“ಸುರತ್ಕಲ್ ಲಯನ್ಸ್ ಕ್ಲಬ್ ಸಮಾಜಕ್ಕೆ ಮಾದರಿ“ -ಕುಡ್ಪಿ ಅರವಿಂದ್ ಶೆಣೈ


ಸುರತ್ಕಲ್:
ಸುರತ್ಕಲ್ ಲಯನ್ಸ್ ಕ್ಲಬ್ ನಿರಂತರವಾಗಿ ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡು ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಲಯನ್ಸ್ ಜಿಲ್ಲೆ 317D ಇದರ ಜಿಲ್ಲಾ ಗವರ್ನರ್ ಕುಡ್ಪಿ ಅರವಿಂದ್ ಶೆಣೈ ನುಡಿದರು. ಅವರು ಸುರತ್ಕಲ್ ಲಯನ್ಸ್ ಕ್ಲಬ್ ವತಿಯಿಂದ ಸೂರಿಂಜೆ ಬೋರ್ ಕಟ್ಟೆಯಲ್ಲಿ ನಿರ್ಮಾಣವಾದ ಸಾರ್ವಜನಿಕ ಬಸ್ ತಂಗುದಾಣ ಉದ್ಘಾಟಿಸಿ ಮಾತನಾಡಿದರು.
ಸುರತ್ಕಲ್ ಲಯನ್ಸ್ ಕ್ಲಬ್ ನ 10ನೇ ಶಾಶ್ವತ ಯೋಜನೆಯಾಗಿದ್ದು ಇದಕ್ಕೆ ಅಭಿನಂದನೆ ಸಲ್ಲಿಸಿದರಲ್ಲದೆ ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಂಡು ಸ್ವಚ್ಚತೆಯನ್ನು ನಿರಂತರವಾಗಿ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ಪೆರ್ಮುದೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್ ರಾಥೋಡ್,ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಈಶ್ವರ್ ಕಟೀಲು, ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯರಾದ ಶಶಿಕಲಾ ಶೆಟ್ಟಿ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗುರುರಾಜ್, ಉದ್ಯಮಿ ಅಭಿಲಾಷ್ ಶೆಟ್ಟಿ ಕಟೀಲು, ಕೆಂಚನೂರು ಬಾಲಕೃಷ್ಣ ಶೆಟ್ಟಿ, ಮನೋಹರ ಶೆಟ್ಟಿ ಸೂರಿಂಜೆ, ಜಯಪ್ರಕಾಶ್ ಸೂರಿಂಜೆ, ಮೈಮೂನಾ ಮೊಯಿದಿನ್, ಮೊಯಿದಿನ್ ಕುಂಞ, ಯತಿರಾಜ್ ಸಾಲ್ಯಾನ್, ಜಯಂತ ಶೆಟ್ಟಿ, ಜಯೇಶ್ ಗೋವಿಂದ್, ರಾಧಿಕಾ ಸೀತಾರಾಮು, ಅಮೃತರಾವ್, ಮನೀಷ್ ಕುಮಾರ್, ಚಂದ್ರಹಾಸ್ ರೈ, ಸುಕೇಶ್ ಶೆಟ್ಟಿ ಬೈಲಗುತ್ತು, ಧನಂಜಯ ಶೆಟ್ಟಿ ಬೊಳ್ಳಾರುಗುತ್ತು, ಶಶಿಧರ ಶೆಟ್ಟಿ ಸೂರಿಂಜೆ, ಪುಷ್ಷರಾಜ್ ಶೆಟ್ಟಿ ಮಧ್ಯ, ಜಯಶೀಲ ಸೂರಿಂಜೆ, ಸರಳ ಬಾಲಕೃಷ್ಣ ಶೆಟ್ಟಿ, ಪಾರ್ವತಿ ಕೋಟೆ, ಕೇಶವ ಕರ್ಕೇರ, ಸುಜೀರ್ ಶೆಟ್ಟಿ ಸೂರಿಂಜೆ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರತ್ಕಲ್ ಲಯನ್ಸ್ ಕ್ಲಬ್ ಅಧ್ಯಕ್ಷೆ ಶಶಿಕಲಾ ಶೆಟ್ಟಿ ವಹಿಸಿದ್ದರು.

error: Content is protected !!