
ಬಂಟ್ವಾಳ: ತಾ.14 ರಂದು 2026-28 ರ ಸಾಲಿನ ಸಂಘದ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ದ್ವಿತೀಯ ಬಾರಿಗೆ ಆಯ್ಕೆಯಾದ ಬಿ.ರಮೇಶ್ ಸಾಲಿಯಾನ್ ಸಂಚಯಗಿರಿ, ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಸತೀಶ್ ಸಂಪಾಜೆ, ಉಪಾಧ್ಯಕ್ಷ ರಾಗಿ ಗಣೇಶ್ ಮರ್ದೋಳಿ ಜೊತೆ ಕಾರ್ಯದರ್ಶಿಗಳಾಗಿ ಜಯಂತ್ ವಗ್ಗ ಹಾಗೂ ಪ್ರೇಮಾ ಜನಾರ್ಧನ್ ಪೊಸಳ್ಳಿ, ತೃತೀಯ ಬಾರಿಗೆ ಆಯ್ಕೆಯಾದ ಕೋಶಾಧಿಕಾರಿ ಸೋಮನಾಥ್ ಸಾಲಿಯಾನ್, ಸಂಘಟನಾ ಕಾರ್ಯದರ್ಶಿ ಆಶಾ ಗಿರಿಧರ್ , ಸೇವಾ ದಳಪತಿ ಚಂದ್ರ ಶೇಖರ್, ಮಹಿಳಾ ಸಂಘದ ಅಧ್ಯಕ್ಷೆ ಯಾಗಿ ವಾರಿಜಾ ಚೇತನ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಮಚ್ಚೇಂದ್ರ ಸಾಲಿಯಾನ್, ಮತಿ ಜಲಜಾಕ್ಷಿ ಕುಲಾಲ್, ಜನಾರ್ಧನ ಬೊಂಡಾಲ, ರಮೇಶ್ ಸಾಲಿಯಾನ್ ಗುರುಕೃಪಾ, ಮಾಧವ ಕುಲಾಲ್ ಬಿ.ಸಿ ರೋಡ್, ಕವಿತಾ ಯಾದವ್ ಅಗ್ರಬೈಲ್, ಸುರೇಶ್ ಕುಲಾಲ್ ಬಂಟ್ವಾಳ ಇವರ ಆಯ್ಕೆ ಪ್ರಕ್ರಿಯೆ ನಡೆಯಿತು.
ಗೌರವ ಸಲಹೆಗಾರರಾಗಿ ಮಚ್ಚೇಂದ್ರ ಸಾಲ್ಯಾನ್ , ಮಾಧವ ಕುಲಾಲ್ ಬಿ.ಸಿ.ರೋಡ್, ಜಲಜಾಕ್ಷಿ ಕುಲಾಲ್ ಸಹಕರಿಸಿದರು.
ಸರ್ಕಾರದ ಅನುದಾನವನ್ನು ತರುವಲ್ಲಿ ಶ್ರಮವಹಿಸಿದ ಕಟ್ಟಡ ಸಮಿತಿಯ ಅಧ್ಯಕ್ಷರಾದ ಸುರೇಶ್ ಕುಮಾರ್ ನಾವೂರರಿಗೆ ಈ ಸಭೆಯಲ್ಲಿ ಹೂ ಗುಚ್ಛ ನೀಡಿ ಅಭಿನಂದಿಸಲಾಯಿತು. ಸಭೆಯ ಬಳಿಕ ಜಯಂತ ಕುಲಾಲ್ ವಗ್ಗ ಧನ್ಯವಾದ ನೀಡಿದರು.
