
ಬಜ್ಪೆ: ಹಣ ಕದ್ದಿರುವ ಆರೋಪದಲ್ಲಿ ವ್ಯಕ್ತಿಯೊಬ್ಬ ತನ್ನ ಸಹೋದರನ ಮಗಳ ಮೇಲೆಯೇ ರಾಕ್ಷಸಿ ಕೃತ್ಯ ಮೆರೆದ ಘಟನೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕುಪ್ಪೆಪದವು ಕಿಲೆಂಜಾರು ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ. ಮರದ ಒಣಕೆಯಿಂದ ಗಂಭೀರ ಹಲ್ಲೆ ನಡೆಸಿರುವ ಪರಿಣಾಮ ಯುವತಿ ಆಸ್ಪತ್ರೆಗೆ ದಾಖಲಾಗಿದ್ದಾಳೆ.
ಕುಪ್ಪೆಪದವು ಕಿಲೆಂಜಾರು ಹೊಸಮನೆ ನಿವಾಸಿ ಮೈಸೀನ್ (29) ಹಲ್ಲೆಗೊಳಗಾದವರು ಎಂದು ತಿಳಿದು ಬಂದಿದ್ದು, ನೆರೆಮನೆಯಲ್ಲಿ ವಾಸವಿರುವ ಆಕೆಯ ಚಿಕ್ಕಪ್ಪ ಬಶೀರ್ ಗಂಭೀರ ಹಲ್ಲೆನಡೆಸಿದ ಆರೋಪಿಯಾಗಿದ್ದಾನೆ.

ಮೈಸೀನ್ ಅವರ ನೆರೆಯ ಮನೆಯಲ್ಲಿ ವಾಸವಾಗಿರುವ ಅವರ ಚಿಕ್ಕಪ್ಪ ಬಶೀರ್ ಎಂಬವರು ಅವರ ಮನೆಯಲ್ಲಿ ಹಣ ಕಳೆದು ಹೋದ ಬಗ್ಗೆ ಬುಧವಾರ ರಾತ್ರಿ 9:30ರ ಸುಮಾರಿಗೆ ಸಂತ್ರ್ತರ ಮನೆಗೆ ಬಂದು ವಿಚಾರಿಸಿದ್ದಾರೆ. ಹಣ ಕಳೆದುಹೋಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ. ಇದರಿಂದ ಆಕ್ರೋಶಗೊಂಡ ಆರೋಪಿ ಬಶೀರ್ ಒಣಕೆಯಿಂದ ಗಂಭೀರ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಂತ್ರಸ್ತೆಯ ಎಡಕೋಲು ಕಾಲಿನ ಹಿಂಭಾಗ ಮತ್ತು ಬೆನ್ನಿನ ಮಧ್ಯೆ ಭಾಗಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿದೆ.