
ಸುರತ್ಕಲ್: ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ಕಾಟಿಪಳ್ಳ ಮತ್ತು ಗುಳಿಗ ಪಂಜುರ್ಲಿ ದೈವಸ್ಥಾನ ಬೊಳ್ಳಾಜೆ ಪಡೀಲು ಹಾಗೂ ಎಂ,ಅರ್,ಪಿ,ಎಲ್ ಸಂಸ್ಥೆಯ ಸಹಯೋಗದಲ್ಲಿ ಬೊಳ್ಳಾಜೆ ಪಡೀಲು ದೈವಸ್ಥಾನದ ವಠಾರದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು.

ಎಂ,ಅರ್,ಪಿ,ಎಲ್ ಎಚ್ ಎಸ್ ಸಿ ವಿಭಾಗದ ಅಧಿಕಾರಿ ಹಿತಾ ಶರತ್ ಶೆಟ್ಟಿ, ದೈವಸ್ಥಾನದ ಗೌರವಾಧ್ಯಕ್ಷ ಮಹಾಬಲ ಮೂಲ್ಯ, ಅಧ್ಯಕ್ಷ ಜಯಂತ್ ಪಡೀಲು, ಪುರುಷೋತ್ತಮ ಬೊಳ್ಳಾಜೆ ಪಡೀಲು,ತುಕರಾಮ ಮೂಲ್ಯ, ಮಾಜಿ ಮನಪಾ ಸದಸ್ಯರಾದ ಲೋಕೇಶ್ ಬೊಳ್ಳಾಜೆ ,ಅಭ್ಯುದಯ ಸೇವಾ ಟ್ರಸ್ಟ್ ಕಾರ್ಯದರ್ಶಿ ಚಕ್ರೇಶ್ ಅಮೀನ್ ಉಪಸ್ಥಿತರಿದ್ದರು