
ಮಂಗಳೂರು: ಬೆಂಗಳೂರು ಮೂಲದ ಡಿಸೆಬಿಲಿಟಿ ಎನ್‌ಜಿಒ ಅಲಯನ್ಸ್ (DNA), ಮಾಯಾ – ಪೇರೆಂಟ್ಸ್ ಫಾರ್ ಇನ್‌ಕ್ಯೂಸಿವ್ ಡೆವಲಪ್‌ಮೆಂಟ್, ಹಾಗೂ ಮಂಗಳೂರಿನ ಅರಿವು ಅರ್ಲಿ ಇಂಟರ್ವೆನ್ ಸೆಂಟರ್, ಲಯನ್ಸ್ ಕ್ಲಬ್ ಅಶೋಕನಗರ ಚಾರಿಟೇಬಲ್ ಟ್ರಸ್ಟ್ (ರಿ.) ಮತ್ತು ಲಯನ್ಸ್ ಕ್ಲಬ್ ಮಂಗಳೂರು ಅಶೋಕನಗರ ಸಹಯೋಗದಲ್ಲಿ “ಡಿಎನ್‌ಎ ಕರಾವಳಿ ಧ್ವನಿ” ಎಂಬ ಒಂದು ದಿನದ ಜಾಗೃತಿ ಮತ್ತು ಸಂವಾದ ಕಾರ್ಯಕ್ರಮವನ್ನು ಆಯೋಜಿಸಿವೆ.
ಈ ಕಾರ್ಯಕ್ರಮವು 2026ರ ಜೂನ್ 23ರಂದು (ಮಂಗಳವಾರ) ಬೆಳಿಗ್ಗೆ 8.30ರಿಂದ ಸಂಜೆ 4.00 ಗಂಟೆಯವರೆಗೆ ಮಂಗಳೂರಿನ ಕದ್ರಿಯ ಸರ್ಕ್ಯೂಟ್ ಹೌಸ್ ಸಮೀಪದ ಲಯನ್ಸ್ ಅಶೋಕ ಸೇವಾ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ.ಖಾದರ್ ಫರೀದ್ ಉದ್ಘಾಟಿಸಲಿದ್ದಾರೆ. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಗೌರವಾನ್ವಿತ ಡಿ. ವೇದವ್ಯಾಸ ಕಾಮತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ ಡಾ. ನವೀನ್ ಶೆಟ್ಟಿ ಕೆ., ಅಧ್ಯಕ್ಷರು, ಲಯನ್ಸ್ ಕ್ಲಬ್ ಅಶೋಕನಗರ ಚಾರಿಟೇಬಲ್ ಟ್ರಸ್ಟ್ (ರಿ.) ಹಾಗೂ ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ, ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಆರೋಗ್ಯ, ಶಿಕ್ಷಣ, ಅಂಗವೈಕಲ್ಯ ಕಲ್ಯಾಣ, ಮಕ್ಕಳ ಅಭಿವೃದ್ಧಿ, ಆಡಳಿತ ಮತ್ತು ಸಮಾಜಸೇವಾ ಕ್ಷೇತ್ರಗಳ ಗಣ್ಯರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅವರಲ್ಲಿ ಲಯನ್ ಕುಡ್ಪಿ ಅರವಿಂದ್ ಶೆಣೈ, ಜಿಲ್ಲಾ ಗವರ್ನರ್, ಲಯನ್ಸ್ ಜಿಲ್ಲೆ 317D; ಲಯನ್ ಪ್ರಶಾಂತ್ ಬಿ. ಶೆಟ್ಟಿ, ಅಧ್ಯಕ್ಷರು, ಲಯನ್ಸ್ ಕ್ಲಬ್ ಮಂಗಳೂರು ಅಶೋಕನಗರ; ವಿ.ಎಸ್. ಬಸವರಾಜು, ಮಾಜಿ ಅಂಗವೈಕಲ್ಯ ಆಯುಕ್ತರು ಹಾಗೂ ಮಾಯಾ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ; ವಿನಾಯಕ ನರ್ವಾಡೆ, ಐಎಎಸ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್; ಮನೀಶ್ ನಾಯಕ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ; ಡಾ. ತಿಮ್ಮಯ್ಯ, ಜಿಲ್ಲಾ ಆರೋಗ್ಯಾಧಿಕಾರಿ; ಡಾ. ಶಿವಪ್ರಕಾಶ್, ವೆನ್‌ಲಾಕ್ ಆಸ್ಪತ್ರೆಯ ಡಿಎಸ್/ಎಂಎಸ್; ಶಶಿಧರ್ ಜಿ.ಎಸ್., ಡಿಡಿಪಿಐ; ಡಾ. ಗಣಪತಿ ಪಿ., ವೈದ್ಯಕೀಯ ನಿರ್ದೇಶಕರು, ಮಂಗಲ ಆಸ್ಪತ್ರೆ ಮತ್ತು ಕಿಡ್ನಿ ಫೌಂಡೇಶನ್; ಉಸ್ಮಾನ್, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ; ಡಾ. ರಾಜೇಂದ್ರ ಪ್ರಸಾದ್; ಡಾ.ಸಂತೋಷ್ ಸೋನ್ಸ್, ಮಕ್ಕಳ ವಿಭಾಗದ ಮುಖ್ಯಸ್ಥರು, ಎ.ಜೆ. ವೈದ್ಯಕೀಯ ಕಾಲೇಜು; ಡಾ. ಶ್ಯಾಮ್ ಎಸ್. ಭಟ್, ಡೀನ್, ಯೆನೆಪೊಯ ದಂತ ಕಾಲೇಜು; ಹಾಗೂ ಶ್ವೇತಾ, ಸಿಡಿಪಿಒ ಉಪಸ್ಥಿತರಿರುತ್ತಾರೆ.
ಅಂಗವೈಕಲ್ಯ ಹಕ್ಕುಗಳು, ಶೀಘ್ರ ಗುರುತಿಸುವಿಕೆ ಮತ್ತು ಮಧ್ಯಸ್ಥಿಕೆ, ಸಮಗ್ರ ಶಿಕ್ಷಣ, ಆರೋಗ್ಯ ಸೇವೆಗಳು ಹಾಗೂ ಸಮುದಾಯದ ಭಾಗವಹಿಸುವಿಕೆ ಕುರಿತು ಅರಿವು ಮೂಡಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಪೋಷಕರು, ಶಿಕ್ಷಕರು, ವೈದ್ಯರು, ಸಮಾಜಸೇವಕರು, ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಈ ಮಹತ್ವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳ ಸಬಲೀಕರಣ ಮತ್ತು ಸಮಗ್ರ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವಂತೆ ಸಂಘಟಕರು ಸಾರ್ವಜನಿಕರನ್ನು ಆಹ್ವಾನಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ: ಪೂರ್ಣಿಮಾ ಭಟ್ ಸ್ಥಾಪಕ ನಿರ್ದೇಶಕಿ, ಅರಿವು ಅರ್ಲಿ ಇಂಟರ್ವೆನ್ನನ್ ಸೆಂಟರ್ ಡಿಎನ್‌ಎ ಕಾರ್ಯಕಾರಿ ಸಮಿತಿ ಸದಸ್ಯೆ ಅವರನ್ನು 8971237669 ಸಂಪರ್ಕಿಸಬಹುದಾಗಿದೆ.