
ಸುರತ್ಕಲ್: ಪೊಲೀಸ್ ಠಾಣಾ ವ್ಯಾಪ್ತಿಯ ತಡಂಬೈಲ್ ಎಂಬಲ್ಲಿ ತಡರಾತ್ರಿ ನಡೆದ ಸರಣಿ ಅಪಘಾತದಲ್ಲಿ ಹಲವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ದುರ್ಗಾಂಭ ಸಂಸ್ಥೆಗೆ ಸೇರಿದ ಸ್ಲೀಪರ್ ಬಸ್ ಕಾರ್ ಹಿಂಭಾಗಕ್ಕೆ ದಿಕ್ಕಿಯಾದ ಪರಿಣಾಮ ಕಾರ್ ನಜ್ಜುಗುಜ್ಜಾಗಿದೆ. ಇನ್ನೊಂದು ಕಾರ್ ಕೂಡಾ ಅಪಘಾತಕ್ಕೆ ತುತ್ತಾಗಿದೆ. ಗಾಯಾಳುಗಳ ಮಾಹಿತಿ ಲಭ್ಯವಾಗಿಲ್ಲ. ಸುರತ್ಕಲ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



