್ಯಕ್ಷ ಹೆಚ್ ಚಿದಾನಂದ ಆಚಾರ್ಯ, ಮಹಿಳಾ ಸಮಿತಿ ಗೌರವಧ್ಯಕ್ಷೆ ಸುಜಾತ ಯೋಗೀಶ್ ಆಚಾರ್ಯ, ವಿಶ್ವಕರ್ಮ ಭಜನಾ ಮಂಡಳಿ ಅಧ್ಯಕ್ಷ ಶ್ರೀನಿವಾಸ ಆಚಾರ್ಯ ಮತ್ತಿತರು ಉಪಸ್ಥಿತರಿದ್ದರು. ಯಜ್ಞೇಶ್ವರ ಆಚಾರ್ಯ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜೆ. ಭಾಸ್ಕರ್ ಆಚಾರ್ಯ ವಂದಿಸಿದರು. ಕೃತಿ.ಕೆ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಎಸ್. ಎಸ್ ಎಲ್ ಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ನವ್ಯಶ್ರೀ ಅಚಾರ್ಯ ಹಾಗೂ ಪಿ.ಯು.ಸಿ ವಾಣಿಜ್ಯ ವಿಭಾಗದಲ್ಲಿ ಅತ್ಯಧಿಕ ಅಂಕ ಗಳಿಸಿದ ಆಗ್ನೇಯ ಜೆ ಆಚಾರ್ಯ ಅವರುಗಳನ್ನು ಸನ್ಮಾನಿಸಲಾಯಿತು.

ಗೌರವ ಸನ್ಮಾನ:
ದ್ವಿತೀಯ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 8ನೇ ರಾಂಕ್ ವಿಜೇತೆ ಕುಮಾರಿ ಅನ್ಯ ಆಚಾರ್ಯ ಕಿನ್ನಿಗೋಳಿ, ಬಹುಮುಖ ಪ್ರತಿಭೆ, ವಾಗ್ಮಿ, ನಿರೂಪಕಿ ಯಕ್ಷಗಾನ ಕಲಾವಿದೆ ಕುಮಾರಿ ವಾರುಣಿ ನಾಗರಾಜ್ ಮಂಗಳಾದೇವಿ, ಸಾಹಿತಿ ಸಮಾಜಸೇವಕಿ ಕಸ್ತೂರಿ ರಾಮಚಂದ್ರ ಆಚಾರ್ಯ ಪಡುಬಿದ್ರೆ ಅವರುಗಳನ್ನು ಗೌರವಿಸಿ ಸನ್ಮಾನಿಸಲಾಯಿತು.
